HOME » NEWS » National-international » BUDGET 2020 MAY INCOME TAX CUTS WHO EARNING LESS THAN FIVE LAKHS RH

Budget 2020 | 5 ಲಕ್ಷದವರೆಗೆ ಆದಾಯ ಹೊಂದಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸಲು ಚಿಂತನೆ

ಫೆ.1ರಂದು ಮಂಡನೆಯಾಗಲಿರುವ ಬಜೆಟ್​ನಲ್ಲಿ ತೆರಿಗೆ ಕಡಿತ ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿದೆ. ತೆರಿಗೆ ಕಡಿತಗೊಳಿಸುವ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಅರ್ಥಿಕ ಸ್ಥಿತಿಗತಿಯನ್ನು ಅವಲೋಕನ ಮಾಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

HR Ramesh | news18-kannada
Updated:February 10, 2020, 7:24 PM IST
Budget 2020 | 5 ಲಕ್ಷದವರೆಗೆ ಆದಾಯ ಹೊಂದಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸಲು ಚಿಂತನೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಪಾತಾಳಕ್ಕೆ ಕುಸಿದಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವುದು ಸರ್ಕಾರದ ತುರ್ತು ಅಗತ್ಯ ಕ್ರಮವಾಗಿದೆ. ಹಾಗಾಗಿ ಫೆಬ್ರವರಿ ಒಂದರಂದು ಮಂಡನೆಯಾಗಲಿರುವ ಬಜೆಟ್​ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಕುಸಿದಿರುವ ಉದ್ಯಮ ಚೇತರಿಕೆ, ಗ್ರಾಹಕರ ಖರೀದಿ ಶಕ್ತಿಯನ್ನು ಹೆಚ್ಚಳ, ಕೃಷಿ ಉತ್ತೇಜನದ ಜೊತೆಗೆ ವೈಯಕ್ತಿಕ ಆದಾಯ ತೆರಿಗೆ ಕಡಿತಗೊಳಿಸುವ ಮೂಲಕ ತೆರಿಗೆದಾರರಿಗೆ  ಸಿಹಿಸುದ್ದಿ ನೀಡುವ ನಿರೀಕ್ಷೆಯೂ ಇದೆ.

ವಾರ್ಷಿಕ ಆದಾಯ 7 ಲಕ್ಷ ರೂಪಾಯಿ ಆದಾಯ ಇರುವವರಿಗೆ ಶೇ.5ರಷ್ಟು ತೆರಿಗೆ, 7 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ.10ರಷ್ಟು, 10 ಲಕ್ಷದಿಂದ 20 ಲಕ್ಷ ಆದಾಯ ಪಡೆಯುವವರಿಗೆ ಶೇ.20ರಷ್ಟು ಹಾಗೂ 20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.  5ಲಕ್ಷದವರೆಗೆ ಆದಾಯ ಹೊಂದಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸುವ ಪ್ರಸ್ತಾವನೆ ಈ ಬಾರಿಯ ಬಜೆಟ್​ನಲ್ಲಿ ಇದೆ ಎನ್ನಲಾಗಿದೆ. ಕಳೆದ ವರ್ಷದ ಬಜೆಟ್​ನಲ್ಲಿ 2.5 ಲಕ್ಷದವರೆಗಿನ ವ್ಯಕ್ತಿ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿತ್ತು. ಇನ್ನು 2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ಪಡೆಯುವವರಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿತ್ತು. 5 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು ಶೇ.5ರಿಂದ ಶೇ.20ರಷ್ಟು ತೆರಿಗೆ ಪಾವತಿ ಮಾಡಬೇಕಿದ್ದರಿಂದ ಮಧ್ಯಮ ವರ್ಗದ ಜನರು ದುಡಿದ ಹಣ ಉಳಿತಾಯದ ಮೇಲೆ ಭಾರೀ ಪೆಟ್ಟು ನೀಡಿತ್ತು.

ಕಳೆದ ಕೇಂದ್ರ ಬಜೆಟ್ ನಲ್ಲಿ 2.5 ಲಕ್ಷದವರೆಗಿನ ವ್ಯಕ್ತಿ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಇನ್ನು 2,50,001 ರಿಂದ 5,00,000ದವರೆಗಿನ ಆದಾಯಕ್ಕೆ 5% ತೆರಿಗೆ ವಿಧಿಸಲಾಗಿತ್ತು. 5 ಲಕ್ಷಕ್ಕಿಂತ ಅಧಿಕ ಆದಾಯವನ್ನು ಹೊಂದಿರುವ ವ್ಯಕ್ತಿಯೊಬ್ಬ 5 ರಿಂದ 20 ಪ್ರತಿಶತ ತೆರಿಗೆ ಪಾವತಿಸುವುದರಿಂದ ಆ ವ್ಯಕ್ತಿಯ ಕೈಗೆ ಸಿಗುವ ಆದಾಯದ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿತ್ತು.

ಇದನ್ನು ಓದಿ: Budget 2020: ಬಜೆಟ್​ನಿಂದ ದೇಶದ ಕೃಷಿ ಕ್ಷೇತ್ರದ ನಿರೀಕ್ಷೆಗಳೇನು?

ಫೆ.1ರಂದು ಮಂಡನೆಯಾಗಲಿರುವ ಬಜೆಟ್​ನಲ್ಲಿ ತೆರಿಗೆ ಕಡಿತ ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿದೆ. ತೆರಿಗೆ ಕಡಿತಗೊಳಿಸುವ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಅರ್ಥಿಕ ಸ್ಥಿತಿಗತಿಯನ್ನು ಅವಲೋಕನ ಮಾಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

First published: January 30, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories