Burevi Cyclone: ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ಬುರೇವಿ ಚಂಡಮಾರುತ; ಕೇರಳದ 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​

Cyclone Burevi Updates: ತಮಿಳುನಾಡಿನ ಕರಾವಳಿ ತೀರಕ್ಕೆ ಇಂದು ಬುರೇವಿ ಚಂಡಮಾರುತ ಪ್ರವೇಶಿಸಲಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಾಂತಿಟ್ಟಂ, ಅಲಪ್ಪುಳ ಜಿಲ್ಲೆಗಳಲ್ಲಿ ಇಂದು ರೆಡ್ಅಲರ್ಟ್​ ಘೋಷಿಸಲಾಗಿದೆ.

ಬುರೇವಿ ಚಂಡಮಾರುತ ಹಿನ್ನೆಲೆ ಸಜ್ಜಾದ ಎನ್​ಡಿಆರ್​ಎಫ್​ ತಂಡ

ಬುರೇವಿ ಚಂಡಮಾರುತ ಹಿನ್ನೆಲೆ ಸಜ್ಜಾದ ಎನ್​ಡಿಆರ್​ಎಫ್​ ತಂಡ

  • Share this:
ಚೆನ್ನೈ (ಡಿ. 3): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಬುರೇವಿ ಚಂಡಮಾರುತ (Burevi Cyclone) ಸೃಷ್ಟಿಯಾಗಿದ್ದು, ಈ ಚಂಡಮಾರುತ ಶ್ರೀಲಂಕಾದಿಂದ ಇಂದು ತಮಿಳುನಾಡನ್ನು ಪ್ರವೇಶಿಸಲಿದೆ. ಬಳಿಕ ಕೇರಳದಲ್ಲಿ ಚಂಡಮಾರುತ ಆರ್ಭಟಿಸಲಿದೆ. ಈಗಾಗಲೇ ತಮಿಳುನಾಡಿನ ರಾಮೇಶ್ವರಂ ಕಡಲ ತೀರದಲ್ಲಿ ಭಾರೀ ಬಿರುಗಾಳಿ ಎದ್ದಿದೆ. ನಿವಾರ್ ಚಂಡಮಾರುತದ ಅಬ್ಬರ ಕಡಿಮೆಯಾದ ಬೆನ್ನಲ್ಲೇ (Burevi Cyclone) ಬುರೇವಿ ಚಂಡಮಾರುತದ ಆತಂಕ ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳನ್ನು ಗುರುಯಾಗಿಸಿಕೊಂಡು ಅಪ್ಪಳಿಸುತ್ತಿರುವ ಬುರೇವಿ ಚಂಡಮಾರುತದ ಪರಿಣಾಮ ಕರ್ನಾಟಕದ ಗಡಿಯ ಜಿಲ್ಲೆಗಳಲ್ಲೂ ಉಂಟಾಗಲಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಾಂತಿಟ್ಟಂ, ಅಲಪ್ಪುಳ ಜಿಲ್ಲೆಗಳಲ್ಲಿ ಇಂದು ರೆಡ್ಅಲರ್ಟ್​ ಘೋಷಿಸಲಾಗಿದೆ. ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. 

ಕನ್ಯಾಕುಮಾರಿಗೆ ಮೊದಲು ಅಪ್ಪಳಿಸಲಿರುವ (Burevi Cyclone) ಬುರೇವಿ ಚಂಡಮಾರುತ ತಮಿಳುನಾಡು, ಕೇರಳದಲ್ಲಿ ಉಗ್ರರೂಪ ತಾಳಲಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಇದರ ಪರಿಣಾಮ ಉಂಟಾಗಲಿದೆ. ಬುರೇವಿ ಚಮಡಮಾರುತ ಅಪ್ಪಳಿಸಲಿರುವ ದಕ್ಷಿಣ ಭಾರತದ ಮೊದಲ ರಾಜ್ಯ ತಮಿಳುನಾಡು. ಇಂದು ತಮಿಳುನಾಡಿಗೆ (Burevi Cyclone) ಬುರೇವಿ ಸೈಕ್ಲೋನ್ ಪ್ರವೇಶಿಸಲಿದೆ. ನಾಳೆ ಕೇರಳದಲ್ಲಿ ಚಂಡಮಾರುತದ ಅಬ್ಬರ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಕೇರಳದ 4 ಜಿಲ್ಲೆಗಳಲ್ಲಿ ಇಂದಿನಿಂದಲೇ ರೆಡ್ ಅಲರ್ಟ್​ ಘೋಷಿಸಲಾಗಿದೆ.ನಿನ್ನೆಯೇ ಶ್ರೀಲಂಕಾ ಕಡಲ ತೀರವನ್ನು ಅಪ್ಪಳಿಸಿರುವ ಬುರೇವಿ ಚಂಡಮಾರುತ ಇಂದು ಕನ್ಯಾಕುಮಾರಿಯ ಮೂಲಕ ತಮಿಳುನಾಡನ್ನು ಪ್ರವೇಶಿಸಲಿದೆ. ಡಿ. 5ರವರೆಗೂ ಬುರೇವಿ ಚಂಡಮಾರುತದ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಸಿವಗಂಗೈ ಮತ್ತು ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಭಾಗದಲ್ಲಿ ಡಿಸೆಂಬರ್ 6ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Weather: ಬುರೇವಿ ಚಂಡಮಾರುತದ ಎಫೆಕ್ಟ್​; ಕರ್ನಾಟಕದ ಈ ಭಾಗಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಳ

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಬುರೇವಿ ಚಂಡಮಾರುತ ತಮಿಳುನಾಡಿನ ಪಂಬನ್ ಪ್ರವೇಶಿಸಲಿದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡಿನ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಮತ್ತು ರಕ್ಷಣಾ ಪಡೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ.ಕೇರಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 2,849 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಮೂರು ದಿನಗಳ ಕಾಲ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕೇರಳದಲ್ಲಿ ಎನ್​ಡಿಆರ್​ಎಫ್​ನ 8 ತಂಡಗಳು ಈಗಾಗಲೇ ಬೀಡುಬಿಟ್ಟಿವೆ. ಕನ್ಯಾಕುಮಾರಿ, ಮಧುರೈ, ತಿರುನೆಲ್ವಲಿಯಲ್ಲೂ ಎನ್​ಡಿಆರ್​ಎಫ್​ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.
Published by:Sushma Chakre
First published: