Budget 2022-Education: ಬಜೆಟ್​​ನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಬಂಪರ್ ಕೊಡುಗೆ; ಇಲ್ಲಿವೆ ಪ್ರಮುಖಾಂಶಗಳು

2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಅಂಗನವಾಡಿಗಳಿಗೆ ಆಡಿಯೋ-ವಿಡಿಯೋ ವ್ಯವಸ್ಥೆ ಕೂಡ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಫೆ.01): ಈ ಬಾರಿಯ ಬಜೆಟ್​ನಲ್ಲಿ (Union Budget-2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಶೈಕ್ಷಣಿಕ ಕ್ಷೇತ್ರಕ್ಕೆ (Education Sector) ಬಂಪರ್ ಕೊಡುಗೆ ನೀಡಿದ್ದಾರೆ. ಕೊರೋನಾ ಹಿನ್ನೆಲೆ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದರಿಂದ 12ನೇ ತರಗತಿವರೆಗೆ ‘ಒನ್ ಕ್ಲಾಸ್​, ಒನ್​ ಟಿವಿ ಚಾನಲ್‘ (One Class One TV Channel) ಯೋಜನೆ ಜಾರಿಗೆ ತರಲಾಗುತ್ತಿದೆ. ಕೊರೋನಾ (Corona) ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದರು.

200 ಚಾನೆಲ್​ಗಳ ಮೂಲಕ ಪಾಠ

ಪ್ರಧಾನಿ ಇ-ವಿದ್ಯಾ ಯೋಜನೆಯಡಿಯಲ್ಲಿ ದೂರದರ್ಶನ ಚಾನೆಲ್​​ಗಳ ಸಂಖ್ಯೆಯನ್ನು 12ರಿಂದ 200ಕ್ಕೆ ಹೆಚ್ಚಿಸಲಾಗುವುದು. ಪ್ರತೀ ತರಗತಿಗೆ ಟಿವಿ ಚಾನೆಲ್​ ಮೂಲಕ ಪಾಠ ಮಾಡಲಾಗುವುದು. ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತದೆ. 200 ಟಿವಿ ಚಾನೆಲ್​ಗಳ ಮೂಲಕ ಶೈಕ್ಷಣಿಕ ಅಭಿವೃದ್ದಿ ಮಾಡಲಿದ್ದೇವೆ ಎಂದರು. ಜೊತೆಗೆ ವಿಶ್ವದರ್ಜೆಯ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಘೋಷಿಸಿದರು.

ಇದನ್ನೂ ಓದಿ: Union Budget 2022: ಈ ಬಾರಿ ಯಾವ ವಸ್ತು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ

2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ

ಹಳ್ಳಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಅಂಗನವಾಡಿಗಳಿಗೆ ಆಡಿಯೋ-ವಿಡಿಯೋ ವ್ಯವಸ್ಥೆ ಕೂಡ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು. ಡಿಜಿಟಲ್​ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಡ್ರೋನ್ ಪವರ್ ಕಾರ್ಯಕ್ರಮದ ಭಾಗವಾಗಿ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲಾಗುವುದು. ಕೃಷಿ ವಿವಿಗಳಲ್ಲಿ ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುವುದು ಎಂದು ಸಚಿವರು ತಿಳಿಸಿದರು.

60 ಲಕ್ಷ ಉದ್ಯೋಗ ಸೃಷ್ಟಿ

ಶಿಕ್ಷಕರಿಗೆ ಡಿಜಿಟಲ್ ಕೌಶಲ್ಯದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಸಚಿವರು ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಇ-ಕಂಟೆಂಟ್ ಲಭ್ಯವಾಗುವಂತೆ ಮಾಡಲಾಗುವುದು. ಡಿಜಿಟಲ್ ಎಜುಕೇಶನ್ ಶಿಕ್ಷಕರಿಗೆ ವಿಶ್ವ ದರ್ಜೆಯ ಸಾಧನಗಳನ್ನು ಒದಗಿಸುತ್ತದೆ. ನಿರುದ್ಯೋಗಿ ಯುವಕರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಬಜೆಟ್ ನಲ್ಲಿ ಶುಭ ಸುದ್ದಿ ನೀಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು? ಕೃಷಿ ವಲಯಕ್ಕೆ ಸೇರಿದ ಘೋಷಣೆಗಳು ಇಲ್ಲಿವೆ

ಇಂದು ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಈ ಬಜೆಟ್ ಮಂಡಿಸಿದ್ದಾರೆ. ಕೊರೋನಾ ನಂತರ ಮಂಡನೆಯಾದ 2ನೇ ಬಜೆಟ್ ಇದಾಗಿದೆ. ಬೆಳಗ್ಗೆ 11 ಗಂಟೆಗೆ ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆ ಶುರುವಾಗಿ 12.33ಕ್ಕೆ ಮುಕ್ತಾಯಗೊಂಡಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪೇಪರ್ ಲೆಸ್ ಬಜೆಟ್​ ಮಂಡಿಸಿದರು. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ.
Published by:Latha CG
First published: