ಜಮ್ಮು-ಕಾಶ್ಮೀರ ಎನ್​​ಕೌಂಟರ್; ನಟೋರಿಯಸ್ ಬುರಾನ್ ವನಿ ಉಗ್ರ ತಂಡದ ಎಲ್ಲಾ 11 ಸದಸ್ಯರ ಬಲಿ ಪಡೆದ ಸೇನೆ

ಕಣಿವೆ ರಾಜ್ಯದಲ್ಲಿ 2016ರಿಂದ ಬುರಾನ್ ವನಿ ಉಗ್ರ ತಂಡ ತಮ್ಮ ಭಯೋತ್ಪಾದನಾ ಕಾರ್ಯಾಚರಣೆ ಆರಂಭಿಸಿದ ದಿನದಿಂದಲೇ ಸೇನೆಯೂ ಸಹ ಈ ತಂಡದ ಬೆನ್ನು ಬಿದ್ದಿತ್ತು. ಅಂದಿನಿಂದ ಈ ತಂಡದ ಸದಸ್ಯರನ್ನು ಹುಡುಕಿ ಹುಡುಕಿ ಎನ್​ಕೌಂಟರ್ ಮಾಡುತ್ತಿದ್ದ ಸೇನೆ 11 ಜನರ ತಂಡದಲ್ಲಿ ಈವರೆಗೆ 10 ಜನರನ್ನು ಹೊಡೆದುರುಳಿಸಿತ್ತು.

MAshok Kumar | news18
Updated:May 3, 2019, 3:27 PM IST
ಜಮ್ಮು-ಕಾಶ್ಮೀರ ಎನ್​​ಕೌಂಟರ್; ನಟೋರಿಯಸ್ ಬುರಾನ್ ವನಿ ಉಗ್ರ ತಂಡದ ಎಲ್ಲಾ 11 ಸದಸ್ಯರ ಬಲಿ ಪಡೆದ ಸೇನೆ
ಬುರಾನ್ ವನಿ ಉಗ್ರರ ತಂಡ.
  • News18
  • Last Updated: May 3, 2019, 3:27 PM IST
  • Share this:
ಜಮ್ಮು-ಕಾಶ್ಮೀರ (ಮೇ.3): ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಬುರಾನ್ ವನಿ ಎಂಬ 11 ಜನರ ನಟೋರಿಯಸ್ ಉಗ್ರಗಾಮಿಗಳ ತಂಡದ ಕೊನೆಯ ಸದಸ್ಯನಾದ ಲತೀಫ್ ಟೈಗರ್​ನನ್ನು ಭಾರತೀಯ ಸೇನೆ ಶುಕ್ರವಾರ ಹೊಡೆದುರುಳಿಸಿದೆ.

ಶೋಫಿಯಾನ್ ಜಿಲ್ಲೆಯ ಇಮಾಮ್ ಸಾಹಿಬ್ ಗ್ರಾಮದಲ್ಲಿ ಇಬ್ಬರು ಉಗ್ರರು ಅಡಗಿರುವ ಕುರಿತು ಸೇನೆಗೆ ಶುಕ್ರವಾರ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಇಂದು ಬೆಳಗ್ಗೆ ಗ್ರಾಮವನ್ನು ಸುತ್ತುವರೆದಿದ್ದ ಯೋಧರು ಮನೆ ಮನೆಗೆ ನುಗ್ಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಸೈನಿಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಸಹ ಪ್ರತಿದಾಳಿ ನಡೆಸಿದ್ದು ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ಬೆಳಗ್ಗೆಯೇ  ಸೇನೆ ಖಚಿತಪಡಿಸಿತ್ತು.

ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಎನ್​ಕೌಂಟರ್​; ಯೋಧರ ಗುಂಡಿಗೆ ಓರ್ವ ಉಗ್ರ ಬಲಿ..!

ಆದರೆ, ಆತ ಯಾರು ಎಂಬ ಮಾಹಿತಿ ಸೇನೆಗೆ ಲಭ್ಯವಾಗಿರಲಿಲ್ಲ. ತನಿಖೆಯ ನಂತರ ಮೃತ ಉಗ್ರ ಬುರಾನ್ ವನಿ ತಂಡದ 11ನೇ ಹಾಗೂ ಕೊನೆಯ ಸದಸ್ಯ ಲತೀಫ್ ಟೈಗರ್ ಎಂಬ ಮಾಹಿತಿ ಬೆಳಕಿಗೆ ಬಂದಿದ್ದು, ಕೊನೆಗೂ ಈ ತಂಡದ ಎಲ್ಲಾ ಉಗ್ರರನ್ನು ಸದೆಬಡಿದ ಕೀರ್ತಿಗೆ ಭಾರತೀಯ ಸೇನೆ ಪಾತ್ರವಾಗಿದೆ.

 ನಟೋರಿಯಸ್ ಬುರಾನ್ ವನಿ ಉಗ್ರತಂಡ : ಕಣಿವೆ ರಾಜ್ಯದಲ್ಲಿ ನಟೋರಿಯಸ್ ಬುರಾನ್ ವನಿ ಉಗ್ರರ ತಂಡ ಹುಟ್ಟಿದ್ದೆ ಒಂದು ರೋಚಕ ಕತೆ.

ಆತನ ಹೆಸರು 'ಬುರಾನ್ ಮುಜಾಫರ್ ವನಿ' ವಯಸ್ಸು ಇನ್ನೂ ಕೆವಲ 21. ಆದರೆ ತೀರಾ ಚಿಕ್ಕ ವಯಸ್ಸಿನಲ್ಲೇ ಆತನಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಜೊತೆಗೆ ನಂಟು ಬೆಳೆದಿತ್ತು. ಉಗ್ರರ ಜೊತೆ ಕಾರ್ಯನಿರ್ವಹಿಸುತ್ತಿದ್ದ ವನಿ ಕಾಶ್ಮೀರದ ಯುವಕರನ್ನು ಉಗ್ರ ಸಂಘಟನೆಯಲ್ಲಿ ಸಕ್ರೀಯಗೊಳಿಸುವ ಕೆಲಸದಲ್ಲಿ ತೊಡಗಿದ್ದ. ಪರಿಣಾಮ ಜುಲೈ 8 2016ರಲ್ಲಿ ಭಾರತೀಯ ಸೇನೆ ಈತನನ್ನು ಹೊಡೆದುರುಳಿಸಿತ್ತು.

ಈತನ ಹತ್ಯೆಯನ್ನು ಇಡೀ ಕಾಶ್ಮೀರದ ಜನ ಖಂಡಿಸಿದ್ದರು. ಈತನ ಎನ್​ಕೌಂಟರ್ ಖಂಡಿಸಿ ಸುಮಾರು 15 ಸಾವಿರ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಸಾರ್ವಜನಿಕರು ಹಾಗೂ ಸೇನೆಯ ನಡುವೆ ದೊಡ್ಡ ಕದನವೇ ನಡೆದಿತ್ತು. ಪರಿಣಾಮ 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಪರಿಣಾಮ ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಸತತ 53 ದಿನ ಕರ್ಫ್ಯೂ ವಿಧಿಸಲಾಗಿತ್ತು. ಇದು ಕಣಿವೆ ರಾಜ್ಯದ ಇತಿಹಾಸದ ಈಗಲೂ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ.

ಇದನ್ನೂ ಓದಿ : ಭಾರತೀಯ ಯೋಧರಿಗೆ ಕಂಡಿದ್ದು ಹಿಮಮಾನವನ ಹೆಜ್ಜೆಯಲ್ಲ, ಕರಡಿಯ ಪಾದದ ಗುರುತು; ನೇಪಾಳ ಸೇನೆ

ಈ ಸಂದರ್ಭದಲ್ಲಿ ಬುರಾನ್ ವನಿ ಸಾವಿಗಾಗಿ ಪ್ರತಿಕಾರ ತೀರಿಸುವ ಸಲುವಾಗಿ ಹುಟ್ಟು ಪಡೆದದ್ದೆ 'ಬುರಾನ್ ವನಿ' ಉಗ್ರರ ತಂಡ. ಈ ತಂಡದಲ್ಲಿ 11 ಜನ ಸದಸ್ಯರಿದ್ದು ಮುಖಕ್ಕೆ ಮುಸುಕು ಸಹ ಹಾಕದೆ ಪೋಟೋ ತೆಗೆದುಕೊಂಡಿದ್ದರು. ಈ ಪೋಟೋ 2016ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಈ ತಂಡ ಕಳೆದ 3 ವರ್ಷದಿಂದ ಭಾರತೀಯ ಸೇನೆಯ ಮೇಲೆ ಸತತವಾಗಿ ದಾಳಿ ನಡೆಸುತ್ತಲೇ ಬಂದಿತ್ತು.

ಎಲ್ಲಾ ಉಗ್ರರನ್ನೂ ಸದೆಬಡಿದ ಸೇನೆ : ಕಣಿವೆ ರಾಜ್ಯದಲ್ಲಿ 2016ರಿಂದ ಬುರಾನ್ ವನಿ ಉಗ್ರ ತಂಡ ತಮ್ಮ ಭಯೋತ್ಪಾದನಾ ಕಾರ್ಯಾಚರಣೆ ಆರಂಭಿಸಿದ ದಿನದಿಂದಲೇ ಸೇನೆಯೂ ಸಹ ಈ ತಂಡದ ಬೆನ್ನು ಬಿದ್ದಿತ್ತು. ಅಂದಿನಿಂದ ಈ ತಂಡದ ಸದಸ್ಯರನ್ನು ಹುಡುಕಿ ಹುಡುಕಿ ಎನ್​ಕೌಂಟರ್ ಮಾಡುತ್ತಿದ್ದ ಸೇನೆ 11 ಜನರ ತಂಡದಲ್ಲಿ ಈವರೆಗೆ 10 ಜನರನ್ನು ಹೊಡೆದುರುಳಿಸಿತ್ತು.

ಆದರೆ, ಲತೀಫ್ ಟೈಗರ್ ಮಾತ್ರ ಸೇನೆಯ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಸತತ ಎರಡು ವರ್ಷ  ಸೇನೆ ಈತನ ಬೆನ್ನುಬಿದ್ದಿದ್ದರೂ ಸೇನೆಗೆ ಆತ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದ. ಆದರೆ, ಕೊನೆಗೂ ಆತನ ಸಮಯ ಮುಗಿದಿತ್ತು. ಶುಕ್ರವಾರದ ಎನ್​ಕೌಂಟರ್​ನಲ್ಲಿ ಈತನ ಹತ್ಯೆಯಾಗುವುದರೊಂದಿಗೆ ಬುರಾನ್ ವನಿ ತಂಡದ ಎಲ್ಲಾ ಉಗ್ರರನ್ನೂ ಸದೆಬಡಿದ ಹಿರಿಮೆಗೆ ಸೈನ್ಯ ಪಾತ್ರವಾಗಿದೆ.

ಇದನ್ನೂ ಓದಿ : ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರು; ಸರ್ಕಾರ ರಚಿಸುವ ಅದೃಷ್ಟವಂತರು ಯಾರಾಗಲಿದ್ದಾರೆ?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಶ್ಮೀರದ ಪೊಲೀಸ್ ವರಿಷ್ಠಾಧಿಕಾರಿ ಎಸ್​.ಪಿ. ಪನಿ, “ಲತೀಫ್ ಟೈಗರ್ ವಿಂಟೇಜ್ ಉಗ್ರಗಾಮಿ. ಸಾಮಾನ್ಯನಂತೆ ಜನರ ನಡುವೆಯೇ ಇದ್ದ ಕಾರಣ ಇಷ್ಟು ದಿನ ಆತನನ್ನು ಹಿಡಿಯುವುದು ಸಾಧ್ಯವಾಗಿರಲಿಲ್ಲ. ಅಲ್ಲದೆ ಅಮಾಯಕ ಯುವಕರನ್ನು ತಲೆ ಕೆಡಿಸಿ ಉಗ್ರ ಸಂಘಟನೆಗೆ ಸೇರಿಸುವಲ್ಲೂ ಆತ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದ. ಕೊನೆಗೂ ಆತನನ್ನು ಸದೆಬಡಿದಿರುವುದು ಸೇನೆಯ ದೊಡ್ಡ ಸಾಧನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First published:May 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading