ಮೊಬೈಲ್​​ ಖರೀದಿಸಿದರೆ 1. ಕೆ.ಜಿ ಈರುಳ್ಳಿ ಉಚಿತ; ತಮಿಳುನಾಡು ಮೊಬೈಲ್​ ಮಳಿಗೆಯಲ್ಲಿ ಹೀಗೊಂದು ಆಫರ್​

35 ವರ್ಷದ ಸರವಣ ಕುಮಾರ್​ 8 ವರ್ಷಗಳಿಂದ ಮೊಬೈಲ್​ ಅಂಗಡಿ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಅಥವಾ ಎರಡು ಮೊಬೈಲ್​ಗಳು ಸೇಲ್​ ಆಗುತ್ತಿದ್ದವು. ಆದರೆ ಮೊಬೈಲ್​ ಖರೀದಿಸಿದರೆ 1 ಕೆ.ಜಿ ಈರುಳ್ಳಿ ಉಚಿತ ಪಡೆಯಿರಿ ಎಂಬ ಆಫರ್​ನಿಂದಾಗಿ ವ್ಯಾಪಾರದಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂದು ಹೇಳುತ್ತಾರೆ.

news18-kannada
Updated:December 7, 2019, 7:45 PM IST
ಮೊಬೈಲ್​​ ಖರೀದಿಸಿದರೆ 1. ಕೆ.ಜಿ ಈರುಳ್ಳಿ ಉಚಿತ; ತಮಿಳುನಾಡು ಮೊಬೈಲ್​ ಮಳಿಗೆಯಲ್ಲಿ ಹೀಗೊಂದು ಆಫರ್​
ಈರುಳ್ಳಿ
  • Share this:
ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರು ದರ ಏರಿಕೆಯಿಂದಾಗಿ ಈರುಳ್ಳಿ ಕೊಂಡು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಮಿಳುನಾಡಿನ ಮೊಬೈಲ್​ ಮಾರಾಟಗಾರರೊಬ್ಬರು ಇದನ್ನೇ ನೆಪವಾಗಿಟ್ಟುಕೊಂಡು ಗ್ರಾಹಕರಿಗೆ ಈರುಳ್ಳಿ ಆಫರ್​ ಬಿಟ್ಟಿದ್ದಾರೆ.

ತಾಂಜವೂರು ಜಿಲ್ಲೆಯ ಪಟ್ಟುಕೊಟ್ಟೈ ತಲಯಾರಿ ಸ್ಟ್ರೀಟ್​​ನಲ್ಲಿರುವ ಎಸ್​ಟಿಆರ್​ ಮೊಬೈಲ್​ ಮಾರಾಟ ಮಳಿಗೆಯ ಮಾಲೀಕ, ತಮ್ಮ ಅಂಗಡಿಯಲ್ಲಿ ಮೊಬೈಲ್​ ಕೊಂಡರೆ 1 ಕೆ.ಜಿ ಈರುಳ್ಳಿ ಉಚಿತವಾಗಿ ನೀಡುವುದಾಗಿ ಆಫರ್​ ನೀಡಿದ್ದಾರೆ. ಈ ಆಫರ್​ ಗಮನಿಸಿದ ಗ್ರಾಹಕರು ಮೊಬೈಲ್​ ಜೊತೆಗೆ ನೀರುಳ್ಳಿ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್​ಟಿಆರ್​ ಮೊಬೈಲ್​ ಅಂಗಡಿ ಮಾಲೀಕ ಸರವಣ ಕುಮಾರ್​ ‘ಪಟ್ಟುಕೊಟ್ಟೈನಲ್ಲಿ  ಇಂತಹ ಆಫರ್​ ಯಾರು ಹೊರಡಿಸಿಲ್ಲ. ಈ ಆಫರ್​ ಹೊರಡಿಸಿರುವುದರಿಂದ ನನ್ನ ಅಂಗಡಿಗೆ ಬರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ‘ ಎಂದಿದ್ದಾರೆ.



35 ವರ್ಷದ ಸರವಣ ಕುಮಾರ್​ 8 ವರ್ಷಗಳಿಂದ ಮೊಬೈಲ್​ ಅಂಗಡಿ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಅಥವಾ ಎರಡು ಮೊಬೈಲ್​ಗಳು ಸೇಲ್​ ಆಗುತ್ತಿದ್ದವು. ಆದರೆ ಮೊಬೈಲ್​ ಖರೀದಿಸಿದರೆ 1 ಕೆ.ಜಿ ಈರುಳ್ಳಿ ಉಚಿತ ಪಡೆಯಿರಿ ಎಂಬ ಆಫರ್​ನಿಂದಾಗಿ ವ್ಯಾಪಾರದಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂದು ಹೇಳುತ್ತಾರೆ.

ಇನ್ನು ಮಹಿಳೆಯರಂತೂ ಈರುಳ್ಳಿ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾದು ಕುಳಿತ್ತಿದ್ದಾರೆ. ದೇಶದ ಮೆಟ್ರೋ ಸಿಟಿಗಳಾದ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್​, ಪುಣೆ ಮತ್ತು ಅಹಮದಾಬಾದ್​ಗಳಲ್ಲಿ ಈರುಳ್ಳಿ ಬೆಲೆ 150ರ ಗಡಿ ದಾಟಿದೆ.  ತಮಿಲುನಾಡಿನಲ್ಲಿ ಈರುಳ್ಳಿ ಬೆಲೆ 140 ರಿಂದ 160 ರೂ. ಇದೆ.

ಇದನ್ನೂ ಓದಿ: Salman Khan: ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿ; ಬಿಗ್ ಬಾಸ್ ವೇದಿಕೆಯಲ್ಲಿ ‌ಕಿಚ್ಚನ ಜೊತೆ ಸಲ್ಮಾನ್​ ಖಾನ್​​ಇದನ್ನೂ ಓದಿ:  Google Map: ಮಹಿಳೆಯರ ಸುರಕ್ಷತೆಗಾಗಿ ಗೂಗಲ್​ ಮ್ಯಾಪ್​ ಪರಿಚಯಿಸುತ್ತಿದೆ ಹೊಸ ಫೀಚರ್​​

 

 
First published: December 7, 2019, 7:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading