ಬಿಎಸ್​ಪಿ ಜೊತೆ ಜನಾಸೇನಾ ಮೈತ್ರಿ; ಮಾಯಾವತಿಯನ್ನು ಪ್ರಧಾನಿಯಾಗಿ ನೋಡುವ ಆಸೆ ಎಂದ ಪವನ್​ ಕಲ್ಯಾಣ್​

ಮಾಯಾವತಿ   ಅವರನ್ನು ದೇಶದ ಪ್ರಧಾನಿಯಾಗಿ ನೋಡಬೇಕು ಎಂದು ಬಯಸಿದ್ದೇವೆ. ಇದಕ್ಕಾಗಿ ಸಣ್ಣ ಪ್ರಯತ್ನ ಮಾಡಿದ್ದೇನೆ

Seema.R | news18
Updated:March 15, 2019, 3:57 PM IST
ಬಿಎಸ್​ಪಿ ಜೊತೆ ಜನಾಸೇನಾ ಮೈತ್ರಿ; ಮಾಯಾವತಿಯನ್ನು ಪ್ರಧಾನಿಯಾಗಿ ನೋಡುವ ಆಸೆ ಎಂದ ಪವನ್​ ಕಲ್ಯಾಣ್​
ಪವನ್​ ಕಲ್ಯಾಣ್​​- ಮಯಾವತಿ
Seema.R | news18
Updated: March 15, 2019, 3:57 PM IST
ಲಕ್ನೋ (ಮಾ.15): ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ನಟ ಪವನ್​ ಕಲ್ಯಾಣ್​ ಅವರ ಜನಾಸೇನಾ ಪಕ್ಷ ಮಾಯಾವತಿ ಅವರ ಬಿಎಸ್​ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಈ ಕುರಿತು ಇಂದು ಅಧಿಕೃತವಾಗಿ ಪ್ರಕಟಿಸಿರುವ ಪವನ್​ ಕಲ್ಯಾಣ್​, ನಮ್ಮ ಪಕ್ಷ ಬಿಎಸ್​ಪಿ ಜೊತೆಗೆ ಕೈ ಜೋಡಿಸಿದೆ. ನಾವು ಮಾಯಾವತಿ   ಅವರನ್ನು ದೇಶದ ಪ್ರಧಾನಿಯಾಗಿ ನೋಡಬೇಕು ಎಂದು ಬಯಸಿದ್ದೇವೆ. ಇದಕ್ಕಾಗಿ ಸಣ್ಣ ಪ್ರಯತ್ನ ಮಾಡಿದ್ದೇನೆ ಎಂದರು.

ಇದಕ್ಕೆ ಪ್ರತಿಯಾಗಿ ಮಾತನಾಡಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಕೂಡ, ಆಂಧ್ರದ ಮುಖ್ಯಮಂತ್ರಿಯಾಗಿ ನಾವು ಪವನ್​ ಕಲ್ಯಾಣ್​ ಅವರನ್ನು ನೋಡಲು ಬಯಸುತ್ತೇವೆ . ಎಂದು ಅಭಿಲಾಷೆ ವ್ಯಕ್ತಪಡಿಸಿದರು.

ಇದನ್ನು ಓದಿ: ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದ ಡಿಎಂಕೆ; ಕಾಂಗ್ರೆಸ್​ ಎಲ್ಲೆಲ್ಲಿ ಸ್ಪರ್ಧಿಸಲಿದೆ

ಇನ್ನು ಏಕಕಾಲದಲ್ಲಿಯೇ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಜನಾಸೇನಾ ಪಕ್ಷ,  ನಿನ್ನೆಯಷ್ಟೇ ಆಂಧ್ರಪ್ರದೇಶದಲ್ಲಿ ತಮ್ಮ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 25 ಲೋಕಸಭಾ ಕ್ಷೇತ್ರಗಳಲ್ಲಿ 4 ಸ್ಥಾನ ಹಾಗೂ 175 ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ..

ಈ ಹಿಂದೆ ಅನಂತಪುರಂನಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ ಅವರು, ಈ ಕ್ಷೇತ್ರದ ಬದಲಿಗೆ  ವಿಶಾಖಪಟ್ಟಣದ ಗಜುವಾಕ್​ ವಿಧಾನಸಭಾ ಕ್ಷೇತ್ರದಿಂದ​ ಸ್ಪರ್ಧಿಸುವುದಾಗಿ ತಿಳಿಸಿದರು. ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದು, ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದ ಹಿನ್ನೆಲೆ ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.
First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ