News18 India World Cup 2019

Exit poll 2019: ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ; ಎನ್​​ಡಿಎ ಮಿತ್ರರಿಗೆ ಔತಣಕೂಟ ಏರ್ಪಡಿಸಿದ್ದ ಅಮಿತ್​​ ಶಾ

ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಏನೇ ಆಗಲಿ ನಾವು ಕೇಂದ್ರ ಚುನಾವಣೆ ಆಯೋಗ ನೀಡಬೇಕಿರುವ ತೀರ್ಪಿಗೆ ಕಾಯಬೇಕಿದೆ. 

Ganesh Nachikethu | news18
Updated:May 22, 2019, 7:25 AM IST
Exit poll 2019: ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ; ಎನ್​​ಡಿಎ ಮಿತ್ರರಿಗೆ ಔತಣಕೂಟ ಏರ್ಪಡಿಸಿದ್ದ ಅಮಿತ್​​ ಶಾ
ಅಮಿತ್​​ ಶಾ ಔತಣಕೂಟ
Ganesh Nachikethu | news18
Updated: May 22, 2019, 7:25 AM IST
ನವದೆಹಲಿ(ಮೇ.21): ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆಗೆ ಇನ್ನೇನು ಎರಡು ದಿನ ಬಾಕಿ ಉಳಿದಿದೆ. ಆಗಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ. ಇದೇ ಖುಷಿಯಲ್ಲಿ ತೇಲಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ, ಇಂದು ಮಿತ್ರಕೂಟ ಎನ್​​ಡಿಎ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಔತಣಕೂಟಲ್ಲಿ ಕೇಂದ್ರ ಸಚಿವರು ಪಾಲ್ಗೊಂಡಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಅವರು, ಔತಣಕೂಟದಲ್ಲಿ ಭಾಗಿಯಾಗಿದ್ದ ಎಲ್ಲಾ ಕೇಂದ್ರ ಸಚಿವರಿಗೂ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಕೇಂದ್ರದಲ್ಲಿ ಎನ್​​ಡಿಎ ಸರ್ಕಾರ 5 ವರ್ಷ ಸುಗಮವಾಗಿ ನಡೆಸಲು ಸಹಕರಿಸಿದ ಎಲ್ಲಾ ಮಿತ್ರಪಕ್ಷಗಳಿಗೂ ಆಭಾರಿಯಾಗಿದ್ದೇನೆ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.



ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಲಿದೆ. ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಲಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​​ಪಿ ಮೈತ್ರಿ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾದರೂ, ಪಶ್ಚಿಮ ಬಂಗಾಳದಲ್ಲಿ ಈ ಸೀಟುಗಳನ್ನು ಸರಿದೂಗಿಸಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹಾಗಾಗಿಯೇ ಅಮಿತ್​​ ಶಾ ಈ ಔತಣಕೂಟ ಆಯೋಜಿಸಿದ್ದರು ಎನ್ನಲಾಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ಹಲವು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎನ್​​ಡಿಎ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನ ಪಡೆಯಲಿದೆ. ನ್ಯೂಸ್ 24-ಚಾಣಕ್ಯ ಸಮೀಕ್ಷೆ ಪ್ರಕಾರ ಎನ್ ಡಿಎ 350 ಸ್ಥಾನ ಗಳಿಸಲಿದೆ. ಆಜ್ ತಕ್/ಇಂಡಿಯಾ ಟುಡೇ-ಆಯಕ್ಸಿಸ್ 339ರಿಂದ 365, ನ್ಯೂಸ್ 18-ಐಪಿಎಸ್ ಒಎಸ್ 336, ಟೈಮ್ಸ್ ನೌ-ವಿಎಂಆರ್ 306, ರಿಪಬ್ಲಿಕ್- ಜನ್ ಕೀ ಬಾತ್ 315 ಹಾಗೂ ಇಂಡಿಯಾ ಟಿವಿ-ಸಿಎನ್ ಎಕ್ಸ್ 315 ಸ್ಥಾನ ಗಳಿಸುವುದಾಗಿ ಸಮೀಕ್ಷೆಯಲ್ಲಿ ತಿಳಿಸಿವೆ.

ಇದನ್ನೂ ಓದಿ: ಎಕ್ಸಿಟ್​ ಪೋಲ್​ ಎಕ್ಸಾಟ್​ ಅಲ್ಲ, ಫಲಿತಾಂಶದವರೆಗೂ ಕಾಯೋಣ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಇನ್ನು ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಗೆ 5 ರಿಂದ 7 ಸೀಟು, ಕೇಸರಿ ಪಕ್ಷಕ್ಕೆ 21 ರಿಂದ 33 ಸೀಟು ಲಭ್ಯವಾಗಲಿದೆ ಎನ್ನುತ್ತಿವೆ ಸಮೀಕ್ಷೆಗಳು.

ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಏನೇ ಆಗಲಿ ನಾವು ಕೇಂದ್ರ ಚುನಾವಣೆ ಆಯೋಗ ನೀಡಬೇಕಿರುವ ತೀರ್ಪಿಗೆ ಕಾಯಬೇಕಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

-------------
First published:May 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...