Ear Cut: ಶಾಸಕರ ತಾಯಿಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು! ಮನೆ ಮುಂದೆ ನಿಂತಿದ್ದವರ ಚಿನ್ನ ಕಸಿದು ಎಸ್ಕೇಪ್

ಬೈಕ್‌ನಲ್ಲಿ ಬಂದಿದ್ದ ಕಳ್ಳರಿಬ್ಬರು ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಶಾಸಕರ ತಾಯಿಯನ್ನು ಅಡ್ಡಗಟ್ಟಿದ್ದಾರೆ. ಕಿವಿಯೋಲೆ ಸುಲಭವಾಗಿ ಬರಲಿಲ್ಲ ಎಂಬ ಕಾರಣಕ್ಕೆ ಕಟರ್ ಬಳಸಿ, ಎರಡೂ ಕಿವಿ ಕತ್ತರಿಸಿ, ಓಲೆ ಸಮೇತ ಎಸ್ಕೇಪ್ ಆಗಿದ್ದಾರೆ.

ಚಿನ್ನಕ್ಕಾಗಿ ಕಿವಿ ಕತ್ತರಿಸಿದ ಕಳ್ಳರು

ಚಿನ್ನಕ್ಕಾಗಿ ಕಿವಿ ಕತ್ತರಿಸಿದ ಕಳ್ಳರು

  • Share this:
ಉತ್ತರ ಪ್ರದೇಶ: ಚಿನ್ನ (Gold) ಕದಿಯಲು ಬಂದ ಕಳ್ಳರು (Thieves) ವೃದ್ಧೆ (Old Women) ಎನ್ನುವುದನ್ನೂ ನೋಡದೇ ಅಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಬುಲಂದರ್‌ ಶಹರ್‌ (Bulandshahar) ಎಂಬಲ್ಲಿ 84 ವರ್ಷದ ವೃದ್ಧೆಯ ಎರಡೂ ಕಿವಿ (Ear) ಕತ್ತರಿಸಿ, ಆಕೆಯ ಕಿವಿಯಲ್ಲಿದ್ದ ಚಿನ್ನದ ಒಲೆಗಳನ್ನು ಕದ್ದೊಯ್ದಿದ್ದಾರೆ. 84 ವರ್ಷದ ವೃದ್ಧೆ ಬುಲಂದರ್‌ ಶಹರ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಚೌಧರಿ (MLA Pradeep Choudhari) ಅವರ ತಾಯಿಯಾಗಿದ್ದಾರೆ. ವೃದ್ಧೆಯ ಎರಡೂ ಕಿವಿಯನ್ನು ಕಳ್ಳರು ಕತ್ತರಿಸಿದ್ದು, ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ ವಾಕಿಂಗ್‌ಗೆ (Walking) ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ (Bike) ಬಂದ ದುಷ್ಕರ್ಮಿಗಳು ಮೊದಲು ಆಕೆಗೆ ಪಿಸ್ತೂಲ್‌ನಿಂದ (Pistool) ಹೆದರಿಸಿದ್ದಾರೆ. ಆ ಬಳಿಕ ಆಕೆಯ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು (Ear Ring) ಕೀಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಕಿವಿಯೋಲೆಗಳು ಬರದೇ ಇದ್ದಾಗ ದುಷ್ಕರ್ಮಿಗಳು ಕಟರ್‌ನಿಂದ ಆಕೆಯ ಎರಡೂ ಕಿವಿಯನ್ನು ಕತ್ತರಿಸಿ ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ.

ಶಾಸಕರ ತಾಯಿಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು

84 ವರ್ಷದ ವೃದ್ಧೆ, ಬುಲಂದ್‌ಶಹರ್ ಸದರ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಪ್ರದೀಪ್ ಚೌಧರಿ ಅವರ ತಾಯಿ ಅವರ ಕಿವಿಯೋಲೆ ಸೇರಿದಂತೆ ಚಿನ್ನದ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ವೃದ್ಧೆ ಬೆಳಗ್ಗೆ ವಾಕಿಂಗ್ ಮಾಡುವಾಗ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಆಕೆಯನ್ನು ಟಾರ್ಗೆಟ್ ಮಾಡಿದ್ದಾರೆ. ಕಿವಿಗಳು ಸುಲಭವಾಗಿ ಕಿತ್ತು ಬರುತ್ತಿಲ್ಲ ಎಂಬ ಕಾರಣಕ್ಕೆ ಕಟರ್‌ನಿಂದ ಆಕೆಯ ಕಿವಿಯನ್ನು ಭಾಗಶಃ ಕತ್ತರಿಸಿ ಪರಾರಿಯಾಗಿದ್ದಾರೆ.

ವಾಕಿಂಗ್‌ಗೆ ಹೋಗಿದ್ದಾಗ ವೃದ್ಧೆಯನ್ನು ಅಡ್ಡಗಟ್ಟಿದ ಕಳ್ಳರು

ಪ್ರತಾಪ್ ವಿಹಾರ್‌ನಲ್ಲಿ ತಮ್ಮೊಂದಿಗೆ ಇರುವ ಅವರ ತಾಯಿ ಸಂತೋಷ್ ದೇವಿ ಅವರು ಪ್ರತಿದಿನ ಬೆಳಿಗ್ಗೆ ವಾಕಿಂಗ್‌ಗೆ ಹೋಗುತ್ತಾರೆ ಎಂದು ಶಾಸಕರ ಸಹೋದರ ಜೀತ್‌ಪಾಲ್ ಚೌಧರಿ ಪೊಲೀಸರಿಗೆ ತಿಳಿಸಿದ್ದಾರೆ.  ಬೆಳಗ್ಗೆ ಆಕೆ ನಿತ್ಯದ ಅಭ್ಯಾಸದಂತೆ ಪಾರ್ಕ್‌ಗೆ ವಾಕಿಂಗ್ ನಡೆದುಕೊಂಡು ಹೋಗುತ್ತಿದ್ದಾಗ ಡಿಪಿಎಸ್ ವೃತ್ತದ ಬಳಿ ಇಬ್ಬರು ಮೋಟಾರ್ ಸೈಕಲ್‌ನಲ್ಲಿ ಬಂದವರು ಆಕೆಯನ್ನು ತಡೆದಿದ್ದಾರೆ. ವೃದ್ಧೆಗೆ ಚಾಕು ತೋರಿಸಿ ಅವರು ಧರಿಸಿದ್ದ ಚಿನ್ನದ ಕಿವಿಯೋಲೆಗಳನ್ನು ಕೊಡುವಂತೆ ಒತ್ತಾಯಿಸಿದರು. ಈ ವೇಳೆ ವೃದ್ಧೆ ಕೂಗಿಕೊಂಡಿದ್ದಾರೆ.

ಇದನ್ನೂ ಓದಿ: Child Death: ಮೊಬೈಲ್ ಚಾರ್ಜ್ ಹಾಕುವಾಗ ಹುಷಾರ್, ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿತು ಕಂದಮ್ಮ!

ಅಕ್ಕಪಕ್ಕದ ಮನೆಯವರು ಬಂದಾಗ ಕಳ್ಳರು ಎಸ್ಕೇಪ್

ಒಮ್ಮೆ ಆಕೆ ಕೂಗಿಕೊಂಡ ಬಳಿಕ, ಹತ್ತಿರದ ಮನೆಗಳಿದ್ದವರು ಹೊರಬಂದಿದ್ದಾರೆ. ಈ ವೇಳೆಗಾಗಲೇ ಕಳ್ಳರು, ಕಿವಿಯನ್ನು ಹರಿದು ಚಿನ್ನ ಕದ್ದು ಓಡುತ್ತಿದ್ದರು. ತಕ್ಷಣವೇ ಪೊಲೀಸರಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಶಾಸಕ ಪ್ರದೀಪ್‌ ಚೌಧರಿ ಇಂದಿರಪುರಂನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರದೀಪ್‌ ಚೌಧರಿ ತಕ್ಷಣವೇ ಆಸ್ಪತ್ರೆಗೆ ಧಾವಿಸಿ ತಾಯಿಯ ಪರಿಸ್ಥಿತಿ ಗಮನಿಸಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣದ ದಾಖಲಿಸಿಕೊಂಡಿದ್ದಾಗಿ ಹೇಳಿದ್ದು, ಕಳ್ಳರನ್ನು ಹಿಡಿಯುವ ಪ್ರಯತ್ನ ಸಾಗಿದೆ ಎಂದಿದ್ದಾರೆ. ಇನ್ನೊಂದೆಡೆ ವಿಜಯ ನಗರ ಪೊಲೀಸ್‌ ಠಾಣೆ ಭಾನುವಾರ ಇದರ ಬಗ್ಗೆ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: Tumor: ಮಹಿಳೆಯ ಹೊಟ್ಟೆಯಲ್ಲಿತ್ತು 4 ಕೆಜಿ ಫುಟ್‌ಬಾಲ್ ಗಾತ್ರದ ಗೆಡ್ಡೆ! ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

ಎರಡು ದಿನವಾದರೂ ಪತ್ತೆಯಾಗದ ಕಳ್ಳರು

ಈವರೆಗೂ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ. ಎರಡು ದಿನವಾದರೂ ವರದಿ ದಾಖಲಿಸಿಕೊಳ್ಳದ ವಿಜಯನಗರ ಠಾಣೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ದರೋಡೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುತ್ತಿರುವುದು ಇದೇ ಮೊದಲಲ್ಲ. ಇಂದಿರಾಪುರಂನಲ್ಲಿ ಘಟನೆ ನಡೆದ ಒಂದು ತಿಂಗಳ ನಂತರ ವರದಿ ಸಲ್ಲಿಸಿದ ಪ್ರಕರಣಗಳೂ ಇವೆ. ಪ್ರತಿ ತಿಂಗಳು 25ರಿಂದ 30 ಮಂದಿ ಪೊಲೀಸ್ ಠಾಣೆಯಿಂದ ಪ್ರಕರಣ ದಾಖಲಾಗಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
Published by:Annappa Achari
First published: