• Home
 • »
 • News
 • »
 • national-international
 • »
 • ಚೀನೀ ಉತ್ಪನ್ನಕ್ಕೆ ಸರ್ಕಾರದ ನಕಾರ ಹಿನ್ನೆಲೆ, ಬಿಎಸ್ಸೆನ್ನೆಲ್, ಎಂಟಿಎನ್ನೆಲ್ 4ಜಿ ಟೆಂಡರ್ ರದ್ದು

ಚೀನೀ ಉತ್ಪನ್ನಕ್ಕೆ ಸರ್ಕಾರದ ನಕಾರ ಹಿನ್ನೆಲೆ, ಬಿಎಸ್ಸೆನ್ನೆಲ್, ಎಂಟಿಎನ್ನೆಲ್ 4ಜಿ ಟೆಂಡರ್ ರದ್ದು

ಬಿಎಸ್​ಎನ್​ಎಲ್ ಕಚೇರಿ

ಬಿಎಸ್​ಎನ್​ಎಲ್ ಕಚೇರಿ

ಬಿಎಸ್ಸೆನ್ನೆಲ್ ಕರೆದ ಟೆಂಡರ್ ಮೌಲ್ಯ ಸುಮಾರು 7-8 ಸಾವಿರ ಕೋಟಿ ರೂಪಾಯಿಯದ್ದೆನ್ನಲಾಗಿದೆ. ದೇಶೀಯವಾಗಿ ತಂತ್ರಜ್ಞಾನ ಬೆಳೆಯಲು ಸಹಕಾರಿಯಾಗುವ ಅಂಶಗಳೊಂದಿಗೆ ಮತ್ತೆ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ ಎಂದು ಮೂಲಗಳು ಹೇಳುತ್ತಿವೆ.

 • News18
 • 3-MIN READ
 • Last Updated :
 • Share this:

  ನವದೆಹಲಿ(ಜುಲೈ 01): 4ಜಿ ನೆಟ್​ವರ್ಕ್ ಉನ್ನತೀಕರಣಕ್ಕೆ ಚೀನಾದ ಗೇರ್ ಉತ್ಪನ್ನವನ್ನ ಬಳಕೆ ಮಾಡಬಾರದು ಎಂದು ಕೇಂದ್ರ ದೂರಸಂಪರ್ಕ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಮತ್ತು ಎಂಟಿಎನ್​ಎಲ್ ಟೆಲಿಕಾಂ ಸಂಸ್ಥೆಗಳು ತಾವು ಕರೆದಿದ್ದ ಟೆಂಡರ್​ಗಳನ್ನ ರದ್ದು ಮಾಡಿವೆ. ಇನ್ನೆರಡು ವಾರಗಳಲ್ಲಿ ಹೊಸದಾಗಿ ಟೆಂಡರ್ ಕರೆಯುವ ಸಾಧ್ಯತೆ ಇದ್ದು, ಚೀನೀಯ ಕಂಪನಿಗಳನ್ನ ಈ ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಲಾಗಬಹುದು ಎಂದು ಹೇಳಲಾಗುತ್ತಿದೆ.

  ಬಿಎಸ್ಸೆನ್ನೆಲ್ ಕರೆದ ಟೆಂಡರ್ ಮೌಲ್ಯ ಸುಮಾರು 7-8 ಸಾವಿರ ಕೋಟಿ ರೂಪಾಯಿಯದ್ದೆನ್ನಲಾಗಿದೆ. ದೇಶೀಯವಾಗಿ ತಂತ್ರಜ್ಞಾನ ಬೆಳೆಯಲು ಸಹಕಾರಿಯಾಗುವ ಅಂಶಗಳೊಂದಿಗೆ ಮತ್ತೆ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ ಎಂದು ಮೂಲಗಳು ಹೇಳುತ್ತಿವೆ.

  ಟೆಲಿಕಾಂ ಉಪಕರಣಗಳ ಉತ್ಪಾದನೆಯಲ್ಲಿ ಚೀನಾ ಈ ವಿಶ್ವದಲ್ಲೇ ಅಗ್ರಗಣ್ಯ ಎನಿಸಿದೆ. ಚೀನಾದ ಹುವಾವೇ ಮತ್ತು ಝಡ್​ಟಿಇ ಸಂಸ್ಥೆಗಳು ಟೆಲಿಕಾಂ ಉಪಕರಣಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ ಟೆಲಿಕಾಂ ಸೌಕರ್ಯ ನಿರ್ಮಾಣದಲ್ಲಿ ಚೀನಾ ಉತ್ಪನ್ನಗಳ ಪಾತ್ರ ದೊಡ್ಡದಿದೆ. ಈಗ ಗಡಿಭಾಗದಲ್ಲಿ ಚೀನಾ ತಂಟೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ ಚೀನಾ ಕಂಪನಿಗಳಿಗೆ ನೀಡಿದ ಗುತ್ತಿಗೆಗಳನ್ನ ಮರುಪರಿಶೀಲಿಸುತ್ತಿದೆ. ಮೊನ್ನೆಯಷ್ಟೇ ಚೀನಾ ಕಂಪನಿಗಳು ತಯಾರಿಸಿದ 59 ಆ್ಯಪ್​ಗಳನ್ನ ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ನಿಷೇಧಿಸಿದೆ.

  ಇದನ್ನೂ ಓದಿ: Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ!  ಟೆಲಿಕಾಂ ವಲಯದಲ್ಲಿ ವಿದೇಶಿ ಅವಲಂಬನೆ, ಅದರಲ್ಲೂ ಚೀನಾದ ಮೇಲಿನ ಅವಲಂಬನೆಯನ್ನ ತಗ್ಗಿಸುವುದು ಕೇಂದ್ರ ಸರ್ಕಾರ ಚಿಂತನೆ. ಭಾರತದ ಟೆಲಿಕಾಂ ಉಪಕರಣಗಳಲ್ಲಿ ಶೇ. 75 ಭಾಗ ಚೀನೀ ನಿರ್ಮಿತವಾದವುಗಳೇ. ಇದೇ ವೇಳೆ, ಇದಕ್ಕಿಂತಲೂ ಗಂಭೀರವಾದ ಹೆಜ್ಜೆಯನ್ನ ಸರ್ಕಾರ ಇಡಲಿದೆ. ದೇಶದಲ್ಲಿ 5ಜಿ ತಂತ್ರಜ್ಞಾನ ಸೌಕರ್ಯ ನಿರ್ಮಿಸುವ ಬೃಹತ್ ಯೋಜನೆಯಲ್ಲಿ ಚೀನೀ ಕಂಪನಿಗಳನ್ನ ಹೊರಗಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ವಿಶ್ವದ 5ಜಿ ಸೌಕರ್ಯ ನಿರ್ಮಾಣದಲ್ಲಿ ಸಿಂಹಪಾಲು ಹೊಂದಿರುವ ಚೀನಾಗೆ ಭಾರತದ ಈ ಕ್ರಮ ಹಿನ್ನಡೆಯಾಗಬಹುದು.

  First published: