• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Disqualification: ರಾಹುಲ್ ಗಾಂಧಿ ಬೆನ್ನಲ್ಲೇ ಮತ್ತೊಬ್ಬ ಸಂಸದ ಅನರ್ಹ! ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಯಾದ ಹಿನ್ನೆಲೆ ಸದಸ್ಯತ್ವ ರದ್ದು

Disqualification: ರಾಹುಲ್ ಗಾಂಧಿ ಬೆನ್ನಲ್ಲೇ ಮತ್ತೊಬ್ಬ ಸಂಸದ ಅನರ್ಹ! ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಯಾದ ಹಿನ್ನೆಲೆ ಸದಸ್ಯತ್ವ ರದ್ದು

ಅಫ್ಜಲ್ ಅನ್ಸಾರಿ

ಅಫ್ಜಲ್ ಅನ್ಸಾರಿ

ಬಿಎಸ್​ಪಿ ಸಂಸದ ಅನ್ಸಾರಿಗೆ ಶನಿವಾರ ಸಂಸದ/ಶಾಸಕರ ನ್ಯಾಯಾಲಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೋಮವಾರ ಬಿಎಸ್​ಪಿ ಸಂಸದ ಲೋಕಸಭಾ ಸದಸ್ಯತ್ವವನ್ನ ಕಳೆದುಕೊಂಡಿದ್ದಾರೆ

  • Share this:

ನವದೆಹಲಿ: ಮೋದಿ ಉಪನಾಮ (Modi Surname) ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ (Jail Sentence) ಗುರಿಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಸಂಸತ್​ ಸದಸ್ಯತ್ವ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡಿದ್ದರು. ಇದೀಗ ಉತ್ತರ ಪ್ರದೇಶದ ಬಿಎಸ್‌ಪಿ ಸಂಸದ (BSP MP) ಅಫ್ಜಲ್ ಅನ್ಸಾರಿ (Afzal Ansari) ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ (Disqualified). ಹಿಂದೂ ಮುಖಂಡ ಹಾಗೂ ಬಿಜೆಪಿ ಶಾಸಕನ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಅಫ್ಜಲ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.


ಅನ್ಸಾರಿ ಸಹೋದರರಿಗೆ ಜೈಲು ಶಿಕ್ಷೆ


ಘಾಜೀಪುರದ ಸಂಸದ ಅನ್ಸಾರಿಗೆ ಶನಿವಾರ ಸಂಸದ/ಶಾಸಕರ ನ್ಯಾಯಾಲಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೋಮವಾರ ಬಿಎಸ್​ಪಿ ಸಂಸದ ಲೋಕಸಭಾ ಸದಸ್ಯತ್ವವನ್ನ ಕಳೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇದೇ ಪ್ರಕರಣದ ಪ್ರಮುಖ ಆರೋಪಿ ಅಫ್ಜಲ್ ಅನ್ಸಾರಿ ಸಹೋದರ ಗ್ಯಾಂಗ್​ಸ್ಟರ್​ ಮುಖ್ತಾರ್ ಅನ್ಸಾರಿಗೂ ಕೂಡ 10 ವರ್ಷಗಳ ಜೈಲು ಶಿಕ್ಷೆಯಾಗಿದೆ.


ಅಪರಾಧ ಪ್ರಕರಣದ ಹಿನ್ನಲೆ


ನವವೆಂಬರ್​ 29, 2005ರಲ್ಲಿ ಉತ್ತರ ಪ್ರದೇಶದ ಘಾಜೀಪುರ್​ ಶಾಸಕ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್‌ ಹತ್ಯೆ ಹಾಗೂ 1997ರಲ್ಲಿ ವಾರಣಾಸಿ ಮೂಲದ ವ್ಯಾಪಾರಿ ನಂದಕಿಶೋರ್​ ಎಂಬುವವರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿ ಮುಖ್ತಾರ ಅನ್ಸಾರಿ ಮತ್ತು ಸಂಸದ ಅಫ್ಜಲ್ ಅನ್ಸಾರಿ ಮೇಲಿತ್ತು. ಇದೀಗ ಇವರಿಬ್ಬರ ಮೇಲಿನ ಆರೋಪ ಪ್ರಕರಣ ಸಾಬೀತಾದ ಹಿನ್ನಲೆ ಕೋರ್ಟ್​ ಮುಖ್ತಾರ್​ಗೆ 10 ವರ್ಷ, ಅಫ್ಜಲ್​ಗೆ 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಜೊತೆಗೆ ಇಬ್ಬರಿಗೂ ಕ್ರಮವಾಗಿ 5 ಲಕ್ಷ ಮತ್ತು ಒಂದು ಲಕ್ಷ ದಂಡ ವಿಧಿಸಿದೆ.


ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಹಿರಿಯ ರಾಜಕಾರಣಿ ಶರದ್ ಪವಾರ್!


ಲೋಕಸಭೆಯ ಕಾರ್ಯದರ್ಶಿಯಿಂದ ಅನರ್ಹತೆ ಸೂಚನೆ


ಅನ್ಸಾರಿ ಅವರ ಅಪರಾಧದ ಪ್ರಕರಣ ರುಜುವಾತಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪರಿಣಾಮ ಉತ್ತರ ಪ್ರದೇಶದ ಘಾಜಿಪುರ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಅಫ್ಜಲ್ ಅನ್ಸಾರಿ ಅವರು ಕನ್ವಿಕ್ಷನ್ 102 ರ ನಿಬಂಧನೆಗಳ ಪ್ರಕಾರ ಏಪ್ರಿಲ್ 29 2023 ರಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರ ಜೊತೆಗೆ ಭಾರತದ ಸಂವಿಧಾನದ 1)(ಇ) ಪಕ್ರಾರ ಕ್ರಮ ಕೈಕೊಳ್ಳಲಾಗಿದೆ " ಎಂದು ಲೋಕಸಭೆಯ ಕಾರ್ಯದರ್ಶಿಯ ಅಧಿಸೂಚನೆ ಹೊರಡಿಸಿದ್ದಾರೆ.




2 ವರ್ಷ ಶಿಕ್ಷೆಗೆ ಗುರಿಯಾದರೆ ಸದಸ್ಯತ್ವ ರದ್ದು


ಯಾವುದೇ ಜನಪ್ರತಿನಿದಿ ಕ್ರಿಮಿನಲ್‌ ಪ್ರಕರಣಗಳಲ್ಲಿ 2 ವರ್ಷ ಅಥವಾ ಅದಕ್ಕಿಂದ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣವೇ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಅನ್ಸಾರಿ ಎಪ್ರಿಲ್ 29 ರಿಂದ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.


ಕಾನೂನು ಎಲ್ಲರಿಗೂ ಒಂದೆ


ಅಫ್ಜಲ್ ಅನ್ಸಾರಿ ಅವರನ್ನು ಲೋಕಸಭಾ ಸದಸ್ಯರಾಗಿ ಅನರ್ಹಗೊಳಿಸಿದ ಕುರಿತು ಬಿಜೆಪಿ ನಾಯಕ ತರುಣ್ ಚುಗ್ ಪ್ರತಿಕ್ರಿಯಿಸಿದ್ದು, " ರಾಹುಲ್ ಗಾಂಧಿ ಆಗಿರಲಿ ಅಥವಾ ಅಫ್ಜಲ್ ಆಗಿರಲಿ, ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ವಕ್ತಾರ ಅನ್ಶುಲ್ ಅವಸ್ತಿ ಬಿಜೆಪಿ, ಪ್ರತಿಪಕ್ಷಗಳ ಪ್ರಬಲ ನಾಯಕರನ್ನು ಸಂಚು ಮಾಡಿ ಜೈಲು ಸೇರುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: G Kishan Reddy: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅನಾರೋಗ್ಯ, ಏಮ್ಸ್‌ಗೆ ದಾಖಲು!


5 ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ


ಮುಖ್ತಾರ್‌ ಅನ್ಸಾರಿ ಹಾಗೂ ಆತನ ಸೋದರ ಅಫ್ಜಲ್‌ ಅನ್ಸಾರಿ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಆಗಿ ಗುರುತಿಸಿಕೊಂಡಿದ್ದು, ನಂತರ ರಾಜಕೀಯ ಪ್ರವೇಶಿಸಿದ್ದರು. ಮುಖ್ತಾರ್ 1996ರಿಂದ 2005ವರೆಗೆ ವಿವಿಧ ಕ್ಷೇತ್ರಗಳಲ್ಲಿ ಗೆದ್ದು 5 ಬಾರಿ ಶಾಸಕರಾಗಿದ್ದ. ಅಫ್ಜಲ್ ಅನ್ಸಾರಿ ಎರಡು ಬಾರಿ ಸಂಸದರಾಗಿದ್ದರು. ಇವರು ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಅಮೀದ್ ಅನ್ಸಾರಿ ಅವರ ಸಂಬಂಧಿಕರು ಎಂದು ತಿಳಿದುಬಂದಿದೆ.

top videos
    First published: