BYJU’S ಯಂಗ್ ಜೀನಿಯಸ್: 9ನೇ ಎಪಿಸೋಡ್​ನಲ್ಲಿ ಅವಾರ್ಡ್ ವಿನ್ನಿಂಗ್ ಸ್ಕೇಟರ್ ತಿಲಕ್ ಮತ್ತು ತಬಲಾ ವಾದಕ ತೃಪ್ತರಾಜ್ ಪಾಂಡ್ಯ

ಮುಂದಿನ ದಿನಗಳಲ್ಲಿ ತನ್ನದೇ ದಾಖಲೆಯನ್ನು ಅಳಸಿ ಹಾಕುವ ಯೋಜನೆ ರೂಪಿಸಿರುವ ತಿಲಕ್, 2023-2024ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ, ಐಸ್ ಸ್ಕೇಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿವ ಇಂಗಿತ ವ್ಯಕ್ತಪಡಿಸಿದ್ದಾನೆ. ಕೇವಲ ನಾಲ್ಕು ವರ್ಷನಿದ್ದಾಗ ಸ್ಕೇಟಿಂಗ್ ಪ್ರಾರಂಭಿಸಿದ ತಿಲಕ್, ನಂತರ ಅವನು ಸ್ಕೇಟಿಂಗ್ ನಲ್ಲಿ ಮಾಡಿದ ಸಾಧನೆಗಳೆಲ್ಲವೂ ಇತಿಹಾಸ ಪುಟ ಸೇರಿದವು.

ತಬಲಾ ವಾದಕ ತೃಪ್ತರಾಜ್ ಪಾಂಡ್ಯ ಮತ್ತು ಸ್ಕೇಟರ್ ತಿಲಕ್ ಕೀಸಮ್

ತಬಲಾ ವಾದಕ ತೃಪ್ತರಾಜ್ ಪಾಂಡ್ಯ ಮತ್ತು ಸ್ಕೇಟರ್ ತಿಲಕ್ ಕೀಸಮ್

 • Share this:
  BYJU’S ಯಂಗ್ ಜೀನಿಯಸ್‌ನ ಮುಂಬರುವ ಮಕ್ಕಳ ಸಂಚಿಕೆಯಲ್ಲಿ - ತಬಲಾ ವಾದಕ ತೃಪ್ತರಾಜ್ ಪಾಂಡ್ಯ ಮತ್ತು ಸ್ಕೇಟರ್ ತಿಲಕ್ ಕೀಸಮ್ ಕಾಣಿಸಿಕೊಳ್ಳಲಿದ್ದಾರೆ. ನಟ ಸೋನು ಸೂದ್ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ರವರು ಈ ಇಬ್ಬರು ಸಾಧಕ ಮಕ್ಕಳ ಮಾರ್ಗದರ್ಶನ ನೀಡಲಿದ್ದಾರೆ.

  12 ವರ್ಷದ ದೆಹಲಿಯ ತಿಲಕ್, ಬಾರ್‌ಗಳ ಅಡಿಯಲ್ಲಿ ಮಲಗಿ ಸ್ಕೇಟಿಂಗ್ ಮಾಡಿ ಗಿನ್ನಿಸ್ ವಿಶ್ವ ದಾಖಲೆ ಮಾಡುವುದರ ಬಗ್ಗೆ 2015ರ ಡಿಸೆಂಬರ್ 20ರಂದು ಅಧಿಕೃತವಾಗಿ ಘೋಷಿಸಲಾಯಿತು. 2016ರ ಡಿಸೆಂಬರ್ 31ರಂದು ತಿಲಕ್ ನು 145 ಮೀಟರ್ ದೂರದಲ್ಲಿ ಬಾರ್‌ಗಳ ಅಡಿಯಲ್ಲಿ ಅತ್ಯಂತ ದೂರದ ಸ್ಕೇಟಿಂಗ್ ಮಾಡುವುದರ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಅಳಸಿಹಾಕುವುದರ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದನು. ಈ ಹಿಂದೆ 116 ಮೀಟರ್ ದೂರ ತಿಲಕ್ ಕ್ರಮಿಸಿದ್ದನು. ನವೆಂಬರ್ 2019 ರಲ್ಲಿ “ಲಾಂಗೆಸ್ಟ್ ಸ್ಲಾಲೋಮ್ ವೇವ್” (ವರ್ಲ್ಡ್ ರೆಕಾರ್ಡ್) ನಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಸಹ ತಿಲಕ್ ಪ್ರವೇಶಿಸಿದ್ದಾನೆ.

  ಬೈಜುವಿನ ಯಂಗ್ ಜೀನಿಯಸ್ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ತಿಲಕ್, ತಾನು ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿರುವುದಕ್ಕೆ ತುಂಬಾ ಸಂತೋಷ ಹಾಗೂ ರೋಮಾಂಚನವಾಗುತ್ತಿದೆ ಎಂದು ಹೇಳಿದ್ದಾರೆ.

  ಬೆಂಗಳೂರಿನ ಜನಸೇವಾ ವಿದ್ಯಾಕೇಂದ್ರದಲ್ಲಿ 2 ದಿನಗಳ ಕಾಲ RSS ಪ್ರಮುಖರ ಸಭೆ; 450 ಜನರಿಗೆ ಮಾತ್ರ ಅವಕಾಶ

  ನ್ಯೂಸ್ 18 ನೊಂದಿಗೆ ಮಾತನಾಡುತ್ತಾ "ನನ್ನ ಸಾಧನೆ ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ಈಗ ಈ ವೇದಿಕೆ ಮೂಲಕ ಜನರಿಗೆ ಹತ್ತಿರವಾಗಿದ್ದೇನೆ. ಯಂಗ್ ಜೀನಿಯಸ್ ನಂತಹ ಕಾರ್ಯಕ್ರಮಗಳು ಜರ್ಮನ್ ನಲ್ಲಿ ನೋಡಿದ್ದೆ. ಇಂತಹ ಕಾರ್ಯಕ್ರಮಗಳು ನಮ್ಮ ದೇಶದಲ್ಲಿ ಇಲ್ಲವೆಂದು ಯೋಚಿಸುತ್ತಿದ್ದೆ. ಆದರೆ ಈಗ ಯಂಗ್ ಜೀನಿಯಸ್ ಕಾರ್ಯಕ್ರಮ ಭಾರತದಲ್ಲಿ ಪ್ರಾರಂಭವಾಗಿದ್ದು ಹೆಮ್ಮೆಯ ವಿಷಯ." ಎಂದು ತಿಲಕ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

  ಮುಂದಿನ ದಿನಗಳಲ್ಲಿ ತನ್ನದೇ ದಾಖಲೆಯನ್ನು ಅಳಸಿ ಹಾಕುವ ಯೋಜನೆ ರೂಪಿಸಿರುವ ತಿಲಕ್, 2023-2024ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ, ಐಸ್ ಸ್ಕೇಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿವ ಇಂಗಿತ ವ್ಯಕ್ತಪಡಿಸಿದ್ದಾನೆ. ಕೇವಲ ನಾಲ್ಕು ವರ್ಷನಿದ್ದಾಗ ಸ್ಕೇಟಿಂಗ್ ಪ್ರಾರಂಭಿಸಿದ ತಿಲಕ್, ನಂತರ ಅವನು ಸ್ಕೇಟಿಂಗ್ ನಲ್ಲಿ ಮಾಡಿದ ಸಾಧನೆಗಳೆಲ್ಲವೂ ಇತಿಹಾಸ ಪುಟ ಸೇರಿದವು.

  ಮತ್ತೊಬ್ಬ ಸಾಧಕ, ತಬಲಾ ವಾದಕ 13 ವರ್ಷದ ತೃಪ್ತರಾಜ್ ಪಾಂಡ್ಯ. 2019-20ರಲ್ಲಿ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕರ್, ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿಯನ್ನು ಪಡೆದ ತೃಪ್ತರಾಜ್ ಪಾಂಡ್ಯ, ಯಂಗ್ ಜೀನಿಯಸ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾನೆ. ಕೇವಲ ಮೂರು ವರ್ಷವನಿದ್ದಾಗ ಆಲ್ ಇಂಡಿಯಾ ರೇಡಿಯೊದಲ್ಲಿ ನೇರ ಪ್ರದರ್ಶನ ನೀಡಿದ್ದನು. ಹಾಗೂ ನಾಲ್ಕು ವರ್ಷವನಿದ್ದಾಗ ದೂರದರ್ಶನದಲ್ಲಿ ನೇರ ಪ್ರದರ್ಶನ ನೀಡಿದ್ದನು. ಬ್ಯಾಸ್ಕೆಟ್‌ಬಾಲ್ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹವ್ಯಾಸವನ್ನು ಹೊಂದಿರುವ ತೃಪ್ತರಾಜ್ ಪಾಂಡ್ಯ ಭವಿಷ್ಯದಲ್ಲಿ ತಬಲಾ ವಾದಕನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಭರವಸೆ ಹೊಂದಿದ್ದಾನೆ.

  2 ವರ್ಷದ ಪ್ರಾಯದಲ್ಲಿರುವಾಗಲೇ ತೃಪ್ತರಾಜ್, ಅಡಿಗೆಮನೆಯಲ್ಲಿರುವ ಅಲ್ಯೂಮಿನಿಯಂ ಪಾತ್ರೆಗಳನ್ನು ವಾದ್ಯಗಳಿಗಾಗಿ ನುಡಿಸುತ್ತಿದ್ದನು. ಈ ಹವ್ಯಾಸ ಕ್ರಮೇಣ ತಬಲಾ ಕಡೆಗೆ ಆಸಕ್ತಿ ಬರುವ ಹಾಗೆ ಮಾಡಿತು. ಸದ್ಯ ಪಂಡಿತ್ ನಯನ್ ಘೋಷ್ ಅವರ ಬಳಿ ಶಿಷ್ಯನಾಗಿದ್ದಾನೆ.
  Published by:Latha CG
  First published: