BSNL ನೇಮಕಾತಿ: 40 ಸಾವಿರ ವೇತನದ 198 ಹುದ್ದೆಗಳಿಗೆ ಅರ್ಜಿ ಆಹ್ವಾನ

'ಗೇಟ್‌' ಅರ್ಹತೆಯ ಆಧಾರದಲ್ಲಿ ಸಿವಿಲ್‌ ಮತ್ತು ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದೆ.

zahir | news18
Updated:February 11, 2019, 2:57 PM IST
BSNL ನೇಮಕಾತಿ: 40 ಸಾವಿರ ವೇತನದ 198 ಹುದ್ದೆಗಳಿಗೆ ಅರ್ಜಿ ಆಹ್ವಾನ
BSNL
zahir | news18
Updated: February 11, 2019, 2:57 PM IST
ಸರ್ಕಾರಿ ಸೌಮ್ಯದ ದೂರಸಂಪರ್ಕ ಇಲಾಖೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​(BSNL) ವಿಶೇಷ ನೇಮಕಾತಿ ಅಡಿಯಲ್ಲಿ ಕೆಲ ಹುದ್ದೆಗಳ ನೇಮಕ ಪ್ರಕಟಣೆ ಹೊರಡಿಸಿದೆ. ಇಲ್ಲಿ ಜೂನಿಯರ್ ಟೆಲಿಕಾಂ ಅಧಿಕಾರಿ(JTO) ಭರ್ತಿ ನಡೆಯಲಿದ್ದು, ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

2019ರ 'ಗೇಟ್‌' ಅರ್ಹತೆಯ ಆಧಾರದಲ್ಲಿ ಸಿವಿಲ್‌ ಮತ್ತು ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದ್ದು, ಒಟ್ಟು 198 ಹುದ್ದೆಗಳಿವೆ. ಇಲ್ಲಿ ಒಟ್ಟು ಹುದ್ದೆಗಳಲ್ಲಿ ರಾಜ್ಯಕ್ಕೆ 10 ಪೋಸ್ಟ್​ಗಳು ನೀಡಲಾಗುತ್ತಿದೆ. ಈ ಹುದ್ದೆಗಳಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್​ 12ರೊಳಗೆ ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ: 198

ವೇತನ : 16,400 ರಿಂದ 40,500 ರೂ.

ಅರ್ಹತೆ:
ಅರ್ಜಿದಾರನು ಸಿವಿಲ್‌ ಅಥವಾ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ ಬಿಇ/ಬಿಟೆಕ್‌ ಮಾಡಿರಬೇಕು. ಇದರೊಂದಿಗೆ ಈ ವರ್ಷ ಗೇಟ್‌ ಪರೀಕ್ಷೆಯನ್ನು ಬರೆಯಲು ಅರ್ಜಿ ಸಲ್ಲಿಸಿರಬೇಕು. ಅರ್ಜಿಯಲ್ಲಿ ಗೇಟ್‌ ರಿಜಿಸ್ಟೇಷನ್‌ ಐಡಿ (13ಡಿಜಿಟ್‌) ಯನ್ನು ದಾಖಲಿಸಬೇಕಾಗುತ್ತದೆ.

ವಯೋಮಿತಿ:
Loading...

ಅರ್ಜಿದಾರನ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ 30 ವರ್ಷ.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:
ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ- 1000 ರೂ.
ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ- 300 ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 12, 2019

ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಅಥವಾ ಈ ಸಹಾಯವಾಣಿ ನಂಬರ್​ಗೆ ಕರೆ ಮಾಡಿ ವಿಚಾರಿಸಬಹುದು: 011-23710284/23352491.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...