News18 India World Cup 2019

ದೇಶಕಂಡ ಭ್ರಷ್ಟ ಉದ್ಯಮಿ ನೀರವ್​ ಮೋದಿ, ಚೋಕ್ಸಿ: ಅಕ್ರಮ ಬಂಗಲೆ ತೆರವುಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ


Updated:August 22, 2018, 12:25 PM IST
ದೇಶಕಂಡ ಭ್ರಷ್ಟ ಉದ್ಯಮಿ ನೀರವ್​ ಮೋದಿ, ಚೋಕ್ಸಿ: ಅಕ್ರಮ ಬಂಗಲೆ ತೆರವುಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ

Updated: August 22, 2018, 12:25 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.22): ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿಗಳು ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ, ಭ್ರಷ್ಟ ಉದ್ಯಮಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿದ ಬಂಗಲೆಗಳನ್ನು ಧ್ವಂಸಗೊಳಿಸುವಂತೆ ಮಹರಾಷ್ಟ್ರ ಸರ್ಕಾರ ಆದೇಶಿಸಿದೆ.

ನೀರವ್​ ಮೋದಿಗೆ​ ಸೇರಿದ ಐಷರಾಮಿ ಬಂಗಲೆಗಳು ರಾಯ್‌ಗಢ ಜಿಲ್ಲೆಯಲ್ಲಿವೆ. ಅಕ್ರಮ ಕಟ್ಟಿಸಿದ್ದ ಮನೆಗಳನ್ನು ಧ್ವಂಸಗೊಳಿಸಲು ಮಹಾರಾಷ್ಟ್ರ ಸರಕಾರ ಆದೇಶ ನೀಡಿದೆ. ತೆರವು ಕಾರ್ಯಾಚರಣೆ ಬೇಗ ಶುರುವಾಗಲಿದೆ ಎಂದು ರಾಜ್ಯ ಪರಿಸರ ಸಚಿವ ರಾಮ್‌ದಾಸ್ ಕದಮ್ ಹೇಳಿದ್ದಾರೆ.

ಇಬ್ಬರು ಉದ್ಯಮಿಗಳಿಗೆ ಸೇರಿದ ಅಕ್ರಮ ಕಟ್ಟಡ ಬಗ್ಗೆ ರಾಜ್ಯ ಸರಕಾರ ಯಾವುದೇ ಕ್ರಮಕೈಡಿಲ್ಲ ಎಂದು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಕೂಡಲೇ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ ಬಂಗಲೆಗಳ ತೆರವಿಗೆ ಆದೇಶ ನೀಡಿದೆ.

ಅಕ್ರಮ ಐಷರಾಮಿ''ಬಂಗಲೆಗಳ ಧ್ವಂಸಕ್ಕೆ ಅನುಮತಿ ಕೋರಿ ಸರ್ಕಾರ ಈಗಾಗಲೇ ಜಾರಿನಿರ್ದೇಶನಾಯಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ. ಇಡಿ ಅಧಿಕಾರಿಗಳು ಅನುಮತಿ ನೀಡಿದ ತಕ್ಷಣವೇ ಧ್ವಂಸಕಾರ್ಯಾಚರಣೆ ಆರಂಭಿಸಲಾಗುತ್ತದೆ'' ಎಂದು ಸಚಿವ ರಾಮ್‌ದಾಸ್ ಕದಮ್ ತಿಳಿಸಿದ್ದಾರೆ.

ಕರಾವಳಿ ಭಾಗದ ನಿಯಂತ್ರಣ ವಲಯ ಮಾನದಂಡಗಳನ್ನು ಉಲ್ಲಂಘಿಸಿ ನೀರವ್​ಮೋದಿ, ಚೋಕ್ಸಿ ಸೇರಿದಂತೆ ಹಲವರು ಅಕ್ರಮ ಕಟ್ಟಡಗಳನ್ನು ಅಲಿಬಾಗ್‌ನಲ್ಲಿ ಕಟ್ಟಿಸಿದ್ಧಾರೆ. ಅಲ್ಲದೇ ಸರ್ಕಾರದ ಅನುಮತಿ ಪಡೆಯದೇ, ಪ್ರಾಧಿಕಾರ ಸರಿಯಾದ ಯೋಜನೆಗಳಿಲ್ಲದೆ ಬಂಗಲೆಗಳನ್ನು ನಿರ್ಮಿಸಲಾಗಿತ್ತು. ಇದೀಗ ಕೋರ್ಟ್​ ಆದೇಶದ ಮೇರೆಗೆ ತೆರವುಗೊಳಿಸಲಾಗುವುದು ಎಂದಿದ್ಧಾರೆ.
Loading...

ಉದ್ಯಮಿ ನೀರವ್ ಮೋದಿ ಭಾರತ ಬ್ಯಾಂಕ್​ಗಳಿಗೆ ಸಾವಿರಾರು 13,400 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ಧಾರೆ. ಲಂಡನ್​ನಲ್ಲಿ ತಲೆಮರೆಸಿಕೊಂಡಿರುವ  ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಈಗಾಗಲೇ ಸಿಬಿಐ ಮನವಿ ಮಾಡಿದೆ. ನಮ್ಮ ಸರ್ಕಾರದ ಮನವಿಗೆ ಇಂಗ್ಲೆಂಡ್ ಸ್ಪಂದಿಸಿದೆ​ ಎಂದು ವಿದೇಶಾಂಗ ಸಚಿವ ವಿ.ಕೆ ಸಿಂಗ್ ಕೂಡ​ ತಿಳಿಸಿದ್ಧಾರೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...