BYJU'S Young Genius: ಒಲಂಪಿಕ್ಸ್​​ನಲ್ಲಿ ಪೂಜಾ​ ಮತ್ತು ಪ್ಯಾಲಿಯಂಟಾಲಜಿಯಲ್ಲಿ ಅಶ್ವಥಾ:ಯಂಗ್ ಜೀನಿಯಸ್​ಗಳ ಅಪ್ರತಿಮ ಸಾಧನೆ

ಒಂದು ಸಣ್ಣ ಹಳ್ಳಿಯಿಂದ ಬಂದಿರುವ ಪೂಜಾ, ಚಿಕ್ಕವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಿದ್ದಾರೆ. ಅಂಡರ್-10 ವಿಭಾಗದಲ್ಲಿ ಪೂಜಾ 3.ಕಿ.ಮೀ ದೂರವನ್ನು ಕೇವಲ 12 ನಿಮಿಷ 50 ಸೆಕೆಂಡ್​​ಗಳಲ್ಲಿ ಹಾಗೂ 10 ಕಿ.ಮೀ.ದೂರವನ್ನು 48 ನಿಮಿಷಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅಶ್ವಥಾ ಬಿಜು-ಪೂಜಾ ಬಿಶ್ನೋಯಿ

ಅಶ್ವಥಾ ಬಿಜು-ಪೂಜಾ ಬಿಶ್ನೋಯಿ

  • Share this:
    ಯಂಗ್ ಜೀನಿಯಸ್ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮೊಳಗಿನ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ಈಗ ನಾವು ಹೇಳಹೊರಟಿರುವುದು ಇಬ್ಬರು ಅಸಾಧಾರಣ ಪ್ರತಿಭೆಗಳ ಬಗ್ಗೆ. ಬೈಜೂಸ್​ ಮತ್ತು ಸಿಎನ್​ಎನ್​​ ನ್ಯೂಸ್​ 18 ವತಿಯಿಂದ ಆಯೋಜಿಸಿರುವ ಯಂಗ್ ಜೀನಿಯಸ್ ಕಾರ್ಯಕ್ರಮದಲ್ಲಿ ಪ್ರತಿಭೆಗಳ ಅನಾವರಣವಾಗುತ್ತಿದೆ.​ ಶೈಕ್ಷಣಿಕ ಕ್ಷೇತ್ರದಲ್ಲಿ ಅಶ್ವಥಾ ಬಿಜು ಎಂಬ 13 ವರ್ಷದ ಬಾಲಕಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಪೂಜಾ ಬಿಶ್ನೋಯಿ ಎಂಬ 9 ವರ್ಷದ ಬಾಲಕಿ ಅಪ್ರತಿಮ ಸಾಧನೆ ಮಾಡಿದ್ದಾರೆ.

    ಪೂಜಾ ಬಿಶ್ನೋಯಿ ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಒಂದು ಸಣ್ಣ ಹಳ್ಳಿಯಿಂದ ಬಂದಿರುವ ಪೂಜಾ, ಚಿಕ್ಕವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಿದ್ದಾರೆ. ಅಂಡರ್-10 ವಿಭಾಗದಲ್ಲಿ ಪೂಜಾ 3.ಕಿ.ಮೀ ದೂರವನ್ನು ಕೇವಲ 12 ನಿಮಿಷ 50 ಸೆಕೆಂಡ್​​ಗಳಲ್ಲಿ ಹಾಗೂ 10 ಕಿ.ಮೀ.ದೂರವನ್ನು 48 ನಿಮಿಷಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಈಕೆ ಪ್ರತಿದಿನ 8 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು. ಬೆಳಗ್ಗೆ ಶಾಲೆಗೆ ಹೋಗುವ ಮುನ್ನ 4 ಗಂಟೆಗಳ ಕಾಲ ಅಂದರೆ ಮುಂಜಾನೆ 3 ಗಂಟೆಯಿಂದ 7 ಗಂಟೆಯವರೆಗೆ, ಶಾಲೆಯಿಂದ ಬಂದ ಬಳಿಕ 4 ಗಂಟೆಗಳ ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದರು. ಆಕೆಯ ಪ್ರಯಾಣ ಮತ್ತು ತರಬೇತಿ ಖರ್ಚನ್ನು ವಿರಾಟ್​ ಕೊಹ್ಲಿ ಫೌಂಡೇಶನ್​ ನೋಡಿಕೊಳ್ಳುತ್ತಿದೆ.

    ಅನಾಥ ಶವವನ್ನು 2 ಕಿ.ಮೀ. ಹೊತ್ತು ನಡೆದು ಅಂತ್ಯಸಂಸ್ಕಾರ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿ

    ಇನ್ನು, 13 ವರ್ಷದ ಅಶ್ವಥಾ ಬಿಜು ಗ್ಲೋಬಲ್ ಚೈಲ್ಡ್​ ಪ್ರಾಡಿಜಿ ಅವಾರ್ಡ್​-2020 ನ್ನು ಪಡೆದಿದ್ದಾರೆ. ಇವರು ಎನ್​ಸೈಕ್ಲೋಪೀಡಿಯಾ ಎಂದು ಗುರುತಿಸಿಕೊಂಡು ಇನ್ನೂ ಕಲಿಯುವ ಹುಮ್ಮಸ್ಸಿನಲ್ಲಿದ್ದಾರೆ. ನಾನು 5 ವರ್ಷದವಳಿದ್ದಾಗ ನನ್ನ ತಂದೆ ನನಗೆ ಎನ್​ಸೈಕ್ಲೋಪೀಡಿಯಾವನ್ನು ಖರೀದಿಸಿ ತಂದುಕೊಟ್ಟರು. ನಾನು ಚಿತ್ರಗಳನ್ನು ನೋಡಿದಾಗ, ಮೊದಲಿಗೆ ಸಮುದ್ರ ಜೀವಿ ಎಂದು ಭಾವಿಸಿದ್ದೆ. ಬಳಿಕ ನನ್ನ ತಾಯಿಯನ್ನು ಕೇಳಿದಾಗ, ಅದು ಪಳೆಯುಳಿಕೆ ಎಂದು ಹೇಳಿದರು ಎಂದು ತಮ್ಮ ಅನುಭವ ಹಂಚಿಕೊಂಡರು. ಬಿಜು 5 ವರ್ಷದವಳಿದ್ದಾಗಲೇ ಆಕೆಯ ಪಳೆಯುಳಿಕೆಗಳ ಮೇಲೆ ವಿಶೇಷ ಆಸಕ್ತಿ ಬಂದಿತ್ತು. ಅಂದಿನಿಂದ ಪಳೆಯುಳಿಕೆಗಳ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು.

    ಬಿಜು ಅವರು ಈವರೆಗೆ ಅಕಶೇರುಕಗಳು, ಕಶೇರುಕಗಳು, ಸಸ್ಯವರ್ಗ ಮತ್ತು ಮೈಕ್ರೋಪೊಸಿಲ್​​​ನ ಸುಮಾರು 120 ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನಾನು 6700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದೇನೆ. ಇದರ ಪರಿಣಾಮವಾಗಿ ಮುಂದೆ, ಪ್ರಪಂಚದಾದ್ಯಂತ ಜನರು ಪ್ಯಾಲಿಯಂಟಾಲಜಿಯನ್ನು ಹವ್ಯಾಸವಾಗಿ ಆಯ್ಕೆ ಮಾಡಿಕೊಳ್ಳುವ ಬದಲು ಭಾವೋದ್ರಿಕ್ತ ರೂಪದಲ್ಲಿ ಸ್ವೀಕರಿಸುವ ಅವಕಾಶವಿದೆ ಎಂದರು.
    Published by:Latha CG
    First published: