• Home
  • »
  • News
  • »
  • national-international
  • »
  • Cheating: ಹೆಣ್ಣು ಕೊಟ್ಟ ಮಾವನಿಗೆ 107 ಕೋಟಿಯ ಟೋಪಿ ಹಾಕಿದ ಅಳಿಯ

Cheating: ಹೆಣ್ಣು ಕೊಟ್ಟ ಮಾವನಿಗೆ 107 ಕೋಟಿಯ ಟೋಪಿ ಹಾಕಿದ ಅಳಿಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂರು ತಿಂಗಳ ಹಿಂದೆ ಅಲುವಾ ಪೊಲೀಸರಿಗೆ ಹಸನ್ ನೀಡಿದ ದೂರಿನ ಪ್ರಕಾರ, ಉದ್ಯಮಿಯ ಕೆಲವು ಆಸ್ತಿಗಳ ಮಾಲೀಕತ್ವವನ್ನು ತನ್ನ ಅಳಿಯ ಮೊಹಮ್ಮದ್ ಹಫೀಜ್ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

  • Share this:

ಈಗಂತೂ ಯಾರು? ಯಾವಾಗ? ಹೇಗೆ? ಯಾರಿಗೆ ಮೋಸ ಮಾಡುತ್ತಾರೆ ಅಂತ ಊಹಿಸುವುದಕ್ಕೂ ಸಹ ಸಾಧ್ಯವಾಗುವುದಿಲ್ಲ ನೋಡಿ. ಹಣದ  (Money) ಆಸೆಗೆ ಮತ್ತು ಅಪಾರವಾದ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಕೆಲವು ವಂಚಕರು (Cheaters) ಸ್ವಂತ ಬಂಧುಗಳಂತಲೂ (Relatives) ನೋಡದೆ ಸಲೀಸಾಗಿ ವಂಚನೆ ಮಾಡುತ್ತಿದ್ದಾರೆ. ಈಗ ಇಂತಹವರನ್ನ ನಂಬಬಹುದು ಅಂತ ಸುಲಭವಾಗಿ ಹೇಳುವುದಕ್ಕೆ ಆಗುವುದಿಲ್ಲ ನೋಡಿ. ಹಣ ದರೋಡೆ (Robbery)  ಮಾಡುವುದಕ್ಕೆ ಮತ್ತು ಜನರನ್ನು ದೋಚುವುದಕ್ಕೆ ಕೆಲ ಕಿಡಿಗೇಡಿಗಳು ಅವರ ಪ್ರಾಣವನ್ನು ಸಹ ತೆಗೆಯಲು ಹಿಂಜರಿಯುತ್ತಿಲ್ಲ. ರಸ್ತೆಯಲ್ಲಿ ಹೋಗುವ ಒಂಟಿ ಮಹಿಳೆಯರ ಕತ್ತಿನಲ್ಲಿರುವ ಚೈನ್ ಗಳನ್ನು (Chain Snatch) ಮತ್ತು ಮೊಬೈಲ್ ಗಳನ್ನು ಕಸಿದುಕೊಂಡು (Mobile Theft) ಹೋಗುವುದರಿಂದ ಹಿಡಿದು ದೊಡ್ಡ ದೊಡ್ಡ ವಂಚನೆಗಳ (Crime News) ಪ್ರಕರಣಗಳ ಬಗ್ಗೆ ಟಿವಿ ನ್ಯೂಸ್ ನಲ್ಲಿ ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅಳಿಯ ಮೋಸ ಮಾಡಿದ್ದಾಗಿ ಆರೋಪಿಸಿದ ಮಾವ


ಎಷ್ಟೋ ಹಣದ ವಂಚನೆ ಪ್ರಕರಣಗಳಲ್ಲಿ ಹೊರಗಿನವರು ಬಿಡಿ, ಸ್ವಂತದವರು ಅಂತ ಅನ್ನಿಸಿಕೊಂಡು ತಮ್ಮ ಮನೆಯಲ್ಲಿ ಇರುವವರೇ ಶಾಮೀಲಾಗಿರುವುದು ಇದೆ ಅಂತ ಹೇಳಬಹುದು. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಇಲ್ಲಿ ಮಗಳು ಕೊಟ್ಟ ಮಾವನಿಗೆ ಅಳಿಯನೊಬ್ಬ ಮೋಸ ಮಾಡಿದ್ದಾನೆ ಎಂದು ಮಾವ ಆರೋಪಿಸಿದ್ದಾರೆ ನೋಡಿ.


ದುಬೈ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ ಲಹಿರ್ ಹಸನ್ ಅವರ ಮಗಳು 2017 ರಲ್ಲಿ ಕಾಸರಗೋಡಿನ ನಿವಾಸಿಯಾದ ಕೇರಳ ವ್ಯಕ್ತಿಯನ್ನು ಮದುವೆಯಾಗಿದ್ದರು.


107 ಕೋಟಿ ವಂಚನೆ


ಐದು ವರ್ಷಗಳ ನಂತರ ಅಂದರೆ ಈಗ 2022 ರಲ್ಲಿ ಅವರ ಅಳಿಯ ಒಂದಲ್ಲ, ಎರಡಲ್ಲ ಬರೋಬ್ಬರಿ 107 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಮಾವ ಹಸನ್ ಅವರು ಆರೋಪಿಸಿದ್ದಾರೆ.


ಇವರು ಮಗಳ ಮದುವೆಯಲ್ಲಿ ತನ್ನ ಮಗಳಿಗೆ ಉಡುಗೊರೆಯಾಗಿ 1,000 ಸವರನ್ ಚಿನ್ನದ ಆಭರಣಗಳನ್ನು ನೀಡಿದ್ದರಂತೆ ಎಂದು ಹೇಳಲಾಗುತ್ತಿದೆ. ಇಷ್ಟು ಚಿನ್ನಾಭರಣ ನೀಡಿದರೂ ಸಹ ಅಳಿಯನು ಹಣದ ವಂಚನೆ ಮಾಡಿದ್ದಾನೆ ಅಂತ ಹೇಳಿದ್ದಾರೆ.


ಅಳಿಯನ ಬಗ್ಗೆ ದೂರು ನೀಡಿದ ಹಸನ್


ಮೂರು ತಿಂಗಳ ಹಿಂದೆ ಅಲುವಾ ಪೊಲೀಸರಿಗೆ ಹಸನ್ ನೀಡಿದ ದೂರಿನ ಪ್ರಕಾರ, ಉದ್ಯಮಿಯ ಕೆಲವು ಆಸ್ತಿಗಳ ಮಾಲೀಕತ್ವವನ್ನು ತನ್ನ ಅಳಿಯ ಮೊಹಮ್ಮದ್ ಹಫೀಜ್ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.


ಇದರಲ್ಲಿ ಭಾಗಿಯಾಗಿರುವ ಮೊತ್ತವು 100 ಕೋಟಿ ರೂಪಾಯಿಗಿಂತಲೂ ಹೆಚ್ಚಿರುವುದರಿಂದ ಮತ್ತು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಗೋವಾದಲ್ಲಿರಬಹುದೆಂದು ಹೇಳಲಾಗುತ್ತಿದೆ. ಪ್ರಕರಣದ ತನಿಖೆಯನ್ನು ನವೆಂಬರ್ 24 ಎಂದರೆ ಗುರುವಾರದಂದು ಕೇರಳ ಪೊಲೀಸರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.


ಇದನ್ನೂ ಓದಿ:  Honeytrap: 'ಹನಿ' ಹಿಂದೆ ಹೋಗಿ ಮಾನದ ಜೊತೆ ಹಣ ಕಳೆದುಕೊಂಡ ವೃದ್ಧ! ಹೆಂಡತಿಯನ್ನೇ ಬಿಟ್ಟು 'ಟ್ರ್ಯಾಪ್' ಮಾಡಿದ ಗಂಡ!


ಮಾಧ್ಯಮಕ್ಕೆ ಹೇಳಿಕೆ ನೀಡಿದ ಹಸನ್


ಅಲುವಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಅಥವಾ ವಿಚಾರಣೆಗಾಗಿ ಅವನನ್ನು ಕರೆಯಲು ಸಹ ವಿಫಲರಾಗಿದ್ದಾರೆ ಮತ್ತು ಅವನ ಬಳಕೆಗಾಗಿ ನೀಡಲಾದ 1.5 ಕೋಟಿ ಮೌಲ್ಯದ ಕಾರನ್ನು ಸಹ ಅವರಿಂದ ಇನ್ನುವರೆಗೂ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹಸನ್ ಟಿವಿ ಚಾನೆಲ್ ಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.


ಸುಳ್ಳು ಹೇಳಿ ಹಣ ಪಡೆದಿದ್ದ ಅಳಿಯ


ಜಾರಿ ನಿರ್ದೇಶನಾಲಯದ ದಾಳಿಯ ನಂತರ ಅವರ ಮೇಲೆ ವಿಧಿಸಲಾದ ದಂಡವನ್ನು ಪಾವತಿಸಲು ತಮ್ಮ ಅಳಿಯ ಸುಮಾರು 4 ಕೋಟಿ ರೂಪಾಯಿ ಕೇಳುವುದರೊಂದಿಗೆ ವಂಚನೆಯನ್ನು ಶುರು ಮಾಡಿದರು ಎಂದು ಹಸನ್ ಅವರು ಹೇಳಿದರು.


ನಂತರ, ಭೂಮಿ ಖರೀದಿಸಲು ಅಥವಾ ಪಾದರಕ್ಷೆಗಳ ಒಂದು ದೊಡ್ಡ ಶೋ ರೂಂ ತೆರೆಯಲು ಹೀಗೆ ಅನೇಕ ರೀತಿಯ ನೆಪಗಳನ್ನು ಹೇಳಿ ಅವರ ಅಳಿಯ ಅವರಿಂದ 92 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾನೆ ಎಂದು ಹಸನ್ ಟಿವಿ ಚಾನೆಲ್ ಗೆ ತಿಳಿಸಿದರು.


ಇದನ್ನೂ ಓದಿ:  Queen Cleopatra: ಈಜಿಪ್ಟಿನ ದೇವಾಲಯದ ಕೆಳಗೆ ಸುರಂಗ ಪತ್ತೆ, ಕ್ಲಿಯೋಪಾತ್ರಳ ಸಮಾಧಿಯ ಮಹತ್ವದ ಸುಳಿವು!


ಅಳಿಯನಿಗೆ ಮತ್ತಿಬ್ಬರ ಸಾಥ್


ಇದೆಲ್ಲವನ್ನೂ ಹಸನ್ ಅವರ ಅಳಿಯ ಒಬ್ಬನೇ ಏಕಾಂಗಿಯಾಗಿ ಮಾಡಲಿಲ್ಲ, ಅವರ ಜೊತೆಯಲ್ಲಿ ಅಕ್ಷಯ್ ಥಾಮಸ್ ವೈದ್ಯನ್ ಎಂಬ ಸಹಚರನು ಇದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಸನ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರಿಬ್ಬರ ಹೆಸರನ್ನು ಹೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Published by:Mahmadrafik K
First published: