Union Budget 2019; ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್​; ಕೇಂದ್ರದ ಮೇಲಿದೆ 10 ನಿರೀಕ್ಷೆಗಳು

ನರೇಂದ್ರ ಮೋದಿ ಬಹುಮತದೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. 2023 ಅಭಿವೃದ್ಧಿಯ ಕನಸು ಹೊತ್ತ ಎರಡನೇ ಅವಧಿಯ ಮೊದಲ ಬಜೆಟ್​ ಅನ್ನು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಹತ್ವದ ಬಜೆಟ್​ನಲ್ಲಿ ಜನರ ನಿರೀಕ್ಷೆಗಳೇನು? ಸರ್ಕಾರದ ಮುಂದಿರುವ ಸವಾಲು ಹಾಗೂ ಆದ್ಯತೆಯ ಕ್ಷೇತ್ರ ಯಾವುದು? ಇಲ್ಲಿದೆ ಮಾಹಿತಿ.

Rajesh Duggumane | news18
Updated:July 5, 2019, 8:47 AM IST
Union Budget 2019; ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್​; ಕೇಂದ್ರದ ಮೇಲಿದೆ 10 ನಿರೀಕ್ಷೆಗಳು
ಸಾಂದರ್ಭಿಕ ಚಿತ್ರ
  • News18
  • Last Updated: July 5, 2019, 8:47 AM IST
  • Share this:
ಬಹು ನಿರೀಕ್ಷಿತ ಬಜೆಟ್​ 2019ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಡೀ ದೇಶದ ಜನ ಈ ಮಹತ್ವದ ಬಜೆಟ್​ಗಾಗಿ ಕುತೂಹಲದಿಂದ ಕಾದು ಕುಳಿತಿದ್ದಾರೆ. ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಜೆಟ್ ಇದಾಗಿರುವುದರಿಂದ ಸಾಮಾನ್ಯವಾಗಿ ಈ ಬಜೆಟ್​ ಮೇಲೆ ಭಾರೀ ನಿರೀಕ್ಷೆಗಳಿವೆ.

2023 ಅಭಿವೃದ್ಧಿಯ ಕನಸು ಹೊತ್ತ ಎರಡನೇ ಅವಧಿಯ ಮೊದಲ ಬಜೆಟ್​ ಅನ್ನು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಹತ್ವದ ಬಜೆಟ್​ನಲ್ಲಿ ಜನರ ನಿರೀಕ್ಷೆಗಳೇನು? ಸರ್ಕಾರದ ಮುಂದಿರುವ ಸವಾಲು ಹಾಗೂ ಆದ್ಯತೆಯ ಕ್ಷೇತ್ರ ಯಾವುದು? ಇಲ್ಲಿದೆ ಮಾಹಿತಿ.

ತೆರಿಗೆ ಕಡಿತ: ಅಮೆರಿಕದಲ್ಲಿ ಕಾರ್ಪೋರೇಟ್​ ತೆರಿಗೆಯನ್ನು ಶೆ.30ರಿಂದ 21ಕ್ಕೆ ಇಳಿಕೆ ಮಾಡಿದ್ದರು. ಭಾರತದಲ್ಲೂ ಇದೇ ಮಾದರಿಯ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಲಾಭಾಂಶ ವಿತರಣಾ ತೆರಿಗೆ ವಿಚಾರ: ಕಾರ್ಪೋರೇಟ್​ ಕ್ಷೇತ್ರದ ಲಾಭಾಂಶ ವಿತರಣಾ ತೆರಿಗೆಯನ್ನು (ಡಿಡಿಟಿ) ಶೇ.20ರಿಂದ 10ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ.

ಆದಾಯ ತೆರಿಗೆ: ಸದ್ಯ 3 ಲಕ್ಷ ರೂ.ಗೂ ಹೆಚ್ಚು ವೇತನ ಪಡೆಯುವವರು ಆದಾಯ ತೆರಿಗೆ ಪಾವತಿ ಮಾಡಬೇಕು. ಈ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ.

2 ಲಕ್ಷ ಮಿತಿ: 2 ಲಕ್ಷ ರೂ.ಗೂ ಅಧಿಕ ನಗದು ವ್ಯವಹಾರಕ್ಕೆ ಸರ್ಕಾರ ನಿಷೇಧ ಹೇರಿದೆ. ಈ ಮಿತಿಯನ್ನು ತೆಗೆಯಬೇಕು ಎಂದು ಅನೇಕ ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರಗಳು ಒತ್ತಾಯಿಸಿವೆ.

ಭೂ ಸುಧಾರಣೆ: ಭೂ ಸುಧಾರಣೆ ವಿಚಾರದಲ್ಲಿ ಕೆಲ ಬದಲಾವಣೆ ಮಾಡುವಂತೆ ಆಗ್ರಹಿಸಲಾಗಿದೆ.ರಫ್ತು ಪ್ರೋತ್ಸಾಹ: ರಫ್ತಿಗೆ ಹೆಚ್ಚು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ರಫ್ತು ಪ್ರೋತ್ಸಾಹ ಸಿಗುವಂತೆ ಯೋಜನೆ ರೂಪಿಸುವ ಕುರಿತ ಬೇಡಿಕೆ ಇದೆ.

ಬಡ್ಡಿ ದರ: ಉಳಿತಾಯ ಖಾತೆಗೆ ಹೆಚ್ಚಿನ ಬಡ್ಡಿ ನೀಡುವಂತೆ ಜನಸಾಮಾನ್ಯರು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆ ಇದೆ.

ಕೃಷಿ ವಿಚಾರ: ಈ ಬಜೆಟ್​ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವ ಹಾಗೂ ವಿವಿಧ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ಶಿಕ್ಷಣ: ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ದೃಷ್ಟಿಯಲ್ಲಿ ಕೆಲ ಯೋಜನೆಗಳನ್ನು ಕೇಂದ್ರ ಜಾರಿಗೆ ತರುವ ಸಾಧ್ಯತೆ ಇದೆ.

ಹೆಲ್ತ್​ಕೇರ್​: ಆರೋಗ್ಯ ಕ್ಷೇತ್ರದಲ್ಲಿ ನಾನಾ ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ.
First published: July 5, 2019, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading