ಕೇಂದ್ರ ಮಂತ್ರಿ ಮಂಡಲ (Union Cabinet) ಬುಧವಾರ ಕಬ್ಬು ಬೆಳೆಗಾರರಿಗೆ ನೀಡುವ ನ್ಯಾಯಯುತ ಬೆಲೆ ಮತ್ತು ಲಾಭಯುತ ಬೆಲೆಯನ್ನು (Fair and Remunerative Price for Sugarcane Farmers) ಏರಿಸಲು ಅನುಮತಿ ನೀಡಿದೆ. ಈ ಮೂಲಕ ದೇಶಾದ್ಯಂತ ಇರುವ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿಯನ್ನು ಕೇಂದ್ರ ನೀಡಿದೆ. ಮುಂದಿನ ವ್ಯಾವಹಾರಿಕ ವರ್ದದವರೆಗೆ ರೂ 5 ರಿಂದ ರೂ 290ಕ್ಕೆ ನ್ಯಾಯಬೆಲೆಯನ್ನು ಏರಿಕೆ ಮಾಡಿ ಕೇಂದ್ರ ಕಬ್ಬು ಬೆಳೆಗಾರರಿಗೆ ಭರ್ಜರಿ ಕೊಡುಗೆ ನೀಡಿದೆ. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಮೊತ್ತದ ಏರಿಕೆಯನ್ನು ಕಬ್ಬು ಬೆಳೆಗಾರರಿಗೆ ನೀಡಲಾಗುತ್ತಿದೆ. ಕೇಂದ್ರ ಸಚಿವ ಪೀಯುಶ್ ಗೋಯಲ್ (Union Minister Piyush Goyal) ಈ ಬಗ್ಗೆ ಮಾತನಾಡಿ ಒಟ್ಟೂ 5 ಕೋಟಿ ಕಬ್ಬು ಬೆಳೆಗಾರರಿಗೆ ಮತ್ತು ಅವರ ಕುಟುಂಬಗಳಿಗೆ ಎಫ್ಆರ್ಪಿ ಹೆಚ್ಚಳ ಲಾಭ ತಂದುಕೊಡಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜತೆಗೆ ಈ ಏರಿಕೆಯಿಂದ, ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು ಐದು ಲಕ್ಷಕ್ಕೂ ಅಧಿಕ ಕೆಲಸಗಾರರಿಗೂ ಸಹಕಾರಿಯಾಗಲಿದೆ ಎಂದರು.
ಕಬ್ಬು ಬೆಳೆಗಾರರ ಆರ್ಥಿಕ ವ್ಯಾವಹಾರಿಕ ವರ್ಷ ಆರಭವಾಗುವುದು ಅಕ್ಟೋಬರ್ ತಿಂಗಳಿನಲ್ಲಿ. ಸೆಪ್ಟೆಂಬರ್ ತಿಂಗಳಿನಲ್ಲಿ ನ್ಯಾಯಬೆಲೆ ಏರಿಕೆಗೆ ಅನುಮೋದನೆ ನೀಡಿರುವುದರಿಂದ, ಆರ್ಥಿಕ ವರ್ಷದ ಆರಂಭದಿಂದಲೇ ಕಬ್ಬು ಬೆಳೆಗಾರರಿಗೆ ಅಧಿಕ ಲಾಭ ಸಿಗಲಿದೆ. ಎಫ್ಆರ್ಪಿ ಬೆಲೆ ಏರಿಕೆ ನಿರ್ಧಾರವನ್ನು ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಮಂತ್ರಿ ಮಂಡಲ ಸಮಿತಿಯಲ್ಲಿ ಅನುಮೋದನೆ ಮಾಡಲಾಗಿದೆ.
FRB ಕಾರ್ಯನಿರ್ವಹಿಸುತ್ತದೆ?:
ನ್ಯಾಯಬೆಲೆ ಏರಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ ಗೋಯಲ್, "ಹೊಸ ಬೆಲೆಯು ಶೇಕಡಾ 10 ರಷ್ಟು ಚೇತರಿಕೆಯ ಆಧಾರದ ಮೇಲೆ ಇರುತ್ತದೆ. ಒಬ್ಬ ರೈತ 9.5% ಕ್ಕಿಂತ ಕಡಿಮೆ ಚೇತರಿಕೆ ಹೊಂದಿದ್ದರೂ, ಅವರ ನ್ಯಾಯಯುತ ಮತ್ತು ಸಂಭಾವನೆಯ ಬೆಲೆ ಪ್ರತಿ ಕ್ವಿಂಟಾಲ್ಗೆ 275 ರೂಪಾಯಿಗಳು. ಸುಧಾರಿತ ತಂತ್ರಜ್ಞಾನವನ್ನು ಬಳಸಿ, ನಮ್ಮ ರೈತರು ಚೇತರಿಸಿಕೊಂಡಿದ್ದಾರೆ, ಎಂದರು.
ಚೇತರಿಕೆ ದೇಶಾದ್ಯಂತ ಅತ್ಯುತ್ತಮವಾಗಿ ಆಗುತ್ತಿದೆ. ಕಬ್ಬಿನಿಂದ ಸಕ್ಕರೆ ಉತ್ಪಾನೆಯ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಮತ್ತು ಸುಮಾರು 70 ಲಕ್ಷ ಟನ್ಗಳಷ್ಟು ಸಕ್ಕರೆಯನ್ನು ಹೊರ ದೇಶಗಳಿಗೆ ರಫ್ತು ಮಾಡಲಾಗಿದೆ, ಎಂದು ಗೋಯಲ್ ತಿಳಿಸಿದರು.
ಇದನ್ನೂ ಓದಿ: ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಹೊಸ ತಂಡ: ಧರ್ಮೇಂದ್ರ ಪ್ರಧಾನ್ ಉ.ಪ್ರ. ಜೋಶಿ ಉತ್ತರಾಖಂಡದ ಉಸ್ತುವಾರಿ
ಕಬ್ಬು (ನಿಯಂತ್ರಣ) ಆದೇಶ, 1966 ರ ಅಡಿಯಲ್ಲಿ ಪರಿಚಯಿಸಲಾದ ಎಫ್ಆರ್ಪಿ ಸಕ್ಕರೆ ಕಾರ್ಖಾನೆಗಳು ಕಬ್ಬು ರೈತರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆಯಾಗಿದೆ. ಎಫ್ಆರ್ಪಿ ಗಣನೀಯ ಉತ್ಪಾದನೆ, ಬೇಡಿಕೆ ಮತ್ತು ಪೂರೈಕೆ, ಸಕ್ಕರೆ ಬೆಲೆ ಮತ್ತು ಅಂತಾರಾಷ್ಟ್ರೀಯ ಬೆಲೆಯ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ; ಶಬರಿಮಲೆ ದರ್ಶನಕ್ಕೆ ಇಂದಿನಿಂದ ಆನ್ಲೈನ್ ಬುಕ್ಕಿಂಗ್
ಕೇಂದ್ರ ಸರ್ಕಾರವು ಕಬ್ಬು ಬೆಳೆಗಾರರಿಗೆ ಕೊಡುವ ಕನಿಷ್ಠ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳು ಕೊನೆಯದಾಗಿ ಆಗಸ್ಟ್ 2020 ರಲ್ಲಿ ಹೆಚ್ಚಿಸಿತ್ತು. ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು 2020-21 ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಾಲ್ಗೆ ₹ 10 ರಿಂದ ₹ 285 ಕ್ಕೆ ಏರಿಸಲಾಗಿದೆ.
ಹೆಚ್ಚು ಕಬ್ಬು ಬೆಳೆಯುವ ರಾಜ್ಯ:
ಪ್ರಮುಖವಾಗಿ ಕಬ್ಬು ಉತ್ಪಾದಿಸುವ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣಗಳು ತಮ್ಮದೇ ಆದ ಕಬ್ಬಿನ ಬೆಲೆಯನ್ನು 'ರಾಜ್ಯ ಸಲಹಾ ಬೆಲೆಗಳು' (ಎಸ್ಎಪಿ) ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಕೇಂದ್ರದ ಎಫ್ಆರ್ಪಿಗಿಂತ ಹೆಚ್ಚಾಗಿದೆ. ಕರ್ನಾಟಕ ರಾಜ್ಯ ಕೂಡ ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣೆಯಲ್ಲಿದ್ದು ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಮೊತ್ತಕ್ಕಾಗಿ ಅಂಗಲಾಚುತ್ತಾರೆ. ಸರ್ಕಾರ ಭರವಸೆಯನ್ನು ಕೊಡುತ್ತದಾದರೂ ಕಾರ್ಯರೂಪಕ್ಕೆ ಮಾತ್ರ ಬರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ