Union Budget 2019 – ಬಜೆಟ್ ಹೆಸರು ಮತ್ತು ಸೂಟ್​ಕೇಸ್ ಹಿಂದಿವೆ ಕೆಲ ಕುತೂಹಲಕಾರಿ ವಿಚಾರಗಳು

ಹಣಕಾಸು ಸಚಿವರು ಬಜೆಟ್ ಮಂಡನೆಯ ದಿನದಂದು ಸಂಸತ್ ಎದುರು ಬ್ರೀಫ್​ಕೇಸ್ ಹಿಡಿದು ಪೋಸ್ ಕೊಡುವ ಸಂಪ್ರದಾಯ ಪ್ರತೀ ವರ್ಷ ಪಾಲನೆಯಾಗುತ್ತದೆ. ಇವೆಲ್ಲವೂ ಬ್ರಿಟಿಷರಿಂದ ಬಳುವಳಿಯಾಗಿ ಬಂದದ್ದು.

Vijayasarthy SN | news18
Updated:July 4, 2019, 5:46 PM IST
Union Budget 2019 – ಬಜೆಟ್ ಹೆಸರು ಮತ್ತು ಸೂಟ್​ಕೇಸ್ ಹಿಂದಿವೆ ಕೆಲ ಕುತೂಹಲಕಾರಿ ವಿಚಾರಗಳು
ಬಜೆಟ್ ಸೂಟ್​ಕೇಸ್
  • News18
  • Last Updated: July 4, 2019, 5:46 PM IST
  • Share this:
ಬೆಂಗಳೂರು: ಮೋದಿ ನೇತೃತ್ವದ ಸರ್ಕಾರಗಳ 6ನೇ ಬಜೆಟ್ ಹಾಗೂ ಎನ್​ಡಿಎ-2 ಸರ್ಕಾರದ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಗಲಿದೆ. ಬಜೆಟ್ ಎಂದರೆ ಕನ್ನಡದಲ್ಲಿ ಆಯವ್ಯಯ ಪತ್ರ, ಮುಂಗಡಪತ್ರ ಎಂಬಿತ್ಯಾದಿ ಹೆಸರುಗಳಿವೆ. ಆದರೆ, ಬಜೆಟ್ ಪದದ ಮೂಲ ಹಾಗೂ ಬಜೆಟ್ ಮಂಡಿಸುವವರು ಸೂಟ್​ಕೇಸ್ ಹಿಡಿದುಕೊಳ್ಳುವ ಸಂಪ್ರದಾಯದ ಹಿಂದಿರುವ ಕೆಲ ವಿಚಾರಗಳು ಕುತೂಹಲಕಾರಿಯಾಗಿವೆ.

1) ‘ಬಜೆಟ್’ ಎಂಬ ಇಂಗ್ಲೀಷ್ ಪದವು ಫ್ರೆಂಚ್ ಭಾಷೆಯ ‘Bougette’ ಪದದಿಂದ ಎರವಲು ಪಡೆದಿದೆ. ಫ್ರೆಂಚ್​ನಲ್ಲಿ ಇದರ ಅರ್ಥ ಲೆದರ್ ಬ್ರೀಫ್​ಕೇಸ್ ಎಂದಾಗಿದೆ.

2) ಭಾರತದಲ್ಲಿ ಬಜೆಟ್ ಮಂಡನೆಗೆ ಮುನ್ನ ಹಣಕಾಸು ಸಚಿವರು ಸೂಟ್​ಕೇಸ್ ಹಿಡಿದು ಪೋಸ್ ಕೊಡುವುದನ್ನು ನೋಡುತ್ತೇವೆ. ಈ ಸಂಪ್ರದಾಯ ಬಂದಿದ್ದು ಬ್ರಿಟಿಷರಿಂದಲೇ. ಬ್ರಿಟನ್ ಸರ್ಕಾರದಲ್ಲಿ ಬಜೆಟ್ ಮಂಡನೆಗೆ ಮುನ್ನ ‘ಗ್ಲಾಡ್​ಸ್ಟೋನ್ ಬಾಕ್ಸ್’ ಹೆಸರಿನ ಬ್ರೀಫ್​ಕೇಸ್ ಬಳಕೆಯಾಗುತ್ತದೆ.

3) 1860ರಲ್ಲಿ ಅಂದಿನ ಬ್ರಿಟನ್ ಬಜೆಟ್ ಮುಖ್ಯಸ್ಥ ವಿಲಿಯನ್ ಇ. ಗ್ಲಾಡ್​ಸ್ಟೋನ್ ಅವರು ಕೆಂಪು ಬಣ್ಣದ ಸೂಟ್​ಕೇಸ್ ಬಳಸಿದ್ದರು. ಈ ಸೂಟ್​ಕೇಸ್​ನಲ್ಲಿ ಆಗಿನ ಮಹಾರಾಣಿಯ ಚಿನ್ನದ ಬಣ್ಣದ ಚಿತ್ರ ಅಲಂಕೃತಗೊಂಡಿತ್ತು. ಆ ಸೂಟ್​ಕೇಸು ‘ಗ್ಲಾಡ್​ಸ್ಟೋನ್ ಬಾಕ್ಸ್’ (Gladstone Box) ಎಂದೇ ಪ್ರಸಿದ್ಧವಾಯಿತು.

4) ಬ್ರಿಟನ್​ನಲ್ಲಿ ಒಂದೇ ಬ್ರೀಫ್​ಕೇಸ್ ಕಾಲಾನುಕ್ರಮದಲ್ಲಿ ವಿವಿಧ ಹಣಕಾಸು ಸಚಿವರಿಗೆ ವರ್ಗಾಣೆಯಾಗುತ್ತದೆ. ಆದರೆ, ಭಾರತದಲ್ಲಿ ವಿವಿಧ ಹಣಕಾಸು ಸಚಿವರು ವಿವಿಧ ರೀತಿಯ ಬ್ರೀಫ್​ಕೇಸ್ ಬಳಸುತ್ತಾರೆ.

5) ಶತಮಾನದಷ್ಟು ಹಳೆಯದಾದ ಈ ಗ್ಲಾಡ್​ಸ್ಟೋನ್ ಬಾಕ್ಸ್ ತೀರಾ ಹಾಳಾದ್ದರಿಂದ 2010ರಲ್ಲಿ ಬ್ರಿಟನ್ ಸರ್ಕಾರ ಈ ಸೂಟ್​ಕೇಸನ್ನ ಬದಲಿಸಿ ಹೊಸದನ್ನು ತಂದಿತು.

6) 19ನೇ ಶತಮಾನದಲ್ಲಿದ್ದ ಗ್ಲಾಡ್​ಸ್ಟೋನ್ ಅವರ ಬಜೆಟ್ ಭಾಷಣ ಬಹಳ ಸುದೀರ್ಘವಾಗಿರುತ್ತಿದ್ದವು. ಅವರ ಭಾಷಣದ ಪ್ರತಿಗಳೇ ಸಾಕಷ್ಟು ಸಂಖ್ಯೆಯಲ್ಲಿದ್ದವು. ಇವುಗಳನ್ನು ಇರಿಸಿಕೊಳ್ಳಲು ಬ್ರೀಫ್​ಕೇಸ್ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡಿಸುವ ಸಚಿವರು ತಮ್ಮ ಭಾಷಣದ ಪ್ರತಿಗಳನ್ನು ಬ್ರೀಫ್​ಕೇಸ್​ನಲ್ಲಿಟ್ಟುಕೊಂಡು ಬರುವ ಸಂಪ್ರದಾಯ ಶುರುವಾಯಿತು.
Loading...

7) ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು 1947ರ ಮೊದಲ ಬಜೆಟ್​ನಲ್ಲಿ ಲೆದರ್ ಸೂಟ್​ಕೇಸ್ ಅನ್ನು ಹೊತ್ತು ಬಂದಿದ್ದರು.

ಇಂದಿರಾ ಗಾಂಧಿ ನಂತರ ಭಾರತದ ಮೊದಲ ಮಹಿಳಾ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಎನ್​ಡಿಎ-2 ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಲಿದ್ದಾರೆ. ಆರ್ಥಿಕ ಹಿನ್ನಡೆ, ನಿರುದ್ಯೋಗ ಸಮಸ್ಯೆಗಳಿಂದ ನಲುಗಿರುವ ಭಾರತದ ಆರ್ಥಿಕತೆಗೆ ಪುಷ್ಟಿ ಕೊಡುವಂತಹ ಘೋಷಣೆಗಳನ್ನು ಈ ಬಜೆಟ್​ನಲ್ಲಿ ನಿರೀಕ್ಷಿಸಬಹುದು.
First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...