ಮನೆಯೊಡತಿಯ 1.5 ಲಕ್ಷ ಮೌಲ್ಯದ ಮಂಗಳಸೂತ್ರವನ್ನೇ ನುಂಗಿದ ಗೂಳಿ; ಕುಟುಂಬ ಕಂಗಾಲು

ಗ್ರಾಮದಲ್ಲಿ ನಡೆದ ಬೈಲ್​ ಪೊಲ (ಗೂಳಿ ಹಬ್ಬ)ದಂದು ಈ ಘಟನೆ ನಡೆದಿದೆ. ಮನೆಯಲ್ಲಿರುವ ಗೂಳಿಯನ್ನು ದೇವರ ಸಮಾನವಾಗಿ ಪೂಜಿಸುವ ಈ ಹಬ್ಬ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಬಂಧಗಳ ಪ್ರತೀಕ

Seema.R | news18-kannada
Updated:September 13, 2019, 6:14 PM IST
ಮನೆಯೊಡತಿಯ 1.5 ಲಕ್ಷ ಮೌಲ್ಯದ ಮಂಗಳಸೂತ್ರವನ್ನೇ ನುಂಗಿದ ಗೂಳಿ; ಕುಟುಂಬ ಕಂಗಾಲು
ಗೂಳಿ
  • Share this:
ಮುಂಬೈ (ಸೆ.12):  ಮನೆಯೊಡತಿಯ ಮಂಗಳಸೂತ್ರವನ್ನೇ ಗೂಳಿ ನುಗ್ಗಿರುವ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಅಹ್ಮದ್​ನಗರದ ರೈಟೆ ವಾಗ್ಪುರ್​ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಆಗಸ್ಟ್​ 30ರಂದು ನಡೆದ ಬೈಲ್​ ಪೊಲ (ಗೂಳಿ ಹಬ್ಬ)ದಂದು ಈ ಘಟನೆ ನಡೆದಿದೆ. ಮನೆಯಲ್ಲಿರುವ ಗೂಳಿಯನ್ನು ದೇವರ ಸಮಾನವಾಗಿ ಪೂಜಿಸುವ ಈ ಹಬ್ಬ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಬಂಧಗಳ ಪ್ರತೀಕ

ಈ ಹಬ್ಬದಂದು ಮನೆಯಲ್ಲಿನ ಗೂಳಿಗಳಿಗೆ ಪೂಜಿಸಿ, ಅದರ ಹಣೆಯಿಂದ ಆಶೀರ್ವಾದ ಪಡೆಯುವುದು ಪ್ರತೀತಿ. ಈ ಹಬ್ಬದಂದು ಮನೆಯೊಡತಿ ಗೂಳಿಗೆ ಪೂಜಿಸಿ ಮಾಂಗಲ್ಯವನ್ನು ಅದರ ಹಣೆಗೆ ಮುಟ್ಟಿಸಿ ಆಶೀರ್ವಾದ ಪಡೆದು, ಈ ಸರವನ್ನು ಗೂಳಿಗೆ ನೀಡುವ ಆಹಾರದ ತಟ್ಟೆಯಲ್ಲಿಯೇ ಇಟ್ಟಿದ್ದಾರೆ.

ಈ ವೇಳೆ ಕರೆಂಟ್​ ಹೋಗಿದ್ದು, ದೀಪ ತರಲು ಮನೆಯೊಡತಿ ಒಳಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಆಹಾರವನ್ನೆಲ್ಲಾ ಗೂಳಿ ನುಗ್ಗಿದೆ. ಇದೇ ತಟ್ಟೆಯಲ್ಲಿ ಆಕೆಯ ಮಾಂಗಲ್ಯ ಸೂತ್ರವಿದ್ದು, ಅದು ಕೂಡ ಗೂಳಿ ಹೊಟ್ಟೆ ಸೇರಿದೆ. ಇದರಿಂದ ಕಂಗಾಲದ ಮನೆಯೊಡತಿ ತಕ್ಷಣಕ್ಕೆ ಗಂಡನಿಗೆ ಸುದ್ದಿ ಮುಟ್ಟಿಸಿದ್ದಾಳೆ.

ಇದನ್ನು ಓದಿ: Photos: ಚಿನ್ನದ ಬದಲಿಗೆ ಹೂವಿನಾಭರಣ ತೊಟ್ಟು ಕಣ್ಮನ ಸೆಳೆದ ಟಿಎಂಸಿ ಸಂಸದೆ ನುಸ್ರತ್​​ ಜಹಾನ್​​

ಗೂಳಿ ಬೆಳಗ್ಗೆ ಸಗಣಿಯಾಗುವಾಗ ಮಂಗಳಸೂತ್ರ ಕೂಡ ಹೊರಬರಬಹುದು ಎಂದು ದಂಪತಿಗಳಿಬ್ಬರು ಕಾದಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಕಡೆಗೆ ಪಶು ವೈದ್ಯರ ಬಳಿ ಹೋದಾಗ ಗೂಳಿ ಹೊಟ್ಟೆಯಲ್ಲಿ ಚಿನ್ನದ ತಾಳಿ ಸರವಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ಆಪರೇಷನ್​ ಮಾಡಿ ಅದನ್ನು ಹೊರ ತೆಗೆದಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading