HOME » NEWS » National-international » BY VIOLATING COVID GUIDELINES E THOUSANDS OF PEOPLE TOOK TO THE STREETS TO CELEBRATE UGADI IN ANDRAPRADESH SESR

CoronaVirus: ಎಲ್ಲಿ ಸ್ವಾಮಿ ಮಾಸ್ಕ್, ಅಂತರ..? ಆಂಧ್ರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಸಗಣಿ ಎರಚಾಟ!

 ಒಂದಿಂಚು ಅಂತರವಿಲ್ಲದೆ 4 ಸಾವಿರಕ್ಕೂ ಹೆಚ್ಚು ಜನ ಒಂದೆಡೆ ಸೇರಿ ಪರಸ್ಪರ ಸಗಣಿಯನ್ನು ಎರಚಾಡಿಕೊಂಡಿದ್ದಾರೆ.

news18-kannada
Updated:April 15, 2021, 7:39 PM IST
CoronaVirus: ಎಲ್ಲಿ ಸ್ವಾಮಿ ಮಾಸ್ಕ್, ಅಂತರ..? ಆಂಧ್ರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಸಗಣಿ ಎರಚಾಟ!
ಸಗಣಿ ಎರಚಾಟ
  • Share this:
ಕರ್ನೂಲ್ (ಏ. 15): ನೆರೆಯ ಆಂಧ್ರಪ್ರದೇಶದಲ್ಲಿ ನಿತ್ಯ ನಾಲ್ಕೈದು ಸಾವಿರ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಲಸಿಕೆ ಹಾಕಿಸಿಕೊಳ್ಳಿ ಎಂದು ಕೇಳಿಕೊಂಡಿದ್ದೇ ಬಂತು. ಜನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ಕೋವಿಡ್ ನಿಯಮಗಳನ್ನು ಗಾಳಿ ತೂರಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೈರುಪಲ್ಲ ಎಂಬ ಹಳ್ಳಿಯಲ್ಲಿ ಸಾವಿರಾರು ಜನ ಒಂದೆಡೆ ಸೇರಿ ಸಗಣಿ ಎರಚಾಡಿಕೊಂಡಿದ್ದಾರೆ. ಯುಗಾದಿ ಹಬ್ಬದ ಮರುದಿನ ಈ ಭಾಗದಲ್ಲಿ ಸಗಣಿ ಎರಚಾಡುವ ಪದ್ಧತಿ ಇದೆ. ಕೊರೋನಾ 2ನೇ ಅಲೆ ಸಂದರ್ಭದಲ್ಲೂ ಇಲ್ಲಿನ ಜನ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದಿಂಚು ಅಂತರವಿಲ್ಲದೆ 4 ಸಾವಿರಕ್ಕೂ ಹೆಚ್ಚು ಜನ ಒಂದೆಡೆ ಸೇರಿ ಪರಸ್ಪರ ಸಗಣಿಯನ್ನು ಎರಚಾಡಿಕೊಂಡಿದ್ದಾರೆ.ಈ ಭಾಗದಲ್ಲಿ ಹೀಗೆ ಸಗಣಿಯನ್ನು ಎರಚಾಡಿಕೊಳ್ಳುವುದಕ್ಕೆ ಪಿಡಕಲಂ ಸಮರಂ ಎನ್ನಲಾಗುತ್ತದೆ. ಇಲ್ಲಿನ ದೈವ ವೀರಭದ್ರನಿಗಾಗಿ ಗ್ರಾಮಸ್ಥರು ಪಿಡಕಲಂ ಸಮರಂನ ಆಚರಿಸುತ್ತಾರೆ. ಹಬ್ಬದ ಮರು ದಿನ ಊರ ಜನರೆಲ್ಲಾ ಒಂದೆಡೆ ಸೇರುತ್ತಾರೆ. ಭಾರೀ ಪ್ರಮಾಣದಲ್ಲಿ ಹಸುವಿನ ಸಗಣಿಯನ್ನು ಸಂಗ್ರಹಿಸಿಡಲಾಗುತ್ತೆ. ಊರಿನ ಜನ ಎರಡು ಗುಂಪುಗಳಾಗಿ ಪರಸ್ಪರ ಸಗಣಿಯನ್ನು ಎರಚಾಡಿಕೊಳ್ಳುತ್ತಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.ಕೊರೋನಾ 2ನೇ ಅಲೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಜಾತ್ರೆಗಳು, ಉತ್ಸವಗಳು, ಭಾರೀ ಸಂಖ್ಯೆ ಜನ ಒಂದೆಡೆ ಸೇರುವುದಕ್ಕೆ ನಿರ್ಬಂಧವೇರಿದೆ. ಅದರಾಚೆಗೂ ಆಂಧ್ರದಲ್ಲಿ ಈ ರೀತಿ ನಡೆದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸಗಣಿ ಎರಚಾಟದಲ್ಲಿ ತೊಡಗಿದ್ದ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರದ ಮಾತಂತೂ ಕೇಳಲೇಬೇಡಿ. ಇಂಥ ಘಟನೆಗಳೇ ಕೊರೋನಾ ಸೂಪರ್ ಸ್ಪ್ರೆಡರ್​ ಹಬ್ಬಲು ಕಾರಣ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಲೇ ಪ್ರತಿಕ್ರಿಯಿಸಿದ ಕರ್ನೂಲ್ ಎಸ್ಪಿ ಫಕೀರಪ್ಪ, ಆಚರಣೆಗೂ ಮುನ್ನವೇ ಆಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಸೂಚಿಸಲಾಗಿತ್ತು. ಆದರೆ ಆಯೋಜಕರು ನಿಯಮಗಳನ್ನು ಮೀರಿದ್ದಾರೆ. ಆಚರಣೆ ವೇಳೆ ಪರಿಸ್ಥಿತಿ ಕೈ ಮೀರಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಳೆದ 24 ಗಂಟೆಯಲ್ಲಿ ಕರ್ನೂಲ್ ಜಿಲ್ಲೆಯಲ್ಲಿ 386 ಪಾಸಿಟಿವ್ ಕೇಸ್​ಗಳು ದಾಖಲಾಗಿವೆ.

(ವರದಿ : ಕಾವ್ಯಾ ವಿ)
Published by: Seema R
First published: April 15, 2021, 7:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories