ಈಗಲೂ ಸಹ ನಮ್ಮ ದೇಶದಲ್ಲಿ(Nation) ಎಷ್ಟೋ ರಾಜ್ಯಗಳಲ್ಲಿ (State) ಹುಡುಗಿಯರಿಗೆ 18 ವರ್ಷ (Teen age) ತುಂಬಿದರೆ ಸಾಕು ಮದುವೆ (Marriage) ಮಾಡಿ ಬಿಡೋಣ ಅಂತ ಪೋಷಕರು ಕಾಯುತ್ತಾ ಕುಳಿತಿರುವುದನ್ನು ನಾವು ನೋಡುತ್ತೇವೆ. ಹೌದು ಎಷ್ಟೋ ಹುಡುಗಿಯರು 12ನೇ ತರಗತಿಯನ್ನು (2nd Puc) ಎರಡು ಮೂರು ವರ್ಷಗಳ ವರೆಗೆ ಪಾಸ್ (Pass) ಮಾಡದೆ ಇದ್ದರೆ, ಪೋಷಕರು ಅವರಿಗೆ ಒಂದು ಗಂಡು ಹುಡುಕಿ ಮದುವೆ ಮಾಡುವುದಕ್ಕೆ ಯೋಚಿಸುತ್ತಾರೆ. ಕೆಲವರು ಚೆನ್ನಾಗಿ ಪದವಿಯನ್ನು ಓದುತ್ತಿದ್ದರೂ ಒಳ್ಳೆಯ ಮನೆತನ ಮತ್ತು ವರ ಸಿಕ್ಕಿದ್ದಾನೆ ಅಂತ ಪೋಷಕರು ತರಾತುರಿಯಲ್ಲಿ ಮಗಳ ಮದುವೆ ಮಾಡುವುದನ್ನು ಸಹ ನಾವು ನೋಡಿರುತ್ತೇವೆ.
ಹೀಗಾದಾಗ ಮದುವೆ ಆಗಿ ಹೋದ ಆ ಮಹಿಳೆ ಗೆ ಮುಂದೆ ಮಗು ಆಗುತ್ತೆ, ನಂತರ ಆಕೆ ತನ್ನ ವಿದ್ಯಾಭ್ಯಾಸವನ್ನು ಅಲ್ಲಿಗೆ ಬಿಡಬೇಕಾದ ಸಂದರ್ಭಗಳು ಬರುತ್ತವೆ.
ಹೀಗೆ ಒಬ್ಬ ವಿದ್ಯಾವಂತ ಮಹಿಳೆಯ ಓದಿಗೆ ಪೂರ್ಣವಿರಾಮ ಬಿದ್ದಂತಾಗುತ್ತದೆ ಅಂತ ಹೇಳಬಹುದು. ಹೀಗೆ ಓದಿಗೆ ಮದುವೆ, ಹೆರಿಗೆ, ಮಕ್ಕಳು ಅಡ್ಡಿಯಾಗದೆ ಇರಲಿ ಅಂತ ಕೇರಳ ಸರ್ಕಾರ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆಯನ್ನು ಘೋಷಿಸಿದೆ.
18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ
ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರು ಗುರುವಾರದಂದು 18 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರಿಗೆ 60 ದಿನಗಳ ಹೆರಿಗೆ ರಜೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಋತುಚಕ್ರದ ರಜೆ ಸೇರಿದಂತೆ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಹಾಜರಾತಿ ಈಗ ಶೇಕಡಾ 73 ಕ್ಕೆ ಇಳಿಸಿದೆ. ಈ ಹಿಂದೆ ಹಾಜರಾತಿ ಶೇಕಡಾ 75 ರಷ್ಟಿರಬೇಕು ಎಂಬ ನಿಯಮವಿತ್ತು. ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವೆ ಹೇಳಿದರು.
ಕೊಚ್ಚಿನ್ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಸಿಯುಎಸ್ಎಟಿ) ಶನಿವಾರ ಎಂದರೆ ಜನವರಿ 14 ರಂದು ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ತಮ್ಮ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಗಳನ್ನು ನೀಡುವುದಾಗಿ ಘೋಷಿಸಿದೆ.
"ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಪರಿಗಣಿಸಿ, ಕೇರಳ ಸರ್ಕಾರವು ಇದನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ" ಎಂದು ಬಿಂದು ತಮ್ಮ ಕಚೇರಿಯಿಂದ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:Explainer: ಮುಟ್ಟಿನ ರಜೆ ಎಂದರೇನು? ಯಾವೆಲ್ಲಾ ದೇಶಗಳಲ್ಲಿ ಮಹಿಳೆಯರಿಗೆ ಈ ರಜೆಯ ಸೌಲಭ್ಯವಿದೆ?
ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ಸಹ ಘೋಷಿಸಲಾಗಿದೆ
ಎಸ್ಎಫ್ಐ ನೇತೃತ್ವದ ವಿದ್ಯಾರ್ಥಿ ಒಕ್ಕೂಟದ ಬೇಡಿಕೆಯ ಆಧಾರದ ಮೇಲೆ ಸಿಯುಎಸ್ಎಟಿ ನಲ್ಲಿ ಮುಟ್ಟಿನ ರಜೆಯನ್ನು ಸಹ ಜಾರಿಗೆ ತರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಹಿಳಾ ವಿದ್ಯಾರ್ಥಿಗಳಿಗೆ "ಮುಟ್ಟಿನ ರಜೆಯನ್ನು ಪರಿಗಣನೆಗೆ ತೆಗೆದುಕೊಂಡು ಪ್ರತಿ ಸೆಮಿಸ್ಟರ್ ನಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಹಾಜರಾತಿ ಪ್ರಮಾಣದಲ್ಲಿ ಶೇಕಡಾ 2 ರಷ್ಟು ಹಾಜರಾತಿ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಅಂತ ಶನಿವಾರ ಪ್ರಕಟಿಸಿದೆ.
ಸಾಮಾನ್ಯವಾಗಿ, ಒಟ್ಟು ಕಾಲೇಜಿನ ದಿನಗಳಲ್ಲಿ ಶೇಕಡಾ 75 ರಷ್ಟು ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.
ಋತುಚಕ್ರದ ರಜೆಯನ್ನು ಪಡೆದುಕೊಳ್ಳುವ ಮಹಿಳಾ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿಯನ್ನು ಶೇಕಡಾ 73 ಪ್ರತಿಶತಕ್ಕೆ ಇಳಿಸಲಾಗುವುದು. ಎಂದು ಪ್ರಕಟಣೆ ತಿಳಿಸಿದೆ.
ಸಿಯುಎಸ್ಎಟಿ ಸ್ಟೂಡೆಂಟ್ಸ್ ಯೂನಿಯನ್ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರಸ್ತಾವನೆಯನ್ನು ಇತ್ತೀಚೆಗೆ ಔಪಚಾರಿಕವಾಗಿ ಉಪಕುಲಪತಿಗೆ ಸಲ್ಲಿಸಲಾಗಿತ್ತು ಮತ್ತು ಅದನ್ನು ಅನುಮೋದಿಸಲಾಯಿತು, ಅದರ ನಂತರ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಇದಕ್ಕೂ ಮೊದಲು ಕಳೆದ ವರ್ಷ ಡಿಸೆಂಬರ್ ನಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ (ಎಂಜಿಯು) 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ