Tower Sold: ತನ್ನ ಮನೆ ಮೇಲಿದ್ದ ಟವರ್​ ಮಾರಾಟ ಮಾಡಿದ ಮಾಲೀಕ! ಕಾರಣ ಕೇಳಿ ಶಾಕ್ ಆದ ಟೆಲಿಕಾಂ ಕಂಪನಿ!

ಮೊಬೈಲ್ ಟವರ್

ಮೊಬೈಲ್ ಟವರ್

ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯು ಕೊಯಂಬೇಡುವಿನ ಉತ್ತರ ಮೂಡ ಬೀದಿಯಲ್ಲಿರುವ ಕಟ್ಟಡದ ಮೇಲ್ಛಾವಣಿಯ ಮೇಲೆ 15 ಅಡಿ ಎತ್ತರದ ಟವರ್​ ನಿರ್ಮಿಸಿದ್ದರು. ಕಂಪನಿಯು ಕಟ್ಟಡದ ಮಾಲೀಕರಾದ ಚಂದ್ರನ್, ಕರುಣಾಕರನ್ ಮತ್ತು ಬಾಲಕೃಷ್ಣನ್ ಅವರಿಗೆ 2006 ರಿಂದ 2018 ರವರೆಗೆ ಬಾಡಿಗೆ ಪಾವತಿಸಿದೆ. ಆ ನಂತರ ಬಾಡಿಗೆ ನೀಡುವುದನ್ನು ನಿಲ್ಲಿಸಿತ್ತು ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಚೆನ್ನೈ: ಮನೆ, ಅಂಗಡಿಗಳ ಬಾಡಿಗೆ (Rent) ಹಣ ಪಾವತಿಸದಿದ್ದರೆ ಮನೆ ಮಾಲೀಕ ಮನೆ ವಸ್ತುಗಳನ್ನೆಲ್ಲಾ ಹೊರಗೆ ಬೀಸಾಡುತ್ತಾರೆ ಅಥವಾ ಮನೆಗಳಿಗೆ ಬೀಗ ಹಾಕಿಕೊಳ್ಳುತ್ತಾರೆ. ಕೆಲವೊಮ್ಮೆ ಬೆಲೆಬಾಳುವ ವಸ್ತುವನ್ನೋ, ಕಾರು-ಬೈಕ್​ ಸೇರಿ ವಾಹನಗಳನ್ನೋ ತೆಗೆದುಕೊಂಡು ಹೋಗುತ್ತಾರೆ. ಒಂದು ವೇಳೆ ಮೊಬೈಲ್ ಟವರ್ (Mobile Tower) ಬಾಡಿಗೆ ಕಟ್ಟದಿದ್ದರೆ ಏನು ಮಾಡಬಹುದು? ಪ್ರಸ್ತುತ ದಿನಗಳಲ್ಲಿ ಎಷ್ಟೋ ಮನೆ ಆವರಣದ ಖಾಲಿ ಜಾಗ ಅಥವಾ ಕೆಲವು ಕಡೆ ದೊಡ್ಡ ಕಟ್ಟಡಗಳ ಮೇಲೆ ಮೊಬೈಲ್ ಟವರ್ ಇರುವುದನ್ನು ನಾವು ಗಮನಿಸಿದ್ದೇವೆ. ಚೆನ್ನೈನ (Chennai) ಕೊಯಂಬೇಡುವಿನ ಕಟ್ಟಡದ ಮೇಲೆ ಈ ರೀತಿಯ ಮೊಬೈಲ್​ ಟವರ್ ಇತ್ತು. ಆದರೆ ಈಗ ಅದು ಅಲ್ಲಿಲ್ಲ, ಏಕೆಂದರೆ ಮೊಬೈಲ್ ಟವರ್​ ಕಂಪನಿಯವರು ಬಾಡಿಗೆ ಕಟ್ಟದಿದ್ದಕ್ಕೆ ಮನೆ ಮಾಲೀಕ ಆ ಟವರ್​ ಕೆಡವಿದ್ದಾನೆ. ಟವರ್​ ಕೆಡವಿದ ವ್ಯಕ್ತಿ ಆ ವಸ್ತುಗಳನ್ನು ಏನು ಮಾಡಿದ್ದಾನೆ ಎನ್ನುವುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.


2018ರಿಂದ ಬಾಡಿಗೆ ಕಟ್ಟದ ಕಂಪನಿ


ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯು ಕೊಯಂಬೇಡುವಿನ ಉತ್ತರ ಮೂಡ ಬೀದಿಯಲ್ಲಿರುವ ಕಟ್ಟಡದ ಮೇಲ್ಛಾವಣಿಯ ಮೇಲೆ 15 ಅಡಿ ಎತ್ತರದ ಟವರ್​ ನಿರ್ಮಿಸಿದ್ದರು. ಕಂಪನಿಯು ಕಟ್ಟಡದ ಮಾಲೀಕರಾದ ಚಂದ್ರನ್, ಕರುಣಾಕರನ್ ಮತ್ತು ಬಾಲಕೃಷ್ಣನ್ ಅವರಿಗೆ 2006 ರಿಂದ 2018 ರವರೆಗೆ ಬಾಡಿಗೆ ಪಾವತಿಸಿದೆ. ಆ ನಂತರ ಬಾಡಿಗೆ ನೀಡುವುದನ್ನು ನಿಲ್ಲಿಸಿದೆ.


ಟವರ್​ ಕಾಣದಿದ್ದಕ್ಕೆ ಬೆಚ್ಚಿಬಿದ್ದ ನೌಕರರು


ಕೆಲವು ದಿನಗಳ ಹಿಂದೆ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಕೆಲವು ಉದ್ಯೋಗಿಗಳು ಕಟ್ಟಡಕ್ಕೆ ಭೇಟಿ ನೀಡಿದ್ದರು. ಆದರೆ ಅವರಿಗೆ ಮೊಬೈಲ್ ಟವರ್​ ಕಾಣೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. ಆ ನಂತರ ಟವರ್​ಗೆ ಏನಾಯಿತು ಎಂಬ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಮನೆ ಮಾಲೀಕರು ಬಾಡಿಗೆ ಹಣ ಸಿಗದಿದ್ದಕ್ಕೆ ಟವರ್​ ಅನ್ನು ಕೆಡವಿ ಮಾರಾಟ ಮಾಡಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದಿದೆ.


ಇದನ್ನೂ ಓದಿ: Viral News: ವಿಮಾನದ ಕಾಕ್​​ಪಿಟ್​ನಲ್ಲಿ ಪೈಲಟ್‌ಗಳ ಕರ್ಜಿಕಾಯಿ ಪಾರ್ಟಿ! ಹೋಳಿ ಹಬ್ಬದ ಸಿಹಿ ತಿಂಡಿ ತಿಂದವರು ಅಮಾನತು


ಗುಜರಿಗೆ ಮಾರಾಟ


ಕಟ್ಟಡದ ಮೇಲಿದ್ದ ಟವರ್ ಕಾಣದೇ ಇದ್ದಾಗ ಮೊದಲು ಗಾಬರಿಗೊಂಡ ಕಂಪನಿಯ ಉದ್ಯೋಗಿಗಳು ಈ ಬಗ್ಗೆ ಅಕ್ಕಪಕ್ಕ ವಿಚಾರಿಸಿದ್ದಾರೆ. ಟವರ್ ಕಣ್ಮರೆಯ ಬಗ್ಗೆ ಕಟ್ಟಡ ಮಾಲೀಕರನ್ನು ಕೇಳಿದ್ದಾರೆ. ಇದಕ್ಕೆ ಮನೆ ಮಾಲೀಕ ನೀಡಿದ ಉತ್ತರ ಕೇಳಿ ಅವರು ಬೆಚ್ಚಿಬಿದ್ದಿದ್ದಾರೆ. ಐದು ವರ್ಷಗಳಿಂದ ಬಾಡಿಗೆ ನೀಡದ ಕಾರಣ ಟವರ್ ಕೆಡವಿ ಕೊಯಂಬೇಡುವಿನ ಸ್ಕ್ರ್ಯಾಪ್ ಅಂಗಡಿಗೆ ಮಾರಾಟ ಮಾಡಿದ್ದೇವೆ ಎಂದು ಮಾಲೀಕರು ಹೇಳಿದ್ದರಿಂದ ಕಂಪನಿ ನೌಕರರು ಏನು ಮಾತಾಡಬೇಕು ಎಂದು ತಿಳಿಯದೆ ವಾಪಾಸ್​ ಹೋಗಿ ವಿಷಯವನ್ನು ಕಂಪನಿಗೆ ತಿಳಿಸಿದ್ದಾರೆ.




ಪೊಲೀಸರಿಗೆ ದೂರು


ಟವರ್ ಅನ್ನು ಅಕ್ರಮವಾಗಿ ಕೆಡವಿ ಮಾರಾಟ ಮಾಡಿದ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್‌ನ ಅಧಿಕಾರಿಯೊಬ್ಬರು ಕೊಯಂಬೇಡು ಪೊಲೀಸರಿಗೆ ದೂರು ನೀಡಿದ್ದಾರೆ. ಟವರ್ ಮೌಲ್ಯ ರೂ.8.62 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಟವರ್​ ಕೆಡಗುವ ಸಂದರ್ಭದಲ್ಲಿ ನಮ್ಮ ಬಳಿ ಒಂದು ಮಾತನ್ನೂ ಹೇಳಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಕಾನೂನು ಹೋರಾಟ ಮಾಡಬೇಕಿತ್ತು


ಆದರೆ ಐದು ವರ್ಷಗಳಿಂದ ಬಾಡಿಗೆ ಕಟ್ಟದಿದ್ದರೆ ಏನು ಮಾಡುವುದು ಎಂದು ಮಾಲೀಕರು ಮರು ಪ್ರಶ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಒಂದಲ್ಲ, ಎರಡಲ್ಲ 5 ವರ್ಷದಿಂದ ಬಾಡಿಗೆ ಕಟ್ಟಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬಾಡಿಗೆ ಕಟ್ಟದಿದ್ದಕ್ಕೆ ಕಾನೂನಾತ್ಮಕ ಹೋರಾಟದಲ್ಲಿ ಮುಂದುವರಿಯಬೇಕಿತ್ತು, ಅದನ್ನು ಬಿಟ್ಟು ಟವರ್​ ಕೆಡವಿ, ಅದನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಕೆಲವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Published by:Rajesha M B
First published: