Bulbul Cyclone: ಬುಲ್​ಬುಲ್ ಚಂಡಮಾರುತದ ಹೊಡೆತಕ್ಕೆ 22ಕ್ಕೂ ಹೆಚ್ಚು ಸಾವು; ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್​

Bulbul Cyclone Effect: ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಹೊಡೆತಕ್ಕೆ ನೂರಾರು ಮರಗಳು ಉರುಳಿ ಬಿದ್ದಿದೆ. ಒಟ್ಟು 2,473 ಮನೆಗಳು ನೆಲಸಮವಾಗಿವೆ. 26 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಬುಲ್ ಬುಲ್ ಚಂಡಮಾರುತದಿಂದ 2.73 ಲಕ್ಷ ಕುಟುಂಬಗಳು ತೊಂದರೆಗೆ ಸಿಲುಕಿವೆ.

Sushma Chakre | news18-kannada
Updated:November 11, 2019, 7:54 AM IST
Bulbul Cyclone: ಬುಲ್​ಬುಲ್ ಚಂಡಮಾರುತದ ಹೊಡೆತಕ್ಕೆ 22ಕ್ಕೂ ಹೆಚ್ಚು ಸಾವು; ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್​
ಮುರಿದು ಬಿದ್ದ ಮನೆಯೊಳಗೆ ತನ್ನ ವಸ್ತುಗಳನ್ನು ತಡಕಾಡುತ್ತಿರುವ ಬಾಂಗ್ಲಾದೇಶದ ಮಹಿಳೆ
Sushma Chakre | news18-kannada
Updated: November 11, 2019, 7:54 AM IST
ನವದೆಹಲಿ (ನ.11): ಭಾರತಕ್ಕೆ ಅಪ್ಪಳಿಸಿರುವ ಬುಲ್ ಬುಲ್ ಚಂಡಮಾರುತದ ಹೊಡೆತಕ್ಕೆ ಒಟ್ಟು 22ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ನೆರೆಯ ಬಾಂಗ್ಲಾದೇಶ ಮತ್ತು ಭಾರತದ ಪಶ್ಚಿಮ ಬಂಗಾಳ, ಒಡಿಶಾದ ಕರಾವಳಿ ಭಾಗಕ್ಕೆ ಈ ವಾರ ಬುಲ್ ಬುಲ್ ಚಂಡಮಾರುತ ಅಪ್ಪಳಿಸಿತ್ತು. ಈ ಚಂಡಮಾರುತದ ಅಬ್ಬರಕ್ಕೆ 22ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಗಂಟೆಗೆ 120 ಕಿ.ಮೀ.ನಂತೆ ಬುಲ್ ಬುಲ್ ಚಂಡಮಾರುತ ಅಪ್ಪಳಿಸುತ್ತಿದೆ. ಹೀಗಾಗಿ, ತಗ್ಗು ಪ್ರದೇಶಗಳಲ್ಲಿನ 21 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಬಾಂಗ್ಲಾ ದೇಶವೊಂದರಲ್ಲೇ ಸುಮಾರು 10 ಜನರು ಬುಲ್​ಬುಲ್​ಗೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಖಾಸಗಿ ಮಾಧ್ಯಮ ತಿಳಿಸಿದೆ. ಆದರೆ, ಅಲ್ಲಿನ ವಿಪತ್ತು ನಿರ್ವಹಣಾ ಸಚಿವಾಲಯದ ಪ್ರಕಾರ 8 ಜನರು ಸಾವನ್ನಪ್ಪಿದ್ದಾರೆ. ಸಮುದ್ರ ತೀರದಲ್ಲಿ ಮೀನುಗಾರಿಕೆ ಮಾಡುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಹಿಂದೆ ಸರಿದ ಬಿಜೆಪಿ; ಶಿವಸೇನೆ ಅಂಗಳದಲ್ಲಿ ಚೆಂಡು

ಭಾರತದ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಹೊಡೆತಕ್ಕೆ ನೂರಾರು ಮರಗಳು ಉರುಳಿ ಬಿದ್ದಿದೆ. ಒಟ್ಟು 2,473 ಮನೆಗಳು ನೆಲಸಮವಾಗಿವೆ. 26 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಬುಲ್ ಬುಲ್ ಚಂಡಮಾರುತದಿಂದ 2.73 ಲಕ್ಷ ಕುಟುಂಬಗಳು ತೊಂದರೆಗೆ ಸಿಲುಕಿವೆ. 1.78 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.

ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್​ ಘೋಷಣೆ ಮಾಡಿವೆ. ಇನ್ನೂ 3 ದಿನಗಳ ಕಾಲ ಚಂಡಮಾರುತದ ಅಬ್ಬರ ಇರುತ್ತದೆ ಎನ್ನಲಾಗಿದ್ದು, ಅಧಿಕ ಮಳೆಯಾಗಲಿದೆ. ಚಂಡಮಾರುತದಿಂದ ಹಾನಿ ಸಂಭವಿಸಬಹುದೆಂದು ರಾಜ್ಯ ಸರ್ಕಾರಗಳು ಈಗಾಗಲೇ ಮುನ್ನೆಚ್ಚರಿಕೆ ವಹಿಸಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪುರಿ, ಜಗತ್​​ಸಿಂಗ್​ಪುರ  ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

First published:November 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...