ಸೀಸನ್ 2ರ ನೋಂದಣಿಯಲ್ಲಿ ಅಭೂತಪೂರ್ವ ಸ್ಪಂದನೆ ಪಡೆದ BYJU’S Young Genius

ಭಾರತದ ಅತ್ಯಂತ ದೊಡ್ಡ ನ್ಯೂಸ್ ನೆಟ್‌ವರ್ಕ್ News 18, BYJU’S Young Geniusನೊಂದಿಗೆ ಪ್ರಾರಂಭಿಸಿತು ಮತ್ತು ಸಾಧಿಸಿತು. News18 ಸಂಪಾದಕರು ಮತ್ತು ಶ್ರೇಷ್ಠ ವ್ಯಕ್ತಿಗಳನ್ನು ಒಳಗೊಂಡ ಪ್ಯಾನೆಲ್ ಆಯ್ಕೆ ಮಾಡಿದ ಯುವ ಸಾಧಕರು ತಮ್ಮ ಕೌಶಲಗಳ ಪ್ರತಿಭಾ ಪ್ರದರ್ಶನವನ್ನು ಈ ಕಾರ್ಯಕ್ರಮವು ಕೇಂದ್ರೀಕರಿಸುತ್ತದೆ

Byju's Young Genius

Byju's Young Genius

 • Share this:
  ಸ್ಪರ್ಧಾವಿಜೇತರ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ, ಅದರಲ್ಲೂ ವಿಶೇಷವಾಗಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ ಮತ್ತು ಮೀರಾಬಾಯಿ ಚಾನು ಅದ್ಭುತ ಪ್ರದರ್ಶನ ನೀಡಿದ ನಂತರವಂತೂ ಇದು ಇನ್ನೂ ಹೆಚ್ಚಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಹಂತಗಳಿಂದ ಹಿಡಿದು, ಕ್ರಮವಾಗಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅವರು ಸ್ವರ್ಣ ಪದಕ ಮತ್ತು ಮೀರಾಬಾಯಿ ಚಾನು ಅವರು ವೇಯ್ಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ನಂತರ ಪ್ರದರ್ಶಿಸಿದ ಅಸಾಧಾರಣ ಸಾಮರ್ಥ್ಯ ಮತ್ತು ಸ್ಥಿತಪ್ರಜ್ಞತೆ, ವಿನಮ್ರತಾಭಾವವು ಬೃಹತ್ ವೇದಿಕೆ ತಲುಪುವವರೆಗೂ ಪ್ರತಿಭೆಯು ಹೇಗೆ ಅಡಗಿಕೊಂಡಿರುತ್ತದೆ ಎಂಬುದನ್ನು ಇಡೀ ದೇಶಕ್ಕೆ ಪರಿಚಯಿಸಿತು.

  ಅದನ್ನೇ, ಭಾರತದ ಅತ್ಯಂತ ದೊಡ್ಡ ನ್ಯೂಸ್ ನೆಟ್‌ವರ್ಕ್ News 18, BYJU’S Young Geniusನೊಂದಿಗೆ ಪ್ರಾರಂಭಿಸಿತು ಮತ್ತು ಸಾಧಿಸಿತು. News18 ಸಂಪಾದಕರು ಮತ್ತು ಶ್ರೇಷ್ಠ ವ್ಯಕ್ತಿಗಳನ್ನು ಒಳಗೊಂಡ ಪ್ಯಾನೆಲ್ ಆಯ್ಕೆ ಮಾಡಿದ ಯುವ ಸಾಧಕರು ತಮ್ಮ ಕೌಶಲಗಳ ಪ್ರತಿಭಾ ಪ್ರದರ್ಶನವನ್ನು ಈ ಕಾರ್ಯಕ್ರಮವು ಕೇಂದ್ರೀಕರಿಸುತ್ತದೆ.
  ಇದೀಗ, Young Geniusನ ಎರಡನೇ ಆವೃತ್ತಿಗೆ ನೋಂದಣಿ ಆರಂಭವಾಗಿದ್ದು, ಅತಿ ಹೆಚ್ಚಿನ ಸಂಖ್ಯೆ ಮತ್ತು ಅರ್ಜಿಗಳ ಗುಣಮಟ್ಟವು ದಿಗ್ಭ್ರಮೆಗೊಳಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಅದರ ಕುರಿತು ಮಾತನಾಡುವ ಮೊದಲು, BYJU’S Young Geniusನ ಮೊದಲ ಆವೃತ್ತಿಯಲ್ಲಿ ನಾವು ನೋಡಿದ ಅತ್ಯುತ್ತಮ ಸಂಗತಿಗಳನ್ನು ಒಮ್ಮೆ ನೆನಪಿಸಿಕೊಳ್ಳೋಣ.

  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರತಿ ನಿಮಿಷಕ್ಕೆ 190 ಬೀಟ್‌ಗಳ ವೇಗದಲ್ಲಿ ಪಿಯಾನೊ ನುಡಿಸಿದ ಲಿದಿಯನ್ ನಾದಸ್ವರಮ್ (15 ವರ್ಷ) , ಮತ್ತು ವಿಸ್ಮಯವೆನಿಸುವ ಐಕ್ಯೂ ಹೊಂದಿರುವ, ‘ಗೂಗಲ್ ಗರ್ಲ್ ಆಫ್ ಇಂಡಿಯಾ’ ಎಂದೇ ಜನಪ್ರಿಯವಾಗಿರುವ ಮೇಘಾಲಿ ಮಲಾಬಿಕಾ (14 ವರ್ಷ) ಅವರಂತಹ ಸಹಜ ಪ್ರತಿಭೆಯನ್ನು ಸೀಸನ್ 1 ಸಾಕ್ಷೀಕರಿಸಿತು. ಮೆನ್ಸಾ ಸೊಸೈಟಿಯ ಸದಸ್ಯ, ಹಲವಾರು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ ಮತ್ತು ಒಂದು ಪುಸ್ತಕದ ಲೇಖಕ, ರಿಷಿ ಶಿವ್ ಪಿ (6 ವರ್ಷ) ನಂಬಲಸಾಧ್ಯವಾದ ಐಕ್ಯೂ 180 ಹೊಂದಿದ್ದಾರೆ! 6-ಅಂಕಿಗಳ ವರ್ಗಮೂಲವನ್ನು ಕಂಡಿಹಿಡಿಯಲು ಪ್ರಯತ್ನಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ವಿಶ್ವ ದಾಖಲೆ ನಿರ್ಮಿಸಿದ ಅವಂತಿಕಾ ಕಾಂಬಳೆ (10 ವರ್ಷ), ‘ಕಂಬಿಗಳ ಕೆಳಗಿನ ಲಿಂಬೊ ಸ್ಕೇಟಿಂಗ್‌ನಲ್ಲಿ ಅತಿ ಹೆಚ್ಚು ದೂರ’ ಕ್ರಮಿಸಿದ ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ ತಿಲಕ್ ಕೇಸಮ್ (13 ವರ್ಷ) ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರ ಕೆಲವು ಯುವ ಪ್ರತಿಭಾವಂತರು.

  BYJU’S Young Geniusನ ಸೀಸನ್ 2 ಇನ್ನಷ್ಟು ಬೃಹತ್ ಮತ್ತು ಅದ್ಧೂರಿಯಾಗಿರಲಿದೆ ಎಂಬ ಭರವಸೆ ನೀಡುತ್ತೇವೆ. ಪ್ರವೇಶಗಳು ಆರಂಭವಾದಾಗಿನಿಂದ ದೇಶದಾದ್ಯಂತ ಪೋಷಕರು ಮತ್ತು ಅವರ ಮಕ್ಕಳು ತೋರಿಸಿದ ಅಭೂತಪೂರ್ವ ಉತ್ಸಾಹ ಹಿಂದೆಂದಿಗಿಂತ ಇಮ್ಮಡಿಗೊಂಡಿದೆ. ಇದು BYJU’S Young Geniusನ ಜನಪ್ರಿಯತೆಯನ್ನು ಮಾತ್ರ ತೋರಿಸುತ್ತಿಲ್ಲ, ಜೊತೆಗೆ ಸೂಕ್ತ ವೇದಿಕೆಗೆ ನಿರೀಕ್ಷಿಸುತ್ತಿರುವ ಯುವ ಸಾಧಕರಲ್ಲಿ ಇರುವ, ಇದುವರೆಗೂ ಪ್ರದರ್ಶಿಸದೇ ಇರುವ ಪ್ರತಿಭೆಯನ್ನು ಪ್ರದರ್ಶಿಸಬೇಕೆಂಬ ತುಡಿತದ ಬಗ್ಗೆ ಒಳನೋಟವನ್ನು ಸಹ ನೀಡುತ್ತದೆ.

  ಮೊದಲ ಎರಡು ವಾರಗಳಲ್ಲಿ 7,500ಕ್ಕೂ ಹೆಚ್ಚು ಪ್ರವೇಶಗಳನ್ನು ಸ್ವೀಕರಿಸಲಾಗಿದ್ದು, ಭಾರತದಾದ್ಯಂತ ಹುದುಗಿರುವ ನೈಜ ಪ್ರತಿಭೆಗಳು, ಅವರ ಪ್ರತಿಭೆ ಮತ್ತು ಕೌಶಲಗಳನ್ನು ಪ್ರದರ್ಶಿಸುವ ಮೂಲಕ ವೀಕ್ಷಕರು ಮತ್ತು ತೀರ್ಪುಗಾರರನ್ನು ಆಶ್ಚರ್ಯಚಿಕತರನ್ನಾಗಿಸುವ ಭರವಸೆಯನ್ನು ಸೀಸನ್ 2 ನೀಡುತ್ತದೆ. News18 ನೆಟ್‌ವರ್ಕ್, History ಚಾನಲ್ ಮತ್ತು Viacom ಚಾನಲ್‌ಗಳ ನೆಟ್‌ವರ್ಕ್‌ಗಳಂತಹ ವೇದಿಕೆಗಳಾದ್ಯಂತ ಈ ಕಾರ್ಯಕ್ರಮವನ್ನು ಎಲ್ಲೆಲ್ಲಿ ಪ್ರಚಾರ ಮಾಡಲಾಗುತ್ತಿದೆಯೋ ಅಲ್ಲೆಲ್ಲ ಅಭೂತಪೂರ್ವ ವಿಶ್ವಾಸವನ್ನು ಗಳಿಸುತ್ತಿದೆ. BYJU’S Young Geniusನ ಸೀಸನ್ 2ರ ಸಾಮಾಜಿಕ ತಲುಪುವಿಕೆಯು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈಗಾಗಲೇ 2 ಮಿಲಿಯನ್ ಇಂಪ್ರೆಷನ್‌ಗಳನ್ನು ದಾಟಿದೆ ಮತ್ತು ಕಾರ್ಯಕ್ರಮದ ಮೈಕ್ರೊಸೈಟ್‌ಗೆ ಭೇಟಿ ಕೊಡುತ್ತಿರುವವರ ಸಂಖ್ಯೆಯು ಪ್ರತಿದಿನ ಸತತವಾಗಿ 1 ಲಕ್ಷ ಸಂಖ್ಯೆಯನ್ನು ಹೊಂದಿದೆ.

  News 18 ಹಿರಿಯ ಸಂಪಾದಕ ಮತ್ತು ನಿರೂಪಕ ಆನಂದ್ ನರಸಿಂಹನ್ ಅವರು ಹೋಸ್ಟ್ ಮಾಡಲಿರುವ ಕಾರ್ಯಕ್ರಮವು ಜನವರಿ 2022ರಲ್ಲಿ ಪ್ರಾರಂಭವಾಗಲಿದ್ದು, ವಿವಿಧ ಕ್ಷೇತ್ರಗಳಾದ ಪ್ರದರ್ಶನ ಕಲೆಗಳು, ಶೈಕ್ಷಣಿಕ, ತಂತ್ರಜ್ಞಾನ, ವ್ಯಾಪಾರ, ಕ್ರೀಡೆ ಮತ್ತು ಇನ್ನಷ್ಟು ಕ್ಷೇತ್ರಗಳ, 6 ರಿಂದ 15ರ ವಯೋಮಾನದ ಹಲವು ಯುವ ಪ್ರತಿಭಾನ್ವಿತರ ಪ್ರತಿಭೆಯನ್ನು ಬೆಳಕಿಗೆ ತರಲಾಗುವುದು. ಯುವ ಜೀನಿಯಸ್‌ಗಳೊಂದಿಗೆ ಭಾರತದ ಹೆಚ್ಚು ಸಂಭ್ರಮಿಸುವ ಭಾರತೀಯ ವ್ಯಕ್ತಿಗಳು ಇರಲಿದ್ದು, ಅವರು ಮಕ್ಕಳ ಅಸಾಧಾರಣ ಪ್ರತಿಭೆಗಳಿಗೆ ಪ್ರಶಂಸೆ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಯಶಸ್ಸಿನೆಡೆಗೆ ನಡೆದ ತಮ್ಮ ಸ್ವಂತ ಅನುಭವವನ್ನೂ ಹಂಚಿಕೊಳ್ಳಲಿರುವುದರಿಂದ ಪ್ರತಿಯೊಂದು ಎಪಿಸೋಡ್ ಸಹ ಕುತೂಹಲಕಾರಿ ವೀಕ್ಷಣಾ ಅನುಭವವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ.

  ಯಾವುದೇ ಪ್ರತಿಬಂಧಗಳಿಲ್ಲದೇ ಮಕ್ಕಳು ಏನಾಗಿರುವರೋ ಅದನ್ನು ಸಂಭ್ರಮಿಸುವ ಈ ಅಪೂರ್ವ ಕಾರ್ಯಕ್ರಮದಲ್ಲಿ ನಿಮ್ಮ ಮಗುವೂ ಭಾಗವಹಿಸಬೇಕು ಎಂದು ನೀವು ಬಯಸಿದರೆ, ಇಲ್ಲಿರುವ ಲಿಂಕ್‌ಗೆ ಭೇಟಿ ಕೊಡಿ ಮತ್ತು ನೋಂದಣಿ ಫಾರ್ಮ್ ಭರ್ತಿ ಮಾಡಿ. ಈ ಪ್ರಾರಂಭಿಕ ಸಲ್ಲಿಕೆಯ ನಂತರ ಮಗುವಿನ ಬಹು-ಹಂತದ ಮೌಲ್ಯಮಾಪನ ಪ್ರಕ್ರಿಯೆಗಾಗಿ ಪ್ರತಿಯೊಂದು ವಿವರವನ್ನು ಒಳಗೊಂಡ ವಿವರವಾದ ಫಾರ್ಮ್ ತುಂಬಬೇಕಿರುತ್ತದೆ. ಇದಲ್ಲದೇ, ನೀವು BYJU’s ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು BYJU’s Young Genius ವಿಭಾಗದಲ್ಲಿ ನೋಂದಾಯಿಸಿಕೊಳ್ಳಬಹುದು.
  ಇದು ಶೀಘ್ರದಲ್ಲೇ ಬರಲಿರುವ News18 BYJU’S Young Genius ಸೀಸನ್ 2ರಲ್ಲಿ ಮಕ್ಕಳು ಸಂಭ್ರಮಿಸುವ ಸಮಯವಾಗಿದೆ.

  ಸಾಮಾಜಿಕ ಪ್ರತಿ 1 - BYJU’S Young Genius ಸೀಸನ್ 2ರೊಂದಿಗೆ ನಿಮ್ಮ ಮಗುವಿನ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ಇರುವ ಅವಕಾಶವಾಗಿದೆ. 2. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಈಗಲೇ ನೋಂದಾಯಿಸಿಕೊಳ್ಳಿ!
  ಸಾಮಾಜಿಕ ಪ್ರತಿ 2 - BYJU’S Young Geniusನ ಎರಡನೇ ಆವೃತ್ತಿಯು ಭಾರತದಾದ್ಯಂತ ಅಭೂತಪೂರ್ವ ಸ್ಪಂದನೆಯನ್ನು ಸ್ವೀಕರಿಸಿರುವುದನ್ನು ನೀವು ಇಲ್ಲಿ ನೋಡಬಹುದು (ಮತ್ತು ನೀವು ಏಕೆ ಅದರಲ್ಲಿ ಸೇರಿಕೊಳ್ಳಬೇಕು ಎಂಬುದೂ ಸಹ ಇದೆ)
  Published by:Sharath Sharma Kalagaru
  First published: