UP Elections: BSP ಪ್ರಸ್ತುತವಾಗಿದೆ ಎಂಬ ಸತ್ಯ ಒಪ್ಪಿಕೊಂಡಿರುವುದು ಅಮಿತ್ ಶಾ ದೊಡ್ಡತನ: ಮಾಯಾವತಿ

ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮುಸ್ಲಿಂ ಮತದಾರರ ಬೆಂಬಲವನ್ನು ಪಡೆಯುತ್ತಾರೆ ಎಂದು ಅಮಿತ್ ಶಾ ಹೇಳಿರುವ ಬಗ್ಗೆ ಕೇಳಿದಾಗ, ಮಾಯಾವತಿ ಅವರು 'ವಾಸ್ತವ ಸಂಪೂರ್ಣವಾಗಿ ವಿಭಿನ್ನವಾಗಿದೆ' ಎಂದು ಹೇಳಿದ್ದಾರೆ.

ಮಯಾವತಿ

ಮಯಾವತಿ

  • Share this:
ಲಕ್ನೋ, ಫೆ. 23: ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು ಚುನಾವಣಾ ಕಣದ ಬಿಸಿ‌ ಈಗ ಹೆಚ್ಚಾಗಿದೆ. ಇತರೆ ರಾಜ್ಯಗಳ ಚುನಾವಣಾ ಕೆಲಸ ಕೂಡ ಮುಗಿದಿದ್ದು ಘಟಾನುಘಟಿ ನಾಯಕರು ಈಗ ಉತ್ತರ ಪ್ರದೇಶದ ಕಡೆ ಗಮನ ಹರಿಸಿದ್ದಾರೆ. ವಿಶೇಷವಾಗಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ (Bahujana Party Leader Mayavathi) ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಬಹುಜನ ಸಮಾಜ ಪಕ್ಷ ಉತ್ತರ ಪ್ರದೇಶದಲ್ಲಿ ಇದೆ ಎಂದು ಒಪ್ಪಿಕೊಂಡಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ (Amith Sha) ಅವರಿಗೆ ಧನ್ಯವಾದಗಳು ಎಂದು ಟಾಂಗ್ ನೀಡಿದ್ದಾರೆ.

ಮತದಾನದ ಬಳಿಕ ಮಾಯಾವತಿ ಪ್ರತಿಕ್ರಿಯೆ
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಮಿತ್ ಶಾ, "ಬಿಎಸ್‌ಪಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಬಿಎಸ್ ಪಿ ಮತಗಳನ್ನು ಪಡೆಯುತ್ತದೆ ಎಂದು ನಾನು ನಂಬುತ್ತೇನೆ. ಅವುಗಳ ಪೈಕಿ ಸೀಟುಗಳಾಗಿ ಎಷ್ಟು ಪರಿವರ್ತನೆಯಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಅದು ಮತಗಳನ್ನು ಪಡೆಯುತ್ತದೆ" ಎಂದು ಹೇಳಿದ್ದರು. ಈ ಬಗ್ಗೆ ಬುಧವಾರ ಲಕ್ನೋದಲ್ಲಿ ಮತಚಲಾಯಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಯಾವತಿ ಅವರು, 'ಬಿಎಸ್ ಪಿ ಪ್ರಸ್ತುತೆ ಉಳಿಸಿಕೊಂಡಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ' ಎಂದು ಹೇಳಿದ್ದಾರೆ.

ವಾಸ್ತವ ಸಂಪೂರ್ಣವಾಗಿ ವಿಭಿನ್ನವಾಗಿದೆ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮುಸ್ಲಿಂ ಮತದಾರರ ಬೆಂಬಲವನ್ನು ಪಡೆಯುತ್ತಾರೆ ಎಂದು ಅಮಿತ್ ಶಾ ಹೇಳಿರುವ ಬಗ್ಗೆ ಕೇಳಿದಾಗ, ಮಾಯಾವತಿ ಅವರು ವಾಸ್ತವ ಸಂಪೂರ್ಣವಾಗಿ ವಿಭಿನ್ನವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು, ಮುಸ್ಲಿಮರು, ಸಮಾಜವಾದಿ ಪಕ್ಷದ ಕಾರ್ಯಶೈಲಿಯಿಂದ ಅಸಮಾಧಾನಗೊಂಡಿದ್ದಾರೆ. ಅವರು ಕಳೆದ ಐದು ವರ್ಷಗಳಿಂದ ಅದರೊಂದಿಗೆ ಇದ್ದರೂ ಟಿಕೆಟ್ ಹಂಚಿಕೆ ಸಮಯ ಬಂದಾಗ ಇತರರಿಗೆ ಅವಕಾಶ ಕೊಡುವುದಕ್ಕೋಸ್ಕರ ಅವರನ್ನು ಬದಿಗೊತ್ತಲಾಗಿದೆ ಎಂಬುದು ಅವರಿಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : ಮಣಿಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಅಬ್ಬರ, ಗದ್ದಲಗಳೇ ಇಲ್ಲ!

ನಕಲಿ ಅಂಬೇಡ್ಕರ್ ವಾದಿ ಅಖಿಲೇಶ್
ಮಾಯಾವತಿಯ ಕೋರ್ ಓಟ್ ಬ್ಯಾಂಕ್ ಎಂದೇ ಹೇಳಲಾಗುವ ಜಾಟವ್ ಮತಗಳನ್ನು ಸಮಾಜವಾದಿ ಪಕ್ಷ ಪಡೆಯುತ್ತದೆ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ,  ಈ ಕಲ್ಪನೆಯನ್ನು ದೂರದ ಕನಸು. ಅವರು ಮೊದಲು ತಮ್ಮ ಜಾತಿಯ ಮತಗಳನ್ನು ಪಡೆಯುವಂತೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ನಕಲಿ ಅಂಬೇಡ್ಕರ್‌ವಾದಿ ಎಂದು ಕರೆದ ಮಾಯಾವತಿ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ದಲಿತ ಐಕಾನ್‌ಗಳ ಹೆಸರಿನ ಜಿಲ್ಲೆಗಳು ಮತ್ತು ಯೋಜನೆಗಳ ಹೆಸರನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: Money Laundering Case: ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ಬಂಧನ

ಸಮಾಜವಾದಿ ಪಕ್ಷ ಕನಸು ಭಗ್ನವಾಗಲಿದೆ
ಸಮಾಜವಾದಿ ಪಕ್ಷ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದು, ಈ ಕನಸು ಭಗ್ನವಾಗಲಿದೆ, ಎಸ್‌ಪಿ ಅಧಿಕಾರದಲ್ಲಿದ್ದಾಗಲೆಲ್ಲಾ ದಲಿತರು, ಹಿಂದುಳಿದವರು, ಬಡವರು ಮತ್ತು ಬ್ರಾಹ್ಮಣರು ಹೆಚ್ಚು ಕಿರುಕುಳಕ್ಕೊಳಗಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಎಸ್‌ಪಿ ಅಧಿಕಾರದಲ್ಲಿದ್ದಾಗ ಗೂಂಡಾ ಮತ್ತು ಮಾಫಿಯಾ ಶಕ್ತಿಗಳ ಗುಂಡಿನ ದಾಳಿ ಮತ್ತು ಕಿರುಕುಳ ಹೇಗೆ ಉತ್ತುಂಗದಲ್ಲಿತ್ತು ಎಂಬುದನ್ನು ಇಲ್ಲಿನ ಜನರು ನೋಡಿದ್ದಾರೆ. ಎಸ್‌ಪಿ ಸರ್ಕಾರದ ಅಡಿಯಲ್ಲಿ ರಾಜ್ಯವು ಹಲವು ಗಲಭೆಗಳಿಗೆ ಸಾಕ್ಷಿಯಾಗಿದೆ. ಉದಾಹರಣೆಗೆ 2014 ರಲ್ಲಿ ಮುಜಾಫರ್‌ನಗರದಲ್ಲಿ ಗಲಭೆ ನಡೆದಿದೆ ಎಂದು ಹೇಳಿದರು.

ಗೆಲುವಿನ‌ ವಿಶ್ವಾಸ ವ್ಯಕ್ತಪಡಿಸಿದ ಮಾಯಾವತಿ
ಬಹುಜನ ಸಮಾಜ ಪಕ್ಷ 2007ರಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಪುನರಾವರ್ತಿಸಲಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ 10ರಂದು ಫಲಿತಾಂಶಗಳು ಪ್ರಕಟವಾದಾಗ 2007ರ ರೀತಿಯಲ್ಲೇ ಸಂಪೂರ್ಣ ಬಹುಮತದೊಂದಿಗೆ ಬಿಎಸ್ಪಿ ತನ್ನ ಸರ್ಕಾರವನ್ನು ರಚಿಸುತ್ತದೆ ಎಂದು ತಿಳಿಸಿದ್ದಾರೆ‌. ಫೆಬ್ರವರಿ 27ರಂದು ಉತ್ತರ ಪ್ರದೇಶದಲ್ಲಿ 5ನೇ ಹಂತದ ಚುನಾವಣೆ ನಡೆಯಲಿದೆ.
Published by:Seema R
First published: