ಬಿಜೆಪಿ ಅಧಿಕಾರದ ದುರಾಸೆ ಹೊಂದಿರುವ ಪಕ್ಷ: ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್​ಪಿ

ನೆಟ್​ವರ್ಕ್​ 18 ಪ್ರಧಾನ ಸಂಪಾದಕರಾದ ರಾಹುಲ್ ಜೋಶಿ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ ಸಂದರ್ಶನದಲ್ಲಿ ಮಾಯಾವತಿಯ ಈ ಹೇಳಿಕೆ ಕುರಿತು ಮೋದಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಮೋದಿ "ಬಿಎಸ್​ಪಿ ಮುಳುಗುವ ಹಡಗ. ಇದೇ ಕಾರಣಕ್ಕೆ ತಾವು ಬಚಾವಾಗಲು ಮುಸ್ಲೀಮರತ್ತ ಕೈಚಾಚುತ್ತಿದೆ" ಎಂದು ಲೇವಡಿ ಮಾಡಿದ್ದರು. 

news18
Updated:April 9, 2019, 4:05 PM IST
ಬಿಜೆಪಿ ಅಧಿಕಾರದ ದುರಾಸೆ ಹೊಂದಿರುವ ಪಕ್ಷ: ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್​ಪಿ
ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ.
news18
Updated: April 9, 2019, 4:05 PM IST
ಲಕ್ನೋ(ಏ.09): ಬಿಎಸ್​ಪಿ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದ ಬೆನ್ನಿಗೆ ಬಿಜೆಪಿ ಅಧಿಕಾರದ ದುರಾಸೆ ಹೊಂದಿರುವ ಪಕ್ಷ ಎಂದು ಬಹುಜನ ಸಮಾಜವಾದಿ ಪಕ್ಷ ಗಂಭೀರ ಆರೋಪ ಮಾಡಿದೆ.

ಭಾನುವಾರ ಉತ್ತರಪ್ರದೇಶದ ಸಹರಾನ್​ಪುರ್ ಡಿಯೋಬಂದ್​ನಲ್ಲಿ ಆಯೋಜಿಸಲಾಗಿದ್ದ ಎಸ್​ಪಿ- ಬಿಎಸ್​ಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮುಸ್ಲೀಮರು ಬಿಜೆಪಿಗೆ ಮತ ಹಾಕದಂತೆ ಮನವಿ ಮಾಡಿದ್ದರು.

ಇದನ್ನೂ ಓದಿ : ಮಾಯಾವತಿ ಮುಳುಗುತ್ತಿರುವ ಹಡಗು; ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ: ಪ್ರಧಾನಿ ಮೋದಿ

ನೆಟ್​ವರ್ಕ್​ 18 ಪ್ರಧಾನ ಸಂಪಾದಕರಾದ ರಾಹುಲ್ ಜೋಶಿ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ ಸಂದರ್ಶನದಲ್ಲಿ ಮಾಯಾವತಿಯ ಈ ಹೇಳಿಕೆ ಕುರಿತು ಮೋದಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಮೋದಿ "ಬಿಎಸ್​ಪಿ ಮುಳುಗುವ ಹಡಗ. ಇದೇ ಕಾರಣಕ್ಕೆ ತಾವು ಬಚಾವಾಗಲು ಮುಸ್ಲೀಮರತ್ತ ಕೈಚಾಚುತ್ತಿದೆ" ಎಂದು ಲೇವಡಿ ಮಾಡಿದ್ದರು.

ಆದರೆ, ಪ್ರಧಾನಿ ಮೋದಿಯವರ ಈ ಲೇವಡಿಯ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿರುವ ಬಿಎಸ್​ಪಿ ಪಕ್ಷದ ವಕ್ತಾರ ಸುದೀಂದ್ರ ಬದೋರಿಯಾ, “ಉತ್ತರಪ್ರದೇಶದ ಉಪ ಚುನಾವಣೆಯಲ್ಲಿ ಎದುರಾದ ಸೋಲಿನಿಂದಾಗಿ ಈಗಾಗಲೆ ಬಿಜೆಪಿ ಕಂಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಬಿಎಸ್​ಪಿ ಪಕ್ಷದ ಮುಖ್ಯಸ್ಥೆಯನ್ನು ಪ್ರಶ್ನಿಸುವ ಮುನ್ನ ಒಮ್ಮೆ ತಮ್ಮ ಬೆನ್ನನ್ನು ತಾವೆ ನೋಡಿಕೊಳ್ಳಲಿ. ಈಗ ನಮ್ಮನ್ನು ಟೀಕೆ ಮಾಡುತ್ತಿರುವ ಇದೇ ಬಿಜೆಪಿ ಅಲ್ಲವೆ ಅಧಿಕಾರದ ದುರಾಸೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಸ್ವತಂತ್ರ್ಯ ರಾಷ್ಟ್ರದ ಬಗ್ಗೆ ಮಾತನಾಡುವ ಪಿಡಿಪಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡದ್ದು" ಎಂದು ಬಿಜೆಪಿಯನ್ನು ಕಾಲೆಳೆದಿದ್ದಾರೆ.

ಇದನ್ನೂ ಓದಿ : ಅಮ್ಮ, ಮಗ ತಪ್ಪು ಮಾಡಿದ್ದರಿಂದಲೇ ಜಾಮೀನು ಕೇಳುತ್ತಿದ್ದಾರೆ: ಸೋನಿಯಾ, ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Loading...

(ನೆಟ್​ವರ್ಕ್​ 18 ಪ್ರಧಾನ ಸಂಪಾದಕ ರಾಹುಲ್ ಜೋಶಿಯವರ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಮುಳುಗುತ್ತಿರುವ ಹಡಗು, ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ. ಮಾಯಾವತಿಯವರ ಸದ್ಯದ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಸೋಲಿನ ಭೀತಿಯಲ್ಲಿರುವ ಇವರು ಗೆಲ್ಲಲು ಹವಣಿಸುತ್ತಿದ್ಧಾರೆ. ನನಗೆ ಈ ಜ್ಯಾತ್ಯಾತೀತ ಎಂದು ಹಣಪಟ್ಟಿ ಕಟ್ಟಿಕೊಂಡಿರುವ ಪಕ್ಷಗಳ ಭವಿಷ್ಯದ ಬಗ್ಗೆ ಚಿಂತೆ, ಆಂತಕ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ ಈ ಹೇಳಿಕೆ ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದ್ದು, ಚುನಾವಣಾ ಆಯೋಗ ಈ ಕುರಿತು ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದ್ದರು.)
First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626