ನಷ್ಟದಲ್ಲಿ BSNL: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 35 ಸಾವಿರ ಉದ್ಯೋಗಿಗಳು?

ಈ ವರದಿಯಲ್ಲಿ ಸುಮಾರು 35 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡಲು ಸಲಹೆ ನೀಡಲಾಗಿದೆ. ಹಾಗೆಯೇ ಸಂಸ್ಥೆಯಿಂದ ತೆಗೆದುಹಾಕುವ ಉದ್ಯೋಗಿಗಳಿಗೆ ವಿಆರ್​ಎಸ್​ ಸೌಲಭ್ಯವನ್ನು ಒದಗಿಸಿಕೊಡುವಂತೆ ಶಿಫಾರಸ್ಸು ಮಾಡಲಾಗಿದೆ.

zahir | news18
Updated:February 12, 2019, 9:48 PM IST
ನಷ್ಟದಲ್ಲಿ BSNL: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 35 ಸಾವಿರ ಉದ್ಯೋಗಿಗಳು?
BSNL
zahir | news18
Updated: February 12, 2019, 9:48 PM IST
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ ಭಾರತ್​ ಸಂಚಾರ್ ನಿಗಮ್(BSNL)ನ 35 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಖಾಸಗಿ ಟೆಲಿಕಾಂ ಕಂಪೆನಿಗಳ ತೀವ್ರ ಪೈಪೋಟಿಯಿಂದ ಬಿಎಸ್​ಎನ್​ಎಲ್​ ನಷ್ಟದಲ್ಲಿದ್ದು, ಈ ಹಿನ್ನಲೆಯಲ್ಲಿ ಖರ್ಚು ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಲಾಭದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಹೀಗಾಗಿ ಉದ್ಯೋಗಿಗಳ ಕಡಿತದಿಂದ ಸಂಸ್ಥೆಯನ್ನು ಉಳಿಸುವುದು ಅನಿವಾರ್ಯ ಎನ್ನಲಾಗಿದೆ.

ಸದ್ಯ ದೇಶದಲ್ಲಿ ಸುಮಾರು ಒಟ್ಟು 1,74,000 ಬಿಎಸ್​ಎನ್​ಎಲ್​ ಉದ್ಯೋಗಿಗಳಿದ್ದು, ಅವರ ವೇತನ ಮತ್ತು ಕಂಪೆನಿಯ ಖರ್ಚು ವೆಚ್ಚವನ್ನು ಭರಿಸುವುದು ಸರ್ಕಾರಕ್ಕೆ ಹೊರೆಯಾಗುವ ಸಾಧ್ಯತೆಯಿದೆ. ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಬಿಎಸ್​ಎನ್​ಎಲ್ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಂತು ಕಂಪೆನಿಯನ್ನು ಹೇಗೆ ಲಾಭದತ್ತ ಕೊಂಡೊಯ್ಯಬಹುದು ಎಂಬುದರ ವರದಿ ಸಲ್ಲಿಸುವಂತೆ ಐಐಎಂ ಅಹ್ಮದಾಬಾದ್ ತಜ್ಞರಿಗೆ ತಿಳಿಸಲಾಗಿದೆ.

ಈ ವರದಿಯಲ್ಲಿ ಸುಮಾರು 35 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡಲು ಸಲಹೆ ನೀಡಲಾಗಿದೆ. ಹಾಗೆಯೇ ಸಂಸ್ಥೆಯಿಂದ ತೆಗೆದುಹಾಕುವ ಉದ್ಯೋಗಿಗಳಿಗೆ ವಿಆರ್​ಎಸ್​ ಸೌಲಭ್ಯವನ್ನು ಒದಗಿಸಿಕೊಡುವಂತೆ ಶಿಫಾರಸ್ಸು ಮಾಡಲಾಗಿದೆ. ಈ ರೀತಿಯಾಗಿ ಉದ್ಯೋಗಿಗಳನ್ನು ತೆಗೆದು ಹಾಕಿದರೆ ಸರ್ಕಾರ 13,000 ಕೋಟಿ ರೂ. ಪಾವತಿಸಬೇಕಾಗಬಹುದು.

ಐಐಎಂ ತಜ್ಞರ ವರದಿಯ ಅನುಸಾರವೇ ಈಗಾಗಲೇ ಬಿಎಸ್​ಎನ್​ಎಲ್ ಉದ್ಯೋಗಿಗಳ ಪ್ರವಾಸ ಭತ್ಯೆ, ವೈದ್ಯಕೀಯ ಭತ್ಯೆ ಕಡಿತಗೊಳಿಸಲಾಗಿದ್ದು, ಅದರೊಂದಿಗೆ ಎಲ್​ಟಿಸಿ, ವಿದ್ಯುತ್ ಹಾಗೂ ಆಡಳಿತಾತ್ಮಕ ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಸರ್ಕಾರಿ ಸೌಮ್ಯದ ದೂರ ಸಂಪರ್ಕ ಇಲಾಖೆ ಅಸ್ತಿತ್ವದಲ್ಲಿರಬೇಕಿದ್ದರೆ, ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದ್ದು, ಉದ್ಯೋಗಿಗಳಿಗೆ ನೀಡಲಾಗುವ ಕೆಲ ಸೌಲಭ್ಯಗಳ ಕಡಿತದಿಂದ ವರ್ಷಕ್ಕೆ 2500 ಕೋಟಿ ಉಳಿತಾಯ ಮಾಡಲು ಸಾಧ್ಯವಾಗಿದೆಎಂದು ಬಿಎಸ್​ಎನ್​ಎಲ್​ ನಿರ್ದೇಶಕ ಅನುಪಮ್ ಶ್ರೀವಾಸ್ತವ್​  ತಿಳಿಸಿದ್ದಾರೆ.

ದೇಶದಲ್ಲಿ ಟೆಲಿಕಾಂ ಸೇವೆ ನೀಡಲು ಬಿಎಸ್​ಎನ್​ಎಲ್​ ವಾರ್ಷಿಕವಾಗಿ 15 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಕಳೆದ ವರ್ಷದ ತ್ರೈಮಾಸಿಕ ಲೆಕ್ಕದಲ್ಲಿ ಸಂಸ್ಥೆಯು 1925.33 ಕೋಟಿ ನಷ್ಟ ಅನುಭವಿಸಿದೆ. ಹಾಗೆಯೇ ಸಂಸ್ಥೆಯ ಆದಾಯ ಶೇ.15 ರಷ್ಟು ಕುಂಠಿತವಾಗಿರುವ ಕಾರಣ ಉದ್ಯೋಗಿಗಳನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಮತ್ತೊಮ್ಮೆ ಗ್ರಾಹಕರಿಗೆ ಗಡುವು ನೀಡಿದ ಟ್ರಾಯ್​..!

 
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...