ತಪ್ಪಾಗಿ ಬಿಜೆಪಿಗೆ ವೋಟ್​​ ಮಾಡಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ಬಿಎಸ್​​ಪಿ ಬೆಂಬಲಿಗ; ವಿಡಿಯೋ ವೈರಲ್​​

ತನ್ನ ತಪ್ಪಿನಿಂದ ಸಿಟ್ಟಿಗೆದ್ದ ಕೂಡಲೇ ಮನೆಗೆ ಬಂದಾತ ಚಾಕುವಿನಿಂದ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಬಳಿಕ ಬೆರಳು ಕತ್ತರಿಸಿಕೊಂಡಿದ್ದ ವಿಡಿಯೋ ಪವನ್ ಟ್ವಿಟ್ಟರ್​​ನಲ್ಲಿ ಪೋಸ್ಟ್​​ ಮಾಡಿದ್ದಾನೆ.

Ganesh Nachikethu | news18
Updated:April 19, 2019, 10:54 AM IST
ತಪ್ಪಾಗಿ ಬಿಜೆಪಿಗೆ ವೋಟ್​​ ಮಾಡಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ಬಿಎಸ್​​ಪಿ ಬೆಂಬಲಿಗ; ವಿಡಿಯೋ ವೈರಲ್​​
ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ.
Ganesh Nachikethu | news18
Updated: April 19, 2019, 10:54 AM IST
ನವದೆಹಲಿ(ಏ.19): ಕಣ್ತಪ್ಪಿ ಬಿಜೆಪಿಗೆ ಮತಹಾಕಿದ್ದ ಬಿಎಸ್​​​ಪಿ ಬೆಂಬಲಿಗನೋರ್ವ ಕೋಪದಲ್ಲಿ ತನ್ನ ಬೆರಳನ್ನೇ ಕತ್ತರಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬುಲಂದ್ ಶಹರ್ ಮೂಲದ ದಲಿತ ಯುವಕನೋರ್ವ ಇಲ್ಲಿನ ಶಿಕಾರ್​​ಪುರ್ ಮತಗಟ್ಟೆ ಕೇಂದ್ರದಲ್ಲಿ ಬಿಎಸ್​​ಪಿಗೆ ಮತ ಚಲಾಯಿಸಲು ಹೋಗಿ ಕಣ್ತಪ್ಪಿ ಬಿಜೆಪಿಗೆ ವೋಟ್​​ ಮಾಡಿದ್ದಾನೆ. ಇದರಿಂದ ಕೋಪಗೊಂಡ ಈತ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಬುಲಂದ್ ಶಹರ್​​ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಭೋಲಾ ಸಿಂಗ್ ಮತ್ತು ಎಸ್​​ಪಿ-ಬಿಎಸ್​​​ಪಿ-ಆರ್​ಎಲ್​​ಡಿ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ ವರ್ಮಾ ಕಣದಲ್ಲಿದ್ದಾರೆ. ಈ ಇಬ್ಬರ ನಡುವೇ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಈ ಸಲ ಬಿಎಸ್​​ಪಿಯನ್ನು ಗೆಲ್ಲಿಸಲೇಬೇಕೆಂದು ಹೊರಟ 25 ವರ್ಷದ ಯುವಕ  ಪವನ್ ಕುಮಾರ್ ಮತದಾನ ಹಕ್ಕು ಚಲಾಯಿಸಲು ಹೋಗಿದ್ದಾನೆ. ವರ್ಮಾ ಪರವಾಗಿ ಮತ ಹಾಕಲು ತೆರಳಿದ ಪವನ್​​ ತಪ್ಪಾಗಿ ಬಿಜೆಪಿಗೆ ಮತ ಚಲಾಯಿಸಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ‘ಚೌಕಿದಾರ್​​ ಚೋರ್​​​ ಹೈ’ ಜಾಹೀರಾತಿಗೆ ಆಯೋಗ ನಿರ್ಬಂಧ; ಕಾಂಗ್ರೆಸ್​​​ಗೆ​ ಭಾರೀ ಹಿನ್ನಡೆ!

ತನ್ನ ತಪ್ಪಿನಿಂದ ಸಿಟ್ಟಿಗೆದ್ದ ಕೂಡಲೇ ಮನೆಗೆ ಬಂದಾತ ಚಾಕುವಿನಿಂದ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಬಳಿಕ ಬೆರಳು ಕತ್ತರಿಸಿಕೊಂಡಿದ್ದ ವಿಡಿಯೋ ಪವನ್ ಟ್ವಿಟ್ಟರ್​​ನಲ್ಲಿ ಪೋಸ್ಟ್​​ ಮಾಡಿದ್ದಾನೆ. ಯಾತಕ್ಕಾಗಿ ಬೆರಳನ್ನು ಕತ್ತರಿಸಿಕೊಂಡ ಎಂಬುದನ್ನು ಅಲ್ಲಿಯೇ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾನೆ. ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕೈ ಬೆರಳನ್ನು ಕತ್ತರಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.ದೇಶಾದ್ಯಂತ ನಡೆಯಬೇಕಿದ್ದ ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ನಿನ್ನೆ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಕೆಲ ಹಿಂಸಾಚಾರಗಳನ್ನ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಈ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
-------------
First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...