HOME » NEWS » National-international » BUDGET 2021 ALL YOU NEED TO KNOW BEFORE FINMIN SITHARAMAN PRESENTS HER 3RD FULL TIME FINANCIAL PAPERS RHHSN

Budget 2021: ನಿರ್ಮಲಾ ಸೀತಾರಾಮನ್ 3ನೇ ಬಾರಿ ಪೂರ್ಣಾವಧಿ ಬಜೆಟ್ ಮಂಡಿಸುವ ಮುನ್ನ ನೀವು ತಿಳಿದಿರಬೇಕಾದ ಅಂಶ

ಆತ್ಮನಿರ್ಭಾರ್ ಭಾರತ್ ಮತ್ತು ಸ್ವಾವಲಂಬಿ ಆರ್ಥಿಕತೆಯ ಅಗತ್ಯತೆಯ ಮೇಲೆ ಬಜೆಟ್  ಕೇಂದ್ರೀಕರಿಸಿದೆ. ದೇಶೀಯ ಉತ್ಪಾದನೆ, ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಘೋಷಣೆ ಮಾಡುವ ನಿರೀಕ್ಷೆಯಿದೆ ಮತ್ತು ಆರೋಗ್ಯ ವೆಚ್ಚಗಳಿಗೆ ಉತ್ತೇಜನ ನೀಡಲಿದೆ. ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ರಕ್ಷಣಾ ಸಚಿವರಾಗಿದ್ದರು. ಹಣಕಾಸು ಸಚಿವರಾದ ಬಳಿಕ ಇದು ಅವರು ಮಂಡಿಸುತ್ತಿರುವ ಮೂರನೇ ಪೂರ್ಣಾವಧಿ ಬಜೆಟ್ ಆಗಿದೆ.

news18-kannada
Updated:February 1, 2021, 8:10 AM IST
Budget 2021: ನಿರ್ಮಲಾ ಸೀತಾರಾಮನ್ 3ನೇ ಬಾರಿ ಪೂರ್ಣಾವಧಿ ಬಜೆಟ್ ಮಂಡಿಸುವ ಮುನ್ನ ನೀವು ತಿಳಿದಿರಬೇಕಾದ ಅಂಶ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
  • Share this:
ನವದೆಹಲಿ; ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2021-22 ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವನ್ನು ಎರಡು ಅವಧಿಗಳಲ್ಲಿ ಆಯೋಜಿಸಲಾಗಿದೆ. ಜನವರಿ 29ರಿಂದ ಫೆಬ್ರಬರಿ 15ರವರೆಗೆ ಮೊದಲ ಅಧಿವೇಶನ ಹಾಗೂ ಮಾರ್ಚ್ 8ರಿಂದ ಏಪ್ರಿಲ್ 8ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.

ಕೋವಿಡ್-19 ಸಾಂಕ್ರಾಮಿಕದಿಂದ ಹೊಡೆತದಿಂದ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದ ನಂತರದಲ್ಲಿ ಈ ಬಜೆಟ್ ಮಂಡನೆಯಾಗುತ್ತಿದೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ತ್ರೈಮಾಸಿಕ ಸಂಪೂರ್ಣ ಸ್ತಬ್ಧಗೊಂಡು, ದೇಶದ ಆರ್ಥಿಕತೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ.

ಇಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎರಡು ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಆರಂಭಿಸಲಿದ್ದಾರೆ.

ಬಜೆಟ್ ಪ್ರತಿಗಳು ಮುದ್ರಣಕ್ಕೆ ಹೋಗುವ ಮುನ್ನ ಪ್ರತಿವರ್ಷ ಹಣಕಾಸು ಇಲಾಖೆಯಿಂದ ಹಲ್ವಾ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಬಜೆಟ್ ಮಂಡನೆಗೆ 10 ದಿನ ಬಾಕಿಇರುವಂತೆ ಈ ಹಲ್ವಾ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಆದಾಗ್ಯೂ, ಕೆಲ ವರದಿಗಳ ಪ್ರಕಾರ, ಹಣಕಾಸು ಇಲಾಖೆ ಈ ಬಾರಿ ಹಳೆ ಪದ್ಧತಿಯನ್ನು ಬದಲಿಸಿದೆ. ಕೊರೋನಾ ಸಾಂಕ್ರಾಮಿಕ ಕಾರಣದಿಂದ ಈ ಬಜೆಟ್ ಅನ್ನು ಕಾಗದರಹಿತ ಬಜೆಟ್ ಆಗಿಸಲು ನಿರ್ಧರಿಸಿದೆಯಂತೆ.

ಇದನ್ನು ಓದಿ: Union Budget 2021 – ಈ ಬಾರಿಯ ಬಜೆಟ್​ನಿಂದ ಜನಸಾಮಾನ್ಯನಿಗಿರುವ ಕೆಲ ನಿರೀಕ್ಷೆಗಳು

ಕೊರೋನಾ ಹೊಡೆತದಿಂದ ಭಾರೀ ಪೆಟ್ಟು ತಿಂದಿರುವ ಆರ್ಥಿಕತೆ ಸುಧಾರಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು 2021ರ ಬಜೆಟ್​ನ ಮುಖ್ಯ ನಿರೀಕ್ಷೆಯಾಗಿದೆ. ಕೇಂದ್ರ ಬಜೆಟ್ 2021 ಹಣಕಾಸಿನ ಉತ್ತೇಜನ ನೀಡಲು ಗಮನಹರಿಸಬೇಕು ಮತ್ತು ಆ ಸಮಯದಲ್ಲಿ ಸರ್ಕಾರವು ಬಿಗಿಯಾದ ಹಣಕಾಸಿನ ಕೊರತೆಯ ಗುರಿಯತ್ತ ನೋಡಬಾರದು ಎಂದು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Youtube Video
ಆತ್ಮನಿರ್ಭಾರ್ ಭಾರತ್ ಮತ್ತು ಸ್ವಾವಲಂಬಿ ಆರ್ಥಿಕತೆಯ ಅಗತ್ಯತೆಯ ಮೇಲೆ ಬಜೆಟ್  ಕೇಂದ್ರೀಕರಿಸಿದೆ. ದೇಶೀಯ ಉತ್ಪಾದನೆ, ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಘೋಷಣೆ ಮಾಡುವ ನಿರೀಕ್ಷೆಯಿದೆ ಮತ್ತು ಆರೋಗ್ಯ ವೆಚ್ಚಗಳಿಗೆ ಉತ್ತೇಜನ ನೀಡಲಿದೆ. ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ರಕ್ಷಣಾ ಸಚಿವರಾಗಿದ್ದರು. ಹಣಕಾಸು ಸಚಿವರಾದ ಬಳಿಕ ಇದು ಅವರು ಮಂಡಿಸುತ್ತಿರುವ ಮೂರನೇ ಪೂರ್ಣಾವಧಿ ಬಜೆಟ್ ಆಗಿದೆ.

Published by: HR Ramesh
First published: February 1, 2021, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories