ಪಾಕ್ ಗಡಿಭಾಗದಿಂದ ಪಂಜಾಬ್​ಗೆ ಒಳನುಸುಳಿದ್ದ ಐವರನ್ನು ಕೊಂದ ಭಾರತದ ಭದ್ರತಾ ಪಡೆ

ಗಡಿಯಲ್ಲಿ ಬಿಎಸ್​ಎಫ್ ಯೋಧರ ಪಹರೆ

ಗಡಿಯಲ್ಲಿ ಬಿಎಸ್​ಎಫ್ ಯೋಧರ ಪಹರೆ

ಗಡಿದಾಟಿ ಬಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದವ ಐವರನ್ನು ತಡೆದು ಪ್ರಶ್ನಿಸಿದಾಗ ಸೈನಿಕರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿ ಆ ಐವರನ್ನ ಸಂಹರಿಸಲಾಗಿದೆ.

  • News18
  • 3-MIN READ
  • Last Updated :
  • Share this:

    ನವದೆಹಲಿ(ಆ. 22): ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ಪಂಜಾಬ್ ಪ್ರದೇಶಕ್ಕೆ ಒಳನುಸುಳಿದ್ದ ಐವರು ವ್ಯಕ್ತಿಗಳನ್ನ ಭಾರತದ ಗಡಿಭದ್ರತಾ ಪಡೆಯ ಸೈನಿಕರು ಕೊಂದುಹಾಕಿದ್ದಾರೆ. ಹಿರಿಯ ಸೇನಾಧಿಕಾರಿಯೊಬ್ಬರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಡಿದಾಟಿ ಬಂದದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಡಿನ ದಾಳಿ ಎಸಗಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿ ಅವರನ್ನು ಸಾಯಿಸಲಾಯಿತು ಎಂದು ಬಿಎಸ್​ಎಫ್ ಅಧಿಕಾರಿ ತಿಳಿಸಿದ್ಧಾರೆ.


    “ಪಂಜಾಬ್​ನ ತರನ್ ತಾರನ್ ಸಾಹಿಬ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡ ಬಂದ ನಂತರ 103ನೇ ಬೆಟಾಲಿಯನ್ ತುಕಡಿಗಳನ್ನ ಎಚ್ಚರಿಸಲಾಯಿತು. ಅವರನ್ನ ನಿಲ್ಲಿಸಲು ಹೇಳಿದಾಗ ಆ ವ್ಯಕ್ತಿಗಳು ಬಿಎಸ್​ಎಫ್ ತುಕಡಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಆಗ ಆ ಐವರು ವ್ಯಕ್ತಿಗಳು ಸಾವನ್ನಪ್ಪಿದರು” ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ನ ಸೇನಾಧಿಕಾರಿ ವಿವರ ನೀಡಿದ್ದಾರೆ.


    ಇದನ್ನೂ ಓದಿ: ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರನ ಬಂಧನ; ಭಾರೀ ಪ್ರಮಾಣದ ಸ್ಫೋಟಕ ವಶ


    ಬೆಳಗ್ಗಿನ 4:45ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಈಗ ಈ ಪ್ರದೇಶಾದ್ಯಂತ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ. ಪಂಜಾಬ್ ಪ್ರಾಂತ್ಯದ ಗಡಿ ಆಚೆ ಪಾಕಿಸ್ತಾನಕ್ಕೆ ಸೇರಿದ ಪಂಜಾಬ್ ಪ್ರಾಂತ್ಯ ಇದೆ.

    Published by:Vijayasarthy SN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು