• Home
  • »
  • News
  • »
  • national-international
  • »
  • Kerala Accident: ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ: 2 ಬಸ್‌ಗಳು ಡಿಕ್ಕಿ, 9 ಮಂದಿ ಸಾವು; 40 ಮಂದಿಗೆ ಗಾಯ!

Kerala Accident: ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ: 2 ಬಸ್‌ಗಳು ಡಿಕ್ಕಿ, 9 ಮಂದಿ ಸಾವು; 40 ಮಂದಿಗೆ ಗಾಯ!

ಕೇರಳ ಅಪಘಾತ

ಕೇರಳ ಅಪಘಾತ

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿ 9 ಮಂದಿ ಸಾವನ್ನಪ್ಪಿದ್ದಾರೆ. ಹೌದು ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ಪ್ರವಾಸಿ ಬಸ್ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗೆ ಡಿಕ್ಕಿ ಹೊಡೆದು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 38 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸಚಿವ ಎಂ.ಬಿ.ರಾಜೇಶ್ ಈ ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

ಪಾಲಕ್ಕಾಡ್(ಅ.06): ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಭೀಕರ ಅಪಘಾತ (Kerala Accident) ಸಂಭವಿಸಿದೆ. ಜಿಲ್ಲೆಯ ವಡಕ್ಕಂಚೇರಿಯಲ್ಲಿ ಖಾಸಗಿ ಪ್ರವಾಸಿ ಬಸ್ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಕೇರಳ ಸರ್ಕಾರದ ಸಚಿವ ಎಂ.ಬಿ.ರಾಜೇಶ್ ಅವರು ಗುರುವಾರ ಅಪಘಾತವನ್ನು ಖಚಿತಪಡಿಸಿದ್ದಾರೆ.


ಮಾಹಿತಿಯ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ನ ಹಿಂದೆ ಟೂರಿಸ್ಟ್ ಬಸ್ ಪಲ್ಟಿಯಾದ ನಂತರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸಲಿಯೋಸ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿದ್ದ ಪ್ರವಾಸಿ ಬಸ್ ಎರ್ನಾಕುಲಂನಿಂದ ಊಟಿ ಕಡೆಗೆ ಹೋಗುತ್ತಿದ್ದರೆ, ಕೆಎಸ್‌ಆರ್‌ಟಿಸಿ ಬಸ್ ಕೊಯಮತ್ತೂರು ಕಡೆಗೆ ಹೋಗುತ್ತಿತ್ತು.


ಅಪಘಾತದಲ್ಲಿ 40 ಮಂದಿಗೆ ಗಾಯ, ಐವರು ಗಂಭೀರ


ಅಪಘಾತದಲ್ಲಿ ಮೃತಪಟ್ಟವರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಐವರು ವಿದ್ಯಾರ್ಥಿಗಳು, ಓರ್ವ ಶಿಕ್ಷಕ ಮತ್ತು ಮೂವರು ಪ್ರಯಾಣಿಕರು ಸೇರಿದ್ದಾರೆ. ಒಟ್ಟು 40 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಸಚಿವ ರಾಜೇಶ್ ತಿಳಿಸಿದ್ದಾರೆ.

Published by:Precilla Olivia Dias
First published: