ವೈಯಕ್ತಿಕ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲು ಮುಂದಾದ ಕೇಂದ್ರ; 7 ಲಕ್ಷ ರೂ.ಗಳವರೆಗಿನ ಸುಂಕ ಶೇ.5

2019 ರ ಫೆಬ್ರವರಿಯಲ್ಲಿ ಮೋದಿ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್​ನಲ್ಲಿ ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇರುವ ತೆರಿಗೆದಾರರಿಗೆ ಸರ್ಕಾರ ಪರಿಹಾರ ನೀಡಿತ್ತು. ಅಲ್ಲದೆ, ತೆರಿಗೆ ವಿಧಿಸಬಹುದಾದ ಆದಾಯವು 5 ಲಕ್ಷ ರೂ.ಗಳನ್ನು ಮೀರದಿದ್ದರೆ ಶೂನ್ಯ ತೆರಿಗೆ ಎಂದು ಘೋಷಿಸಿತ್ತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

  • Share this:
ನವ ದೆಹಲಿ (ಜನವರಿ 22); ಈ ವರ್ಷದ ಕೇಂದ್ರ ಬಜೆಟ್​ನಲ್ಲಿ ವೈಯಕ್ತಿಕ ಆದಾಯದ ಮೇಲಿನ ಪರಿಹಾರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ವರ್ಷಕ್ಕೆ 7 ಲಕ್ಷ ರೂ. ವರೆಗೆ ಆದಾಯ ಹೊಂದಿರುವವರಿಗೆ ಶೇ5 ರಷ್ಟು ಹಾಗೂ 7 ರಿಂದ 10 ಲಕ್ಷ ರೂ ಆದಾಯ ಹೊಂದಿರುವವರಿಗೆ ಶೇ.10ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಹಿಂದಿನ ತೆರಿಗೆ ನೀತಿಯಲ್ಲಿ ವಾರ್ಷಿಕ 5 ಲಕ್ಷ ರೂ ಆದಾಯ ಹೊಂದಿದ್ದವರಿಗೂ ಶೇ.5 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಈ ಮಿತಿಯನ್ನು 5 ರಿಂದ 7 ಲಕ್ಷ ರೂ ಗೆ ಏರಿಸಲಾಗಿದೆ.

ಕೇಂದ್ರ ಸರ್ಕಾರದ ಈ ನೂತನ ಪ್ರಕಟಣೆ ಮುಂದಿನ ವರ್ಷದ ತೆರಿಗೆ ಪ್ರಸ್ತಾಪಗಳ ಭಾಗವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣವನ್ನು ಪ್ರಕಟಿಸಲಿದ್ದಾರೆ.

2019 ರ ಫೆಬ್ರವರಿಯಲ್ಲಿ ಮೋದಿ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್​ನಲ್ಲಿ ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇರುವ ತೆರಿಗೆದಾರರಿಗೆ ಸರ್ಕಾರ ಪರಿಹಾರ ನೀಡಿತ್ತು. ಅಲ್ಲದೆ, ತೆರಿಗೆ ವಿಧಿಸಬಹುದಾದ ಆದಾಯವು 5 ಲಕ್ಷ ರೂ.ಗಳನ್ನು ಮೀರದಿದ್ದರೆ ಶೂನ್ಯ ತೆರಿಗೆ ಎಂದು ಘೋಷಿಸಿತ್ತು.

ಆದರೆ, ಈ ವರ್ಷದ ಬಜೆಟ್​ನಲ್ಲಿ ವೈಯಕ್ತಿಕ ಆದಾಯ 10 ಲಕ್ಷ ದಿಂದ 20 ಲಕ್ಷ ರೂ.ವರೆಗೆ ಶೇ.20 ರಷ್ಟು, 20 ಲಕ್ಷದಿಂದ 10 ಕೋಟಿ ರೂ.ಗಳ ನಡುವಿನ ಆದಾಯ ಹೊಂದಿರುವವರು ಶೇ.30 ರಷ್ಟು ಹಾಗೂ ವರ್ಷಕ್ಕೆ 10 ಕೋಟಿ ರೂ.ಗಿಂತ ಹೆಚ್ಚು ಗಳಿಸುವವರಿಗೆ ಶೇ.35 ರಷ್ಟು ತೆರಿಗೆ ವಿಧಿಸಿ ಹೊಸ ಸ್ಲ್ಯಾಬ್ ಘೋಷಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಕುಸಿತವನ್ನು ಸುಧಾರಿಸುವ ನಿಟ್ಟಿನಲ್ಲಿ 1.45 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆಯನ್ನು ರದ್ದು ಮಾಡಿದ್ದರು. ಆದಾಗ್ಯೂ, ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಮೋದಿ ಸರ್ಕಾರ ಸ್ಪಷ್ಟ ಬಹುಮತ ಗಳಿಸಿದ ನಂತರ ಮಂಡಿಸಿದ ಮೊದಲ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಯಾವುದೇ ಪ್ರಮುಖ ತೆರಿಗೆ ಪರಿಹಾರವನ್ನು ಸಚಿವರು ಘೋಷಿಸಿರಲಿಲ್ಲ.

ಆದರೆ, ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದ ಪರಿಣಾಮ ವೈಯಕ್ತಿಕ ಆದಾಯ ತೆರಿಗೆಯಲ್ಲಿನ ಪರಿಹಾರದ ಬೇಡಿಕೆಗಳು ಹೆಚ್ಚಾಗಿದ್ದು, ಈ ಕಾರಣಕ್ಕಾಗಿ ಸರ್ಕಾರ ಇಂತಹ ನಿರ್ಧಾರಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಆರ್ಥಿಕ ಕುಸಿತ, ಆತಂಕದಲ್ಲಿ ಭಾರತ; ಆರ್ಥಿಕತೆ ಎಂದರೇನು? ಲೆಕ್ಕಾಚಾರ ಹೇಗೆ? ದೇಶದ ಪ್ರಸ್ತುತ ಸ್ಥಿತಿ ಏನು? ಇಲ್ಲಿದೆ ಮಾಹಿತಿ
First published: