BYJU’S Young Genius ಸೀಸನ್ 2 ಮೂಲಕ News18 Networkನಿಂದ ಭಾರತದ ಮುಂದಿನ ಅದ್ಭುತ ಮಗುವಿಗೆ ಶೋಧ ಆರಂಭ

BYJU'S Young Genius ಮೂಲಕ Network18 ಭವಿಷ್ಯದ ಜೀನಿಯಸ್ಗಳಾಗುವ ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆಗಳನ್ನು ಶೋಧಿಸಿ, ಅವರಿಗೆ ಅನುಕೂಲ ಕಲ್ಪಿಸುವ ನಿರಂತರ ಗುರಿಯನ್ನು ಹೊಂದಿದೆ. ಈಗ ಎರಡನೇ ಸೀಸನ್ ಆರಂಭಗೊಂಡಿದೆ.

ಬೈಜೂಸ್

ಬೈಜೂಸ್

 • Share this:
  ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಚತುರರಾಗಬೇಕು ಎಂದು ತೀವ್ರವಾಗಿ ಅಂದುಕೊಂಡ ಒಂದು ಕ್ಷಣವನ್ನು ಹೊಂದಿರುತ್ತೇವೆ. ದೈನಂದಿನ ಜೀವನದಲ್ಲಿ ಯಾವುದಾದರೂ ವಿಧದಲ್ಲಿ ಪ್ರತಿಭಾವಂತರಾಗಿರುವುದು ಖಚಿತವಾಗಿಯೂ ಅನುಕೂಲಕರವಾದದ್ದು. ಜೀನಿಯಸ್ ಎಂಬ ವ್ಯಕ್ತಿ ಜನಿಸಿರುವುದಲ್ಲ, ನಿರ್ಮಿಸಿರುವುದು ಎಂಬ ಸತ್ಯವನ್ನು ತಿಳಿದುಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ. ಟಿವಿಯಲ್ಲಿ ನಮ್ಮ ನೆಚ್ಚಿನ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುವಾಗ, ಅವರು ಜೀನಿಯಸ್ ಆಗುವ ಮೊದಲು ಕಲೆಯ ಬಗೆಗೆ ಅವರಲ್ಲಿ ಇದ್ದ ತೀವ್ರವಾದ ಉತ್ಸಾಹ, ಹೋಲಿಸಲಾಗದ ತನ್ಮಯತೆ ಮತ್ತು ಹಲವಾರು ತಾಸುಗಳ ನಿರಂತರ ಅಭ್ಯಾಸವು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂಬುದನ್ನು ನಾವು ನೋಡಲು ಸಾಧ್ಯವಿಲ್ಲ.

  ಹಾಗಾದರೆ ನಿಜಕ್ಕೂ ಅದ್ಭುತವಾದ ಮಗು ಎಂಬುದನ್ನು ಯಾವುದು ವರ್ಣಿಸುತ್ತದೆ? ಅವರು ಬುದ್ಧಿಶಾಲಿಗಳು, ನಿರಂತರವಾಗಿ ಉತ್ತೇಜಿತರಾಗಿರುವವರು, ಅಸಾಮಾನ್ಯ ಆಸಕ್ತಿ ಉಳ್ಳವರು, ಅತ್ಯಂತ  ಕಲ್ಪನಾಶಾಲಿಗಳು, ಶೋಧಿಸುವ ಗುಣ ಹೊಂದಿರುವವರು ಮತ್ತು ನಿಶ್ಚಿತವಾಗಿಯೂ ಅಪಾಯಗಳಿಗೆ ಹೆದರದೆ ಇರುವವರಾಗಿರುತ್ತಾರೆ. ಕಳೆದ ವಾರ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅತ್ಯಂತ ಕಠಿಣ ಹಿನ್ನೆಲೆಯಿಂದ ಬಂದ ಪ್ರತಿಭಾವಂತ ಕ್ರೀಡಾಪಟುಗಳು ಅಂತರರಾಷ್ಟ್ರೀಯ ವೇದಿಕೆಯಲ್ಲಿ ತೋರಿದ ಅದ್ಭುತ ಪ್ರದರ್ಶನಗಳ ಸರಣಿಯನ್ನೇ ನಾವು ಸಾಕ್ಷೀಕರಿಸಿದ್ದೇವೆ. ಪುರುಷರ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಅದ್ಭುತ ಸ್ವರ್ಣ ಪದಕ ಜಯಿಸಿದ ನೀರಜ್ ಚೋಪ್ರಾ ಅವರ ಮಹತ್ವಾಕಾಂಕ್ಷೆಯು, ಅವರು ಹುಟ್ಟಿ ಬೆಳೆದ ಹರಿಯಾಣದ ಒಂದು ಪುಟ್ಟ ಹಳ್ಳಿಯ ಸಣ್ಣ ಮನೆಯಲ್ಲಿ ಚಿಗುರೊಡೆದಿತ್ತು. ಜೀವನದ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ, ಹಣಕಾಸಿನ ತೊಂದರೆಗಳನ್ನು ಮೀರಿ ಮತ್ತು ಸಾಕಷ್ಟು ಸೌಲಭ್ಯಗಳು ಇಲ್ಲದಿದ್ದರೂ ಅವರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿದರು. ವಿವಿಧ ಕ್ಷೇತ್ರಗಳಲ್ಲಿ ಇಂತಹ ಸಹಜ ಪ್ರತಿಭೆಯುಳ್ಳ ಯುವ ಪ್ರತಿಭೆಗಳನ್ನು ಬೇರುಮಟ್ಟದಲ್ಲೇ ಗುರುತಿಸಿ, ಸೂಕ್ತ ಮಾರ್ಗದರ್ಶನ ನೀಡಿ ಮತ್ತು ಅವರ ಪ್ರತಿಭೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶಿಸಲು ನಾವು ಸಂಪನ್ಮೂಲಗಳನ್ನು ಹೊಂದಿದ್ದರೆ ಅದರಿಂದ ಜಗತ್ತು ಅತಿ ಹೆಚ್ಚು ಪ್ರಯೋಜನ ಪಡೆಯುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

  ಭಾರತದ ಅತ್ಯಂತ ದೊಡ್ಡ ನೆಟ್‌ವರ್ಕ್, Network18, BYJU’S Young Genius ನೊಂದಿಗೆ ಅದನ್ನೇ ಮಾಡಲು ಸಿದ್ಧವಾಗಿದೆ. ಭವಿಷ್ಯದ ಜೀನಿಯಸ್‌ಗಳಾಗುವ ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆಗಳನ್ನು ಶೋಧಿಸಿ, ಅವರಿಗೆ ಅನುಕೂಲ ಕಲ್ಪಿಸುವ ನಿರಂತರ ಗುರಿಯನ್ನು ಹೊಂದಿರುವುದು ಈ ಉಪಕ್ರಮದ ಮುಖ್ಯ ಅಂಶ.

  News18 ಸಂಪಾದಕರು ಮತ್ತು ಶ್ರೇಷ್ಠ ವ್ಯಕ್ತಿಗಳು ಇದ್ದ ತೀರ್ಪುಗಾರರ ತಂಡ ಆಯ್ಕೆ ಮಾಡಿದ ಯುವ ಸಾಧಕರು ತಮ್ಮ ಕೌಶಲಗಳನ್ನು ಪ್ರದರ್ಶಿಸಿರುವುದನ್ನು ಸೀಸನ್ 1 ರಲ್ಲಿ ನೋಡಿದ್ದೇವೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರತಿ ನಿಮಿಷಕ್ಕೆ 190 ಬೀಟ್‌ಗಳ ವೇಗದಲ್ಲಿ ಪಿಯಾನೊ ನುಡಿಸಿದ ಲಿದಿಯನ್ ನಾದಸ್ವರಮ್ (15), ಮತ್ತು ವಿಸ್ಮಯವೆನಿಸುವ ಐಕ್ಯೂ ಹೊಂದಿರುವ, ‘ಗೂಗಲ್ ಗರ್ಲ್ ಆಫ್ ಇಂಡಿಯಾ’ ಎಂದೇ ಜನಪ್ರಿಯವಾಗಿರುವ ಮೇಘಾಲಿ ಮಲಾಬಿಕಾ (14) ಅವರಂತಹ ಸಹಜ ಪ್ರತಿಭೆಯುಳ್ಳ ಮಕ್ಕಳಿಂದ ಇದೆಲ್ಲವೂ ಪ್ರಾರಂಭವಾಯಿತು. ಮೆನ್ಸಾ ಸೊಸೈಟಿಯ ಸದಸ್ಯ, ಹಲವಾರು ಆಪ್‌ಗಳನ್ನು ಅಭಿವೃದ್ಧಿಪಡಿಸಿದ ಮತ್ತು ಒಂದು ಪುಸ್ತಕದ ಲೇಖಕ, ರಿಷಿ ಶಿವ್ ಪಿ (6) ನಂಬಲಸಾಧ್ಯವಾದ ಐಕ್ಯೂ 180 ಹೊಂದಿದ್ದಾರೆ! 6-ಅಂಕಿಗಳ ವರ್ಗಮೂಲವನ್ನು ಕಂಡಿಹಿಡಿಯಲು ಪ್ರಯತ್ನಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ವಿಶ್ವ ದಾಖಲೆಯನ್ನು ಅವಂತಿಕಾ ಕಾಂಬಳೆ (10) ಅವರು, ‘ಕಂಬಿಗಳ ಕೆಳಗಿನ ಲಿಂಬೊ ಸ್ಕೇಟಿಂಗ್‌ನಲ್ಲಿ ಅತಿ ಹೆಚ್ಚು ದೂರ’ ಕ್ರಮಿಸಿದ ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ ತಿಲಕ್ ಕೇಸಮ್ (13) ಅವರೊಂದಿಗೆ ಹೊಂದಿದ್ದಾರೆ. ಶಾಲೆಗಳು ಮತ್ತು ಕ್ಯಾಂಪಸ್‌ಗಳಲ್ಲಿ ಅರಿವು ಮೂಡಿಸುವ ಮತ್ತು ಬೆದರಿಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಅನೌಷ್ಕಾ ಜಾಲಿ (12), ಬೆದರಿಕೆ-ವಿರೋಧಿ ತಂಡ (ABS) ಎಂಬ ವೆಬ್ ವೇದಿಕೆಯನ್ನು ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಉದ್ಯಮಿ ಎನಿಸಿದ್ದಾರೆ.

  ಅಸಾಧಾರಣ ಪ್ರತಿಭೆಯುಳ್ಳ ಈ ಮಕ್ಕಳು ಭಾರತದ ಹಲವಾರು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ, ಸಾಮಾಜಿಕ ವೇದಿಕೆಗಳಲ್ಲಿ ಶೇಕಡಾ 98.4 ರಷ್ಟು ಸಕಾರಾತ್ಮಕ ಭಾವನೆಗಳಿವೆ ಮತ್ತು ಹೊಸ ಎಪಿಸೋಡ್‌ಗಳು ಬೇಕು ಎಂದು ದೇಶದಾದ್ಯಂತ ಇರುವ ವೀಕ್ಷಕರು ನಿರಂತರವಾದ ಬೇಡಿಕೆ ಇಟ್ಟಿದ್ದಾರೆ. ಮೊದಲ ಸೀಸನ್‌ನ ಅದ್ಭುತ ಯಶಸ್ಸಿನೊಂದಿಗೆ, News18 Network, ಅದ್ಭುತ ಮಕ್ಕಳ ಕಥೆಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸುವ ವಿಶ್ವಾಸದೊಂದಿಗೆ Young Genius ನ ಎರಡನೇ ಸೀಸನ್‌ನೊಂದಿಗೆ ಮತ್ತೆ ಬಂದಿದೆ. ಶೋ ದಲ್ಲಿ ಏನೆಲ್ಲಾ ಇರಲಿದೆ ಎಂಬುದು ಇಲ್ಲಿದೆ:

  Network18 ನ ಹಿರಿಯ ಸಂಪಾದಕರು ಮತ್ತು ನಿರೂಪಕರಾದ ಆನಂದ್ ನರಸಿಂಹನ್ ಅವರು ಹೋಸ್ಟ್ ಮಾಡಲಿರುವ ಕಾರ್ಯಕ್ರಮವು ಜನವರಿ 2022 ರಿಂದ ಪ್ರಾರಂಭವಾಗಲಿದೆ ಮತ್ತು 11 ಎಪಿಸೋಡ್‌ಗಳನ್ನು ಹೊಂದಿರಲಿದ್ದು, ವಿವಿಧ ಕ್ಷೇತ್ರಗಳಾದ ಪ್ರದರ್ಶನ ಕಲೆಗಳು, ಶೈಕ್ಷಣಿಕ, ತಂತ್ರಜ್ಞಾನ, ವ್ಯಾಪಾರ, ಕ್ರೀಡೆ ಮತ್ತು ಇನ್ನಷ್ಟು ಕ್ಷೇತ್ರಗಳ, 6 ರಿಂದ 15ರ ವಯೋಮಾನದ 20 ಯುವ ಪ್ರತಿಭಾನ್ವಿತರನ್ನು ಗೌರವಿಸಲಾಗುವುದು. ಯುವ ಜೀನಿಯಸ್‌ಗಳೊಂದಿಗೆ ಭಾರತದ ಹೆಚ್ಚು ಸಂಭ್ರಮಿಸುವ ಭಾರತೀಯ ವ್ಯಕ್ತಿಗಳು ಇರಲಿದ್ದು, ಅವರು ಮಕ್ಕಳ ಅಸಾಧಾರಣ ಪ್ರತಿಭೆಗಳಿಗೆ ಪ್ರಶಂಸೆ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಯಶಸ್ಸಿನೆಡೆಗೆ ನಡೆದ ತಮ್ಮ ಸ್ವಂತ ಅನುಭವವನ್ನೂ ಹಂಚಿಕೊಳ್ಳಲಿರುವುದರಿಂದ ಪ್ರತಿಯೊಂದು ಎಪಿಸೋಡ್ ಸಹ ಕುತೂಹಲಕಾರಿ ವೀಕ್ಷಣಾ ಅನುಭವವನ್ನು ನೀಡುತ್ತದೆ.

  ಇದು ನಿಮ್ಮ ಆಸಕ್ತಿಯನ್ನು ಕೆರಳಿಸಿದರೆ, https://www.news18.com/younggenius/ ಭೇಟಿ ನೀಡಿ ಮತ್ತು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ಈ ಪ್ರಾರಂಭಿಕ ಸಲ್ಲಿಕೆಯ ನಂತರ ಮಗುವಿನ ಬಹು-ಹಂತದ ಮೌಲ್ಯಮಾಪನ ಪ್ರಕ್ರಿಯೆಗಾಗಿ ಪ್ರತಿಯೊಂದು ವಿವರವನ್ನು ಒಳಗೊಂಡ ವಿವರವಾದ ಫಾರ್ಮ್ ತುಂಬಬೇಕಿರುತ್ತದೆ. ಇದಲ್ಲದೇ, ನೀವು BYJU’s ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು BYJU’s Young Genius ವಿಭಾಗದಲ್ಲಿ ನೋಂದಾಯಿಸಿಕೊಳ್ಳಬಹುದು.

  ನಿಮ್ಮ ಮಗುವಿನ ಪ್ರತಿಭೆಯನ್ನು ಶೋಧಿಸುವುದು ಹೇಗೆ ಎಂದು ತಿಳಿದುಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ, ಅವರನ್ನು ಅವರು ತೀವ್ರವಾಗಿ ಇಷ್ಟಪಟ್ಟಿರುವುದನ್ನು ಮಾಡುವುದಕ್ಕೆ ಮತ್ತು ಅದರಲ್ಲಿ ಪರಿಣತಿ ಸಾಧಿಸುವುದಕ್ಕೆ ಅನುಮತಿಸುವುದರಲ್ಲಿ ಆ ರಹಸ್ಯ ಅಡಗಿದೆ. ಈ ವಿಶಿಷ್ಟ ವೇದಿಕೆಯು ಕೆಲವು ಅದ್ಭುತ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಭವಿಷ್ಯದ ಪೀಳಿಗೆಯು ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಲು ಹಾಗೂ ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ ಯಶಸ್ಸು ಪಡೆಯಲು ಸಹಾಯ ಮಾಡುವ ಗುರಿಯೊಂದಿಗೆ ಸನ್ನದ್ಧವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಒಬ್ಬ ಜೀನಿಯಸ್ ನಿದ್ರಿಸುತ್ತಿದ್ದಾನೆ ಮತ್ತು Young Genius ಕಾರ್ಯಕ್ರಮದೊಂದಿಗೆ ದೇಶದಾದ್ಯಂತ ಇರುವ ಯುವ ಮನಸುಗಳನ್ನು ಜಾಗೃತಗೊಳಿಸಲು, ಪ್ರಕಾಶಮಾನವಾಗಿ ಹೊಳೆಯಲು ಅವರಿಗೆ ಅವಕಾಶ ನೀಡುವ ಮೂಲಕ  News 18 Network  ಸುವರ್ಣ ಅವಕಾಶವನ್ನು ಪ್ರಸ್ತುತಪಡಿಸುತ್ತಿದೆ.

  (ಗಮನಿಸಿ: ಇದೊಂದು ಮಾರ್ಕೆಟಿಂಗ್ ಪೋಸ್ಟ್ ಆಗಿದೆ)
  Published by:Vijayasarthy SN
  First published: