ICAI CA Exams 2021: ಜುಲೈ ತಿಂಗಳ CA ಪರೀಕ್ಷೆ ಅಡ್ಮಿಟ್ ಕಾರ್ಡ್ ಬಿಡುಗಡೆ; ಡೌನ್​ಲೋಡ್ ಮಾಡುವುದು ಹೀಗೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ICAI CA Exams 2021: ಈ ವರ್ಷ ಐಸಿಎಐ CA 2021 ಪರೀಕ್ಷೆಗಳು ಜುಲೈ 5ರಿಂದ ನಡೆಯಲಿದೆ. ಈ ಹಿನ್ನೆಲೆ ICAI ಸಿಎ ಪರೀಕ್ಷೆಗಳಿಗೆ ಸಿಎ 2021 ಫೌಂಡೇಶನ್ ಪ್ರವೇಶ ಪತ್ರಗಳನ್ನು ತನ್ನ ಅಧಿಕೃತ ಪೋರ್ಟಲ್‌ನಲ್ಲಿ ಬಿಡುಗಡೆ ಮಾಡಿದೆ.

  • Share this:

ಸಿಎ ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಪ್ರತಿ ವರ್ಷವೂ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) Institute of Chartered Accountants of India (ICAI) ಸಿಎ ಪರೀಕ್ಷೆಗಳನ್ನು ನಡೆಸುತ್ತದೆ. ಇದೇ ರೀತಿ, ಈ ವರ್ಷವೂ ಐಸಿಎಐ CA 2021 ಪರೀಕ್ಷೆಗಳು ಜುಲೈ 5ರಿಂದ ನಡೆಯಲಿದೆ. ಈ ಹಿನ್ನೆಲೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸಿಎ ಪರೀಕ್ಷೆಗಳಿಗೆ ಸಿಎ 2021 ಫೌಂಡೇಶನ್ ಪ್ರವೇಶ ಪತ್ರಗಳನ್ನು ತನ್ನ ಅಧಿಕೃತ ಪೋರ್ಟಲ್‌ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ನೋಂದಾಯಿತ ಲಾಗಿನ್ ಐಡಿ, ಪಾಸ್‌ವರ್ಡ್ ಮತ್ತು ಅಗತ್ಯವಿರುವ ಇತರ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಸಿಎ ಫೌಂಡೇಶನ್, ಸಿಎ ಇಂಟರ್ ಮತ್ತು ಸಿಎ ಅಂತಿಮ ಪರೀಕ್ಷೆಗಳ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.


“ಫೌಂಡೇಶನ್, ಇಂಟರ್‌ಮೀಡಿಯೆಟ್‌ (ಐಪಿಸಿ), ಇಂಟರ್ಮೀಡಿಯೆಟ್‌, ಫೈನಲ್ ಮತ್ತು ಫೈನಲ್-ನ್ಯೂ ಪರೀಕ್ಷೆಗೆ ಪ್ರವೇಶ ಪಡೆದ ಅಭ್ಯರ್ಥಿಗಳ ಫೋಟೋಗ್ರಾಫ್‌ಗಳು ಮತ್ತು ಸಹಿಗಳೊಂದಿಗೆ ಪ್ರವೇಶ ಪತ್ರಗಳನ್ನು https://icaiexam.icai.org/ ನಲ್ಲಿ ಹೋಸ್ಟ್‌ ಮಾಡಲಾಗಿದೆ''. ಭೌತಿಕ ಪ್ರವೇಶ ಪತ್ರಗಳನ್ನು ಯಾವುದೇ ಅಭ್ಯರ್ಥಿಗೆ ಕಳುಹಿಸಲಾಗುವುದಿಲ್ಲ ಎಂದು ಐಸಿಎಐ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.


ಐಸಿಎಐ ಸಿಎ ಅಡ್ಮಿಟ್ ಕಾರ್ಡ್ 2021: ಡೌನ್‌ಲೋಡ್ ಮಾಡಲು ಹಲವು ಹಂತಗಳು ಹೀಗಿದೆ..
ಹಂತ 1: ಐಸಿಎಐನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ ಲಾಗಿನ್ / ರಿಜಿಸ್ಟರ್ ಟ್ಯಾಬ್ ಕ್ಲಿಕ್ ಮಾಡಿ
ಹಂತ 3: ನಿಗದಿತ ಸ್ಥಳಗಳಲ್ಲಿ ನಿಮ್ಮ ಲಾಗಿನ್ ಐಡಿ / ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ
ಹಂತ 4: ಐಸಿಎಐ ಸಿಎ ಜುಲೈ 2021 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 5: ಹಾಲ್ ಟಿಕೆಟ್ ಅನ್ನು ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾಗುತ್ತದೆ, ಭವಿಷ್ಯದ ಉಲ್ಲೇಖಕ್ಕಾಗಿ ಅಡ್ಮಿಟ್‌ ಕಾರ್ಡ್‌ ಅನ್ನು ಡೌನ್‌ಲೋಡ್ ಮಾಡಿ.


ಇದನ್ನೂ ಓದಿ: HD Deve Gowda: ನೈಸ್ ಕಂಪನಿ ಗೌರವಕ್ಕೆ ಧಕ್ಕೆ; ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರಿಗೆ 2 ಕೋಟಿ ರೂ. ದಂಡ!


ಪ್ರವೇಶ ಪತ್ರಗಳು ಅಭ್ಯರ್ಥಿಗಳ ವಿವರಗಳು, ರೋಲ್ ನಂಬರ್ ಮತ್ತು ಪರೀಕ್ಷಾ ಕೇಂದ್ರಗಳ ವಿವರಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಐಸಿಎಐ ಸಿಎ ಜುಲೈ 2021 ಹಾಲ್ ಟಿಕೆಟ್ ಮೂಲಕ ಹೋಗಿ ವಿವರಗಳನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಐಸಿಎಐ ಸಿಎ 2021 ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ರಿಪೋರ್ಟ್‌ ಮಾಡಿಕೊಳ್ಳುವ ಸಮಯ, ಪ್ರವೇಶ ಸಮಯ, ಪರೀಕ್ಷೆಯ ಸ್ಥಳ ಮತ್ತು ಇತರ ಪ್ರಮುಖ ಸೂಚನೆಗಳನ್ನು ಗಮನಿಸಬೇಕು. ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವಂತೆ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕಾಗುತ್ತದೆ. ಅವರು ವ್ಯಾಲಿಡ್‌ ಫೋಟೋ ಐಡಿ ಪ್ರೂಫ್, ಬಾಲ್ ಪಾಯಿಂಟ್ ಪೆನ್, ಪರ್ಸನಲ್ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಅನುಮತಿಸಲಾದ ಇತರ ಅಗತ್ಯ ವಸ್ತುಗಳ ಜೊತೆಗೆ ಅಡ್ಮಿಟ್ ಕಾರ್ಡ್‌ನ ಹಾರ್ಡ್‌ ಕಾಪಿಯನ್ನು ಹೊಂದಿರಬೇಕು.


ಆದರೆ, ಪರೀಕ್ಷಕರು ಯಾವುದೇ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿಲ್ಲ ಎಂಬುದನ್ನು ತಾವು ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ರೂಢಿಗಳನ್ನು ಮತ್ತು ಇತರ ಮಾರ್ಗಸೂಚಿಗಳನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಪರೀಕ್ಷೆ ಆರಂಭದಿಂದ ಅಂತ್ಯವಾಗುವವರೆಗೆ ಮಾಸ್ಕ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ನಿಮಗೂ ಸಿಎ ಆಗುವ ಆಕಾಂಕ್ಷೆ ಇದೆಯಾ..? ಪರೀಕ್ಷೆಯನ್ನೂ ಕಟ್ಟಿದ್ದೀರಾ..? ಹಾಗಾದ್ರೆ ಮತ್ಯಾಕೆ ತಡ.. ಪರೀಕ್ಷೆಯ ಹಾಲ್‌ ಟಿಕೆಟ್‌ ಅನ್ನು ಈಗಲೇ ಡೌನ್ಲೋಡ್‌ ಮಾಡಿಕೊಳ್ಳಿ. ICAI CA ಪರೀಕ್ಷೆಗೆ ನಿಮಗೆ ಆಲ್‌ ದಿ ಬೆಸ್ಟ್‌.


First published: