COVID Effect: ಬಜೆಟ್​ ತಯಾರಿಸಿದ ಸಿಬ್ಬಂದಿಗಾಗಿ ನಡೆಯುತ್ತಿದ್ದ ಹಲ್ವಾ ಸಮಾರಂಭ ರದ್ದು!

ಸಂಸತ್ತಿನಲ್ಲಿ 1 ಫೆಬ್ರವರಿ 2022ರಂದು ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಬಜೆಟ್ 2022-23 ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಲಭ್ಯವಿರುತ್ತದೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
2022-23ನೇ ಹಣಕಾಸು ವರ್ಷಕ್ಕೆ ಕೇಂದ್ರ ಹಣಕಾಸು (Finance Minister) ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1, 2022ರಂದು ಬಜೆಟ್ ಮಂಡಿಸಲಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ಕಾಗದರಹಿತ ಬಜೆಟ್ ಮಂಡಿಸಲಾಗುತ್ತಿದ್ದು, ಕಳೆದ ವರ್ಷ ಸರ್ಕಾರ ಬಿಡುಗಡೆ ಮಾಡಿದ್ದ ಕೇಂದ್ರ ಬಜೆಟ್ ಆ್ಯಪ್‌ನಿಂದ ಜನರಿಗೆ ಡಿಜಿಟಲ್ ಸಂಪರ್ಕದ (Digital Connectivity) ಮೂಲಕ ಬಜೆಟ್ ಬಗ್ಗೆ ಮಾಹಿತಿ ಸಿಗಲಿದೆ. ಬಜೆಟ್ ಮಂಡನೆಗೂ ಮುನ್ನ ಹಲವು ವರ್ಷಗಳಿಂದ ನಡೆದುಕೊಂದು ಬಂದಿದ್ದ ಸಾಂಪ್ರದಾಯಿಕ ಹಲ್ವಾ (Traditional Halwa) ವಿತರಣಾ ಸಮಾರಂಭವನ್ನೂ ಈ ಭಾರಿ ರದ್ದುಗೊಳಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಈ ಭಾರಿ ಹಲ್ವಾ ಸಮಾರಂಭವನ್ನು ಕೈಗೊಳ್ಳುತ್ತಿಲ್ಲ ಎಂದು ಸಚಿವಾಲಯ ತಿಳಿಸಿದೆ. ಹಲ್ವಾ ಬದಲಿಗೆ ಕೇಂದ್ರ ಸರ್ಕಾರ ತನ್ನ ಸಿಬ್ಬಂದಿಗಳಿಗೆ ಸಿಹಿ ತಿನಿಸುಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ಏನಿದು ಹಲ್ವಾ ಸಮಾರಂಭ..?
ಕೇಂದ್ರ ಬಜೆಟ್ ಮಂಡನೆಯಾಗುವುದಕ್ಕಿಂತಲೂ ಕೆಲವು ದಿನಗಳ ಮೊದಲು ಹಣಕಾಸು ಇಲಾಖೆಯಿಂದ ಹಲ್ವಾ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಕೇಂದ್ರ ಬಜೆಟ್‌ಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಹೊಸದಿಲ್ಲಿಯ ಉತ್ತರ ಬ್ಲಾಕ್‌ನಲ್ಲಿ ಹಲ್ವಾ ಸಮಾರಂಭ ನಡೆಯುತ್ತದೆ. ಬಜೆಟ್ ಮಂಡನೆ ಹೇಗೋ ಹಲ್ವಾ ಕಾರ್ಯಕ್ರಮವೂ ಸಾಂಪ್ರದಾಯಿಕವಾಗಿ ಪ್ರತಿವರ್ಷ ನಡೆಯುತ್ತದೆ.

ದೆಹಲಿಯಲ್ಲಿ ಇರುವ ಸೆಕ್ರೆಟರಿಯೇಟ್ ಕಟ್ಟಡದ ನಾರ್ತ್ ಬ್ಲಾಕ್‌ನ ಬೇಸ್ಮೆಂಟ್‌ನಲ್ಲಿ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಈ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. ದೊಡ್ಡ ಬಾಣಲೆಯಲ್ಲಿ ಹಲ್ವಾ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಕೇಂದ್ರ ಹಣಕಾಸು ಸಚಿವರು ಈ ಹಲ್ವಾ ಕಾರ್ಯಕ್ರಮ ಸಂಭ್ರಮಾಚರಣೆ ಶುರು ಮಾಡುತ್ತಾರೆ. ಅದನ್ನು ಅವರ ಸಹೋದ್ಯೋಗಿಗಳಿಗೆ ವಿತರಿಸುತ್ತಾರೆ. ರಾಜ್ಯ ಖಾತೆ ಸಚಿವರು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

ಇದನ್ನೂ ಓದಿ: Budget 2022: ಬಜೆಟ್ ಹೇಗೆ ಸಿದ್ಧವಾಗುತ್ತೆ? ಎಲ್ಲಿ ಮುದ್ರಣ ಮಾಡಲಾಗುತ್ತೆ? ಇಲ್ಲಿದೆ ರಹಸ್ಯ ಮಾಹಿತಿ

ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ
ಹಲ್ವಾ ಕಾರ್ಯಕ್ರಮ ಬಜೆಟ್ ಭಾಷಣದ ಪ್ರತಿಯನ್ನು ಮುದ್ರಿಸಲು ಆರಂಭ ಮಾಡಲಾಗುತ್ತಿದೆ ಎಂಬುದನ್ನು ತಿಳಿಸುವ ಸೂಚನೆ ಆಗಿದೆ. ಆದರೆ ಈ ಕಳೆದ ವರ್ಷದಂತೆ ಈ ಭಾರಿಯೂ ಯಾವುದೇ ಮುದ್ರಣವಿಲ್ಲ. ತಿಂಗಳುಗಟ್ಟಲೆ ನಡೆಯುವ ಬಜೆಟ್ ಸಿದ್ಧತೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸುವುದಕ್ಕಾಗಿ ಈ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. ಬಜೆಟ್‌ನ ಪ್ರಮುಖ ದಾಖಲೆಯಾದ ಭಾಷಣದ ಪ್ರತಿಯನ್ನು ಸಿದ್ಧಪಡಿಸುವಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಹಲ್ವಾ ಹಂಚಲಾಗುತ್ತದೆ. ಆದರೆ ಹಲವು ವರ್ಷಗಳಿಂದ ನಡೆದುಕೊಂದು ಬಂದಿದ್ದ ಹಲ್ವಾ ಕಾರ್ಯಕ್ರಮ ಈ ಭಾರಿ ನಡೆಯುತ್ತಿಲ್ಲ.

ಆ್ಯಪ್ ಮೂಲಕ ಬಜೆಟ್‌ ಮಾಹಿತಿ

ಸಂಸತ್ತಿನಲ್ಲಿ 1 ಫೆಬ್ರವರಿ 2022ರಂದು ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಬಜೆಟ್ 2022-23 ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಲಭ್ಯವಿರುತ್ತದೆ. ಐತಿಹಾಸಿಕ ನಡೆಯಲ್ಲಿ, 2021-22ರ ಕೇಂದ್ರ ಬಜೆಟ್ ಅನ್ನು ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ವಿತರಿಸಲಾಯಿತು. ಬಜೆಟ್ ಬಗ್ಗೆ ಮುಕ್ತ ಮಾಹಿತಿ ನೀಡಲು "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್" ಅನ್ನು ಸಹ ಕಳೆದ ವರ್ಷ ಪ್ರಾರಂಭಿಸಲಾಯಿತು.ಈ ಬಾರಿಯೂ ಇದೇ ಆ್ಯಪ್ ಮೂಲಕ ಬಜೆಟ್ ಅಧಿಕೃತ ಮಾಹಿತಿಯನ್ನು ಮೊಬೈಲ್‌ನಲ್ಲೇ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Union Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಟೀಂನಲ್ಲಿರೋ ಸದಸ್ಯರ ಮಾಹಿತಿ ಇಲ್ಲಿದೆ

ಮೊಬೈಲ್ ಅಪ್ಲಿಕೇಶನ್
ಸಚಿವಾಲಯದ ಪ್ರಕಾರ, ಮೊಬೈಲ್ ಅಪ್ಲಿಕೇಶನ್ 14 ಕೇಂದ್ರ ಬಜೆಟ್ ದಾಖಲೆಗಳಿಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ಬಜೆಟ್ ಭಾಷಣ, ವಾರ್ಷಿಕ ಹಣಕಾಸು ಹೇಳಿಕೆ (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನಕ್ಕಾಗಿ ಬೇಡಿಕೆ (ಡಿಜಿ), ಹಣಕಾಸು ಮಸೂದೆ, ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಬಹುದು. ಮೊಬೈಲ್ ಅಪ್ಲಿಕೇಶನ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿದ್ದು, Android ಮತ್ತು iOS ಎರಡೂ ವೇದಿಕೆಗಳಲ್ಲಿ ಲಭ್ಯವಿದೆ.

ಅಪ್ಲಿಕೇಶನ್ ಅನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ನಿಂದ ಡೌನ್‌ಲೋಡ್ ಮಾಡಬಹುದು. ಬಜೆಟ್ ದಾಖಲೆಗಳು ಸಾರ್ವಜನಿಕರಿಗೆ ಡೌನ್‌ಲೋಡ್ ಮಾಡಲು ಸಹ ಲಭ್ಯವಿರುತ್ತವೆ ಎಂದು ಸಚಿವಾಲಯ ತಿಳಿಸಿದೆ.
Published by:vanithasanjevani vanithasanjevani
First published: