ಪಶ್ಚಿಮಬಂಗಾಳಕ್ಕೂ ವ್ಯಾಪಿಸಿದ ಪೌರತ್ವ ತಿದ್ದುಪಡಿ ಮಸೂದೆ ಕಿಚ್ಚು; ಹೆದ್ದಾರಿಗಳಲ್ಲಿ ಟೈಯರ್​ಗೆ ಬೆಂಕಿ ಹಚ್ಚಿ ಆಕ್ರೋಶ

ಪೌರತ್ವ ತಿದ್ದುಪಡಿ ಮಸೂದೆಯನ್ನು ಬಂಗಾಳದಲ್ಲಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮಸೂದೆ ವಿರೋಧಿಸಿ ರಾಜ್ಯದಲ್ಲಿ ಸೋಮವಾರದಿಂದ ಬೃಹತ್ ಪ್ರಮಾಣದಲ್ಲಿ ಸರಣಿ ಪ್ರತಿಭಟನೆ ಆರಂಭಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೆನ್ನೆ ಎಚ್ಚರಿಕೆ ನೀಡಿದ್ದರು.

HR Ramesh | news18-kannada
Updated:December 14, 2019, 12:55 PM IST
ಪಶ್ಚಿಮಬಂಗಾಳಕ್ಕೂ ವ್ಯಾಪಿಸಿದ ಪೌರತ್ವ ತಿದ್ದುಪಡಿ ಮಸೂದೆ ಕಿಚ್ಚು; ಹೆದ್ದಾರಿಗಳಲ್ಲಿ ಟೈಯರ್​ಗೆ ಬೆಂಕಿ ಹಚ್ಚಿ ಆಕ್ರೋಶ
ಬಂಗಾಳದಲ್ಲಿ ಪ್ರತಿಭಟನೆ ವೇಳೆ ವಾಹನಕ್ಕೆ ಬೆಂಕಿ ಹಚ್ಚಿರುವುದು.
  • Share this:
ಕೋಲ್ಕತ್ತ (ಪಶ್ಚಿಮಬಂಗಾಳ): ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ  ಹಿಂಸಾಚಾರ ಭುಗಿಲೆದ್ದಿದ್ದು, ಹೋರಾಟದ ಕಿಚ್ಚು ಪಶ್ಚಿಮಬಂಗಾಳಕ್ಕೂ ವ್ಯಾಪಿಸಿದೆ.

ಪಶ್ಚಿಮಬಂಗಾಳದ ಹೌರ್ಹಾ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಮತ್ತು ಕೋನಾ ಎಕ್ಸ್​ಪ್ರೆಸ್​ವೇನಲ್ಲಿ ಪ್ರತಿಭಟನಾಕಾರರು ರಸ್ತೆ ತಡೆದು, ಟೈಯರ್​ಗೆ ಬೆಂಕಿ ಹಚ್ಚಿದ್ದಾರೆ. ಹಲವು ವಾಹನಗಳಿಗೂ ಬೆಂಕಿ ಹಾಕಲಾಗಿದ್ದು, ಸ್ಥಳಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಸಕ್ರೈಲ್​ ಠಾಣೆಗೆ ಬೆಂಕಿ ಇಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಪಾಲ ಜಗದೀಪ್ ಧನ್ಕಾರ್ ಅವರು, ರಾಜ್ಯದ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಹತಾಷೆ ಮತ್ತು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

"ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಲ್ಲಿ ಸಂಕಟ ಮತ್ತು ನೋವುಂಟು ಮಾಡಿದೆ. ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವಾಗ ‘ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯಿಂದ ನಡೆದುಕೊಳ್ಳುತ್ತೇನೆ,' ಎಂದು ಹೇಳಿದಂತೆ ನಡೆಯಬೇಕು.  ಮತ್ತು ನಾನು ಕೂಡ ರಾಜ್ಯಪಾಲನಾಗಿ ‘ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸಲು, ರಕ್ಷಿಸಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ’ ನಡೆದುಕೊಳ್ಳುತ್ತೇನೆ," ಎಂದು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್​ ಮಾಡಿ ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.

ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪಶ್ಚಿಮಬಂಗಾಳದ ಸೀಲ್ಡಾ ವಲಯದ ಬರಾಸತ್​- ಹಸ್ನಾಬಾದ್​ ಭಾಗದಲ್ಲಿ ಬೆಳಗ್ಗೆ 6.25ರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಉಳಿದ ಕೆಲವು ಮಾರ್ಗಗಳ ರೈಲು ಸಂಚಾರ ತಡೆಹಿಡಿಯಲಾಗಿದೆ.

ಇದನ್ನು ಓದಿ: ಪೌರತ್ವ ತಿದ್ದುಪಡಿ ವಿರೋಧಿ ಹೋರಾಟ, ಪೊಲೀಸರ ಗುಂಡಿಗೆ ಬಲಿಯಾದ 17 ವರ್ಷದ ಬಾಲಕ; ಈಶಾನ್ಯ ಭಾರತದ ಭಾವನೆಯನ್ನು ಕೆಣಕಿದ ಸಾವು

ಪೌರತ್ವ ತಿದ್ದುಪಡಿ ಮಸೂದೆಯನ್ನು ಬಂಗಾಳದಲ್ಲಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮಸೂದೆ ವಿರೋಧಿಸಿ ರಾಜ್ಯದಲ್ಲಿ ಸೋಮವಾರದಿಂದ ಬೃಹತ್ ಪ್ರಮಾಣದಲ್ಲಿ ಸರಣಿ ಪ್ರತಿಭಟನೆ ಆರಂಭಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೆನ್ನೆ ಎಚ್ಚರಿಕೆ ನೀಡಿದ್ದರು.
First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ