ಇಸ್ಲಾಮಾಬಾದ್: ಸೇತುವೆಯಿಂದ (ravine) ಕೆಳಗೆ ಬಸ್ವೊಂದು (Bus) ಉರುಳಿ ಬಿದ್ದು 41ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನೈರುತ್ಯ ಪಾಕಿಸ್ತಾನದ (Pakistan) ಬಲೂಚಿಸ್ತಾನದ (Balochistan) ಪ್ರಾಂತ್ಯದಲ್ಲಿ ನಡೆದಿದೆ. ಬಲೂಚಿಸ್ತಾನ ಪ್ರಾಂತ್ಯದ ಲಾಸ್‌ಬೆಲಾ (Lasbela) ಜಿಲ್ಲೆಯ ಹಿರಿಯ ಅಧಿಕಾರಿ ಹಮ್ಜಾ ಅಂಜುಮ್ (Assistant Commissioner Hamza Anjum) ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಶವಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ವಾಹನವು (Vehicle) ಸೇತುವೆಗೆ ಡಿಕ್ಕಿ ಹೊಡೆದು, ಕಂದರಕ್ಕೆ ಬಿದ್ದು ಬೆಂಕಿ (Fire) ಹೊತ್ತಿಕೊಂಡಿದೆ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಕಂದರಕ್ಕೆ ಬಿದ್ದ ಬಸ್
ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಲಾಸ್ಬೆಲಾ ಬಳಿ ಯು-ಟರ್ನ್ ತೆಗೆದುಕೊಳ್ಳುವಾಗ ಬಸ್ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಕಂದರಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಕೇವಲ ಒಂದು ಮಗು, ಮಹಿಳೆ ಸೇರಿದಂತೆ ಮೂವರನ್ನು ಮಾತ್ರ ಜೀವಂತವಾಗಿ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
48 ಜನರಲ್ಲಿ 41 ಮಂದಿ ಸಾವು, ಚಾಲಕನ ಬೇಜವಾಬ್ದಾರಿತನವೇ ಘಟನೆಗೆ ಕಾರಣ
ಬಸ್ ಕ್ವೆಟ್ಟಾದಿಂದ ಕರಾಚಿಗೆ ತೆರಳುತ್ತಿತ್ತು. ಸುಮಾರು 48 ಮಂದಿ ಪ್ರಯಾಣಿಕರು ಬಸ್ನಲ್ಲಿದ್ದರು. 48 ಜನರಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ. ಚಾಲಕ ನಿದ್ರೆಗೆ ಜಾರಿದ್ದರಿಂದ ಅಥವಾ ದೂರದ ಪ್ರಯಾಣವಾದ್ದರಿಂದ ಶೀಘ್ರವೇ ತಲುಪುವ ಸಲುವಾಗಿ ವೇಗವಾಗಿ ಬಸ್ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಸದಯ ಈ ದುರಂತಕ್ಕೆ ಕಾರಣವೇನು ಎಂಬುವುದನ್ನು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ವ್ಯಾನ್ ಕಂದರಕ್ಕೆ ಬಿದ್ದು 22 ಮಂದಿ ಸಾವು
ಈ ಹಿಂದೆ ಜೂನ್ನಲ್ಲಿ ಬಲೂಚಿಸ್ತಾನದಲ್ಲಿ ಪ್ರಯಾಣಿಕರ ವ್ಯಾನ್ ಕಂದರಕ್ಕೆ ಬಿದ್ದು, ಒಂದೇ ಕುಟುಂಬದ ಒಂಬತ್ತು ಮಂದಿ ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದರು.
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು
ಪಾಕಿಸ್ತಾನವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 262.6ಕ್ಕೆ ಇಳಿಕೆ ಕಂಡಿದೆ. ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಪ್ರಕಾರ ದೇಶದ ಕರೆನ್ಸಿ ಮೌಲ್ಯ ಶುಕ್ರವಾರ 7.17 ರೂಪಾಯಿ ಅಥವಾ ಶೇ 2.73ರಷ್ಟು ಕುಸಿತ ದಾಖಲಿಸಲಾಗಿದೆ.
1999ರಿಂದ ಶುರುವಾದಾಗಿನಿಂದ ಇದು ಅತಿ ದೊಡ್ಡ ಅಪಮೌಲ್ಯ
ಪಾಕಿಸ್ತಾನದ ರೂಪಾಯಿ ಮೌಲ್ಯವು ಇಂಟರ್‌ಬ್ಯಾಂಕ್‌ನಲ್ಲಿ ಗುರುವಾರದಿಂದ 34 ರೂಪಾಯಿಗಳಷ್ಟು ಅಪಮೌಲ್ಯಗೊಂಡಿದೆ. ಇದು, ಹೊಸ ವಿನಿಮಯ ದರ ವ್ಯವಸ್ಥೆ 1999ರಿಂದ ಶುರುವಾದಾಗಿನಿಂದ ಅತಿ ದೊಡ್ಡ ಅಪಮೌಲ್ಯ ಎನಿಸಿದೆ.
ಸುಖೋಯ್-30 ಹಾಗೂ ಮಿರಾಜ್-2000 ಪತನ
ನಿನ್ನೆಯಷ್ಟೇ ವಾಯುಪಡೆಯ ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎರಡೂ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಹೊರಟಿದ್ದವು. ಇಲ್ಲಿ ವಾಯುಪಡೆಯ ಅಭ್ಯಾಸ ನಡೆಯುತ್ತಿತ್ತು. ಸೇನಾ ಮೂಲಗಳ ಪ್ರಕಾರ, ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ:Pakistan: ಆರ್ಥಿಕ ಹಿಂಜರಿತದಲ್ಲಿರುವ ಪಾಕಿಸ್ತಾನಕ್ಕೆ ಹೊಸ ಕಂಟಕ, ನಿಗೂಢ ಕಾಯಿಲೆಯಿಂದ ಹಲವರು ಸಾವು!
ಅಪಘಾತಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ
ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆಯೇ ಎಂಬ ಬಗ್ಗೆ ವಾಯುಪಡೆ ತನಿಖೆ ನಡೆಸುತ್ತಿದೆ. ಸುಖೋಯ್‌ನಲ್ಲಿ 2 ಪೈಲಟ್‌ಗಳು ಮತ್ತು ಮಿರಾಜ್‌ನಲ್ಲಿ ಒಬ್ಬ ಪೈಲಟ್ ಇದ್ದ. ಈ ಅಪಘಾತದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ