BYJU'S Young Genius: ಸ್ಫೂರ್ತಿದಾಯಕ ಅನಿಸಿಕೆ ಹಂಚಿಕೊಂಡ ಆ್ಯಪ್ ನಿಪುಣ ಅನುಬ್ರಾತ ಸರ್ಕಾರ್, ಸಂಗೀತಗಾರ ಸ್ಟೀವನ್

ಬೈಜೂಸ್​ ಜೀನಿಯಸ್‌ನ ಎಪಿಸೋಡ್ 3ರ ಎರಡನೇ ಭಾಗದಲ್ಲಿ 'ಸೂಪರ್ ಕೋಡರ್' ಅನುಬ್ರತಾ ಸರ್ಕಾರ್ ಅವರು ಅಭಿವೃದ್ಧಿಪಡಿಸಿರುವ ಒಂಭತ್ತು ಆ್ಯಪ್​ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ. ಅವರು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕ್ಯೂಆರ್‌ಟಿ ಕೋಡ್ ಸ್ಕ್ಯಾನರ್ ಮತ್ತು ಬ್ರಿಕ್-ಒ-ಮೆಟ್, ಚಾಟ್ ಅಪ್ಲಿಕೇಶನ್ ”ಮೀಟ್”, ವೆಲ್ಡರ್ ಇನ್ ಸೆಲ್ಸಿಯಸ್ ಮತ್ತು ಪೊಲೀಸ್ ಅಲರ್ಟ್ ಸಹ ಸೇರಿವೆ.

ಬೈಜೂಸ್ ಯಂಗ್ ಜೀನಿಯಸ್‌ನ ಮೂರನೇ ಸಂಚಿಕೆಯಲ್ಲಿ ಬಾಲಪ್ರತಿಭೆಗಳಾದ ಸ್ಟೀವನ್ ಸ್ಯಾಮ್ಯುಯೆಲ್ ದೇವಾಸ್ಸಿ ಮತ್ತು ಅನುಬ್ರಾತ ಸರ್ಕಾರ್

ಬೈಜೂಸ್ ಯಂಗ್ ಜೀನಿಯಸ್‌ನ ಮೂರನೇ ಸಂಚಿಕೆಯಲ್ಲಿ ಬಾಲಪ್ರತಿಭೆಗಳಾದ ಸ್ಟೀವನ್ ಸ್ಯಾಮ್ಯುಯೆಲ್ ದೇವಾಸ್ಸಿ ಮತ್ತು ಅನುಬ್ರಾತ ಸರ್ಕಾರ್

  • Share this:
    ಬೈಜೂಸ್ ಯಂಗ್ ಜೀನಿಯಸ್‌ನ ಮೂರನೇ ಸಂಚಿಕೆಯಲ್ಲಿ ಬಾಲಪ್ರತಿಭೆಗಳಾದ ಅನುಬ್ರಾತ ಸರ್ಕಾರ್ ಮತ್ತು ಸ್ಟೀವನ್ ಸ್ಯಾಮ್ಯುಯೆಲ್ ದೇವಾಸ್ಸಿ ತಮ್ಮ ಅನುಭವ, ಅನಿಸಿಕೆ, ಪ್ರೇರಣೆಗಳನ್ನು ಹಂಚಿಕೊಂಡಿದ್ದಾರೆ.

    ಕೇವಲ 10 ವರ್ಷ ವಯಸ್ಸಿನ ಅನುಬ್ರಾತ ಅವರನ್ನು "ಆ್ಯಪ್ ನಿಪುಣ" ಅಥವಾ ಪಶ್ಚಿಮ ಬಂಗಾಳದ ವಂಡರ್ ಕಿಡ್ ಎಂದು ಕರೆಯಲಾಗುತ್ತದೆ. 14  ವರ್ಷದ ಸ್ಟೀವನ್ ಅವರು ವಿಶ್ವದ ಅತಿ ವೇಗದ ಡ್ರಮ್ಮರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.

    ಸಂಚಿಕೆಯ ಮೊದಲ ಭಾಗದಲ್ಲಿ ಹದಿಹರೆಯದ ಡ್ರಮ್ಮರ್ ಮತ್ತು ಸಂಗೀತಗಾರ ಸ್ಟೀವನ್ ಸ್ಯಾಮ್ಯುಯೆಲ್ ದೇವಾಸ್ಸಿ ಅವರು ತಮ್ಮ ಸಂಯೋಜನೆಗೆ ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಹೆಬ್ಬಯಕೆ ವ್ಯಕ್ತಪಡಿಸಿದ್ದಾರೆ. ಚಿಕ್ಕಹುಡುಗನಿಂದಲೂ ಬಾಯ್ ಬ್ರ್ಯಾಂಡ್ ತಂಡದ ಸದಸ್ಯನಾಗಿರುವ ಸ್ಟೀವನ್ ವಿಶ್ವದ ಅತಿ ವೇಗದ ಡ್ರಮ್ಮರ್ ಆಗಿದ್ದಾರೆ.

    "ನಾನು 3 ವರ್ಷದವನಿದ್ದಾಗಿನಿಂದಲೇ ಡ್ರಮ್ ಬಾರಿಸುವುದನ್ನು ಆರಂಭಿಸಿದೆ ಮತ್ತು ನನ್ನ ಮೊದಲ ಲೈವ್ ಪ್ರದರ್ಶನವು 5ನೇ ವಯಸ್ಸಿನಲ್ಲಿ ಆಯಿತು. ಖ್ಯಾತ ಡ್ರಮ್ಮರ್​ಗಳಲ್ಲಿ ಒಬ್ಬರಾದ ಶಿವಾಮಣಿ ಚಿಕ್ಕಪ್ಪನೊಂದಿಗೆ ಪ್ರದರ್ಶನ ನೀಡಿದ್ದೇನೆ. ಅವರು ನನ್ನನ್ನು ತುಂಬಾ ಪ್ರೇರೇಪಿಸಿದವನು. ಅವರು ನನ್ನನ್ನು ಎಲ್ಲೆಡೆ ಕರೆದೊಯ್ಯುತ್ತಿದ್ದರು. ಈಗಲೂ ಅವರೂ ನನಗೆ ಅಭ್ಯಾಸವನ್ನು ಮುಂದುವರಿಸಲು ಹೇಳುತ್ತಾರೆ. ಅಭ್ಯಾಸ ಒಬ್ಬನನ್ನು ಪರಿಪೂರ್ಣಗೊಳಿಸುತ್ತದೆ," ಎಂದು ಸಿಎನ್​ಎನ್​ ನ್ಯೂಸ್ 18ಗೆ ಹೇಳಿದ ಸ್ಟೀವನ್ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡುವುದಾಗಿ ತಿಳಿಸಿದರು. "ನಾನು ರಿದಂ ಅನ್ನು ಪ್ರೀತಿಸುತ್ತೇನೆ ಮತ್ತು ಡ್ರಮ್ಮಿಂಗ್ ಇಷ್ಟಪಡುತ್ತೇನೆ. ಸಂಗೀತ ಎಂದಿಗೂ ಮುಗಿಯುವುದಿಲ್ಲ," ಎಂದು ಅವರು ಹೇಳುತ್ತಾರೆ.

    ಸಂಗೀತದ ಹೊರತಾಗಿ, ಸ್ಟೀವನ್ ಕ್ರಿಕೆಟ್ ಅಭಿಮಾನಿಯಾಗಿದ್ದು, ಭಾರತೀಯ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಅಭಿಮಾನಿಯಾಗಿದ್ದಾರೆ. ಈ ಸಂಚಿಕೆಯಲ್ಲಿ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಸ್ಟೀವನ್ ಮಾರ್ಗದರ್ಶಕರೂ ಆಗಿರುವ ವಿಶಾಲ್ ದಾದ್ಲಾನಿ ಅವರ ಸ್ಟೀ ಅವರ ಪ್ರದರ್ಶನವೂ ಇತ್ತು.

    ಇದನ್ನು ಓದಿ: ಸ್ಪೂರ್ತಿದಾಯಕ ಗೀತೆಯೊಂದಿಗೆ ಆರಂಭಗೊಳ್ಳಲಿದೆ Network​ 18 ಹಾಗೂ BYJUS​ ಯಂಗ್​ ಜೀನಿಯಸ್​ ಕಾರ್ಯಕ್ರಮ

    ಬೈಜೂಸ್​ ಜೀನಿಯಸ್‌ನ ಎಪಿಸೋಡ್ 3ರ ಎರಡನೇ ಭಾಗದಲ್ಲಿ 'ಸೂಪರ್ ಕೋಡರ್' ಅನುಬ್ರತಾ ಸರ್ಕಾರ್ ಅವರು ಅಭಿವೃದ್ಧಿಪಡಿಸಿರುವ ಒಂಭತ್ತು ಆ್ಯಪ್​ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ. ಅವರು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳಲ್ಲಿ ಕ್ಯೂಆರ್‌ಟಿ ಕೋಡ್ ಸ್ಕ್ಯಾನರ್ ಮತ್ತು ಬ್ರಿಕ್-ಒ-ಮೆಟ್, ಚಾಟ್ ಅಪ್ಲಿಕೇಶನ್ ”ಮೀಟ್”, ವೆಲ್ಡರ್ ಇನ್ ಸೆಲ್ಸಿಯಸ್ ಮತ್ತು ಪೊಲೀಸ್ ಅಲರ್ಟ್ ಸಹ ಸೇರಿವೆ.

    ಪಶ್ಚಿಮ ಬಂಗಾಳದ ಅಲಿಪುರ್ದಾರ್ ನಗರದ ಅನುಬ್ರತಾ ಈಗಾಗಲೇ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಇದರಲ್ಲಿ ಅವರು ಉತ್ಸಾಹಿಗಳಿಗೆ ಕೋಡಿಂಗ್ ಟ್ಯುಟೋರಿಯಲ್ ಸಹ ನೀಡುತ್ತಾರೆ.



    "ನಾನು ಯೂಟ್ಯೂಬ್ ವೀಡಿಯೊಗಳನ್ನು ನೋಡುತ್ತೆನೆ. ಮತ್ತು ಅಪ್ಲಿಕೇಶನ್‌ಗಳನ್ನು ತಯಾರಿಸುವುದನ್ನು ಕಲಿತಿದ್ದೇನೆ, ಕೋಡಿಂಗ್ ಕಲಿತಿದ್ದೇನೆ. ಕೋಡ್ ಕಲಿತಿದ್ದೇನೆ" ಎಂದು ಅನುಬ್ರತಾ ಹೇಳಿದರು. ಅವರ ಇತ್ತೀಚಿನ ಅಪ್ಲಿಕೇಶನ್ ಪೊಲೀಸ್ ಅಲರ್ಟ್. ಇದು ಬಳಕೆದಾರರಿಗೆ ತುರ್ತು ಸಂದರ್ಭದಲ್ಲಿ ಪೊಲೀಸರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಪೊಲೀಸರನ್ನು ತಲುಪಲು ಬಳಕೆದಾರರು ಅಪ್ಲಿಕೇಶನ್ ಬಳಸಿದಾಗ, ಅವರ ಸ್ಥಳವನ್ನು ಕೇವಲ ಒಂದು ಬಟನ್ ಕ್ಲಿಕ್‌ನಲ್ಲಿ ತುರ್ತು ಸಹಾಯವಾಣಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

    ತಂತ್ರಜ್ಞಾನದ ಪ್ರಗತಿಯು ಮಾನವಕುಲದ ಹಿತದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದೋ ಎಂಬ ಬಗ್ಗೆ ಸಿಎನ್‌ಎನ್ ನ್ಯೂಸ್ 18 ನೊಂದಿಗೆ ಮಾತನಾಡಿದ ಅನುಬ್ರತಾ, "ವಿಜ್ಞಾನ ಉತ್ತಮ ಸೇವಕ ಆದರೆ ಕೆಟ್ಟ ಮಾಸ್ಟರ್" ಎಂದು ಹೇಳುತ್ತಾರೆ.
    Published by:HR Ramesh
    First published: