ಮಹಾರಾಷ್ಟ್ರದಲ್ಲಿ ಕಾಲುವೆಗೆ ಉರುಳಿದ ಬಸ್​; 14 ವಿದ್ಯಾರ್ಥಿಗಳಿಗೆ ಗಾಯ

ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಆಗಿಲ್ಲ. ಗಾಯಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

Latha CG | news18
Updated:August 13, 2019, 11:59 AM IST
ಮಹಾರಾಷ್ಟ್ರದಲ್ಲಿ ಕಾಲುವೆಗೆ ಉರುಳಿದ ಬಸ್​; 14 ವಿದ್ಯಾರ್ಥಿಗಳಿಗೆ ಗಾಯ
ಅಪಘಾತದ ದೃಶ್ಯ
  • News18
  • Last Updated: August 13, 2019, 11:59 AM IST
  • Share this:
 ಮುಂಬೈ,(ಆ.13): ಇಂದು ಬೆಳಗ್ಗೆ ಮಹಾರಾಷ್ಟ್ರದ ಪಾಲ್ಗಾರ್​​ನ ಬಳಿ ದುರಂತವೊಂದು ಸಂಭವಿಸಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್​ವೊಂದು ಕಾಲುವೆಗೆ ಉರುಳಿದೆ. ಈ ಘಟನೆಯಲ್ಲಿ ಸುಮಾರು 14 ಮಕ್ಕಳು ಗಾಯಗೊಂಡಿದ್ಧಾರೆ ಎಂದು ತಿಳಿದುಬಂದಿದೆ.

ಮುಂಬೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಪಾಲ್ಗಾರ್​ ಬಳಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಆಗಿಲ್ಲ. ಗಾಯಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.ಭಾರೀ ಪ್ರವಾಹಕ್ಕೆ ತತ್ತರಿಸಿದ ಚಿಕ್ಕಮಗಳೂರು; ನೆಲಕ್ಕುರುಳಿದ 600ಕ್ಕೂ ಹೆಚ್ಚು ಮನೆಗಳು!ಇಂದು ಬೆಳಗ್ಗೆ ಸುಮಾರು 7 ಗಂಟೆಯ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ