ಚುನಾವಣೆಗೆ ಮುಂಚೆ ಮತದಾರರಿಗೆ ಕೇಂದ್ರದಿಂದ ಲಂಚ: ಖರ್ಗೆ ಖಾರದ ಪ್ರತಿಕ್ರಿಯೆ

ರೈತರಿಗೆ ನೇರ ಹಣ ವರ್ಗಾವಣೆ ಮಾಡುವ ಯೋಜನೆಯ ಮೂಲಕ ಚುನಾವಣೆ ವೇಳೆಗೆ ಜನರಿಗೆ ಹಣ ಹಂಚಿಕೆ ಮಾಡುವುದು ಕೇಂದ್ರದ ಉದ್ದೇಶ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

Vijayasarthy SN | news18
Updated:February 1, 2019, 3:04 PM IST
ಚುನಾವಣೆಗೆ ಮುಂಚೆ ಮತದಾರರಿಗೆ ಕೇಂದ್ರದಿಂದ ಲಂಚ: ಖರ್ಗೆ ಖಾರದ ಪ್ರತಿಕ್ರಿಯೆ
ಮಲ್ಲಿಕಾರ್ಜುನ ಖರ್ಗೆ
Vijayasarthy SN | news18
Updated: February 1, 2019, 3:04 PM IST
ನವದೆಹಲಿ(ಫೆ. 01): ಕೇಂದ್ರ ಸರಕಾರ ಇವತ್ತ ಮಂಡಿಸಿದ ಬಜೆಟನ್ನು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಣಾಳಿಕೆ ಎಂದು ಬಣ್ಣಿಸಿದ್ದಾರೆ. ಇನ್ನೂ ಮುಂದುವರಿದ ಖರ್ಗೆ ಅವರು, ಈ ಬಜೆಟ್ ಮೂಲಕ ಕೇಂದ್ರ ಸರಕಾರವು ಲೋಕಸಭೆ ಚುನಾವಣೆಗೆ ಮತದಾರರಿಗೆ ಲಂಚದ ಆಮಿಷ ಒಡ್ಡುತ್ತಿದೆ ಎಂದು ಟೀಕಿಸಿದ್ದಾರೆ.

ಹಣಕಾಸು ಸಚಿವ ಪಿಯೂಶ್ ಗೋಯೆಲ್ ಅವರ ಬಜೆಟ್ ಮಂಡನೆ ಬಳಿಕ ಸಂಸತ್​ನ ಹೊರತೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಬಜೆಟ್​ನಲ್ಲಿ ಕೊಡಲಾಗಿರುವ ಭರವಸೆಗಳೆಲ್ಲವೂ ಚುನಾವಣಾ ಗಿಮಿಕ್ ಅಷ್ಟೇ. ಈ ವರ್ಷದ ಮೇ ತಿಂಗಳವರೆಗೂ ಮಾತ್ರ ಅಧಿಕಾರದಲ್ಲಿರುವ ಬಿಜೆಪಿಗೆ ತಾನು ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಒಟ್ಟಾರೆ ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಚುನಾವಣೆಗೆ ನೇರವಾಗಿ ಹಣ ಕೊಡುವಂತಿಲ್ಲ ಎಂದು ಕೇಂದ್ರವು ಹೀಗೆ 6 ಸಾವಿರ ರೂ ಕೊಡುತ್ತಿದೆ: ಹೆಚ್.ಡಿ. ರೇವಣ್ಣ ವ್ಯಂಗ್ಯ

ಭಾರತೀಯ ಜನತಾ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಏನು ಸಾಧನೆ ಮಾಡಿದೆ, ಐದ ವರ್ಷಗಳಲ್ಲಿ ಯಾವೆಲ್ಲಾ ಭರವಸೆಗಳನ್ನ ಈಡೇರಿಸಿದೆ ಎಂಬುದನ್ನು ತಿಳಿಸಲಿಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೂ 15 ಲಕ್ಷ ರೂ ಕೊಡುವ ಸುಳ್ಳು ಭರವಸೆ ಬಗ್ಗೆ ಚಕಾರ ಎತ್ತಲಿಲ್ಲ. ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವ ದೊಡ್ಡ ಭರವಸೆ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಈ ಹಿಂದೆಯೂ ಮಾಡುತ್ತಾ ಬಂದಂತೆ ಈ ಬಜೆಟ್​ನಲ್ಲೂ ಅದೇ ಸುಳ್ಳು ಭರವಸೆಗಳನ್ನ ಮುಂದುವರಿಸಿಕೊಂಡು ಹೋಗಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಣಕವಾಡಿದ್ದಾರೆ.

“ಇವರು ಮಾಡುವ ಪ್ರತಿಯೊಂದರಲ್ಲೂ ರಾಜಕೀಯ ಇರುತ್ತದೆ. ಈ ಬಜೆಟ್​ನಲ್ಲಿ ಬಡವರಿಗಾಗಿ ಏನೂ ಇಲ್ಲ. ಸಂಸತ್​ನಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆ ಓದಿದಂತಿದೆಯಷ್ಟೇ. ಇದರಿಂದ ಆ ಪಕ್ಷಕ್ಕೆ ಯಾವುದೇ ವೋಟ್ ಸಿಗಲ್ಲ. ಜನರನ್ನು ಮತ್ತೆ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ.” ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Hindi Budget - ಬಜೆಟ್​ನಲ್ಲೂ ಹಿಂದಿ ಹೇರಿಕೆ : ಕನ್ನಡಿಗರ ಆಕ್ರೋಶ

ಬಜೆಟ್​ನಲ್ಲಿ ಘೋಷಿಸಿದ ರೈತರಿಗೆ ನೇರ ಹಣ ಬೆಂಬಲ ಯೋಜನೆ ಬಗ್ಗೆ ಅಪಸ್ವರ ಎತ್ತಿದ ಮಲ್ಲಿಕಾರ್ಜುನ ಖರ್ಗೆ, ಇದು ರೈತ ಬಾಂಧವರಿಗೆ ಮಾಡಿದ ಕುಹಕ ಎಂದು ಬಣ್ಣಿಸಿದ್ದಾರೆ. ಎರಡೂವರೆ ಹೆಕ್ಟೇರ್​ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಮೂರು ತಿಂಗಳಿಗೆ ಮೊದಲ ಕಂತಾಗಿ 2 ಸಾವಿರ ರೂ ಕೊಡುತ್ತಾರೆ. ಇದು ಚುನಾವಣೆಯಷ್ಟರಲ್ಲಿ ರೈತರಿಗೆ ತೃಪ್ತಿ ಕೊಡಲು ನೀಡುತ್ತಿರುವ ಹಣವಾಗಿದೆ ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ.
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...