ಜಮ್ಮು ಗಡಿಯಲ್ಲಿ ಪಾಕಿಸ್ತಾನದ​ ಡ್ರೋನ್​ ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮುವಿನ ಅರ್ನಿಯಾ ಭಾಗದಲ್ಲಿ ಸೋಮವಾರ ತಡರಾತ್ರಿ ಡ್ರೋನ್ ಒಂದು ಹಾರಾಟ ನಡೆಸುತ್ತಿತ್ತು. ತಕ್ಷಣಕ್ಕೆ ಎಚ್ಚೆತ್ತ ಬಿಎಸ್​ಎಫ್​ ಪಡೆ ಅದನ್ನು ನೆಲಕ್ಕುರುಳಿಸಿದೆ.

news18-kannada
Updated:January 28, 2020, 9:23 AM IST
ಜಮ್ಮು ಗಡಿಯಲ್ಲಿ ಪಾಕಿಸ್ತಾನದ​ ಡ್ರೋನ್​ ಹೊಡೆದುರುಳಿಸಿದ ಭಾರತೀಯ ಸೇನೆ
ಡ್ರೋನ್
  • Share this:
ಜಮ್ಮು (ಜ.28): ಪುಲ್ವಾಮಾ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ತೀವ್ರ ಹದಗೆಟ್ಟಿತ್ತು. ಈಗ ಪರಿಸ್ಥಿತಿ ಸಮಸ್ಥಿತಿಗೆ ಮರಳುತ್ತಿದೆ. ಈ ಮಧ್ಯೆ ಭಾರತದ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಪಾಕ್​​ ಡ್ರೋನ್ಅನ್ನು ಗಡಿ ರಕ್ಷಣಾ ಪಡೆ ಹೊಡೆದುರುಳಿಸಿದೆ.

ಜಮ್ಮುವಿನ ಅರ್ನಿಯಾ ಭಾಗದಲ್ಲಿ ಸೋಮವಾರ ತಡರಾತ್ರಿ ಡ್ರೋನ್ ಒಂದು ಹಾರಾಟ ನಡೆಸುತ್ತಿತ್ತು. ತಕ್ಷಣಕ್ಕೆ ಎಚ್ಚೆತ್ತ ಬಿಎಸ್​ಎಫ್​ ಪಡೆ ಅದನ್ನು ನೆಲಕ್ಕುರುಳಿಸಿದೆ. ಭಾರತೀಯ ಸೇನೆಯ ಚಲನವಲನಗಳನ್ನು ಪತ್ತೆ ಹಚ್ಚಲು ಪಾಕಿಸ್ತಾನ ಈ ಡ್ರೋನ್​ ಬಳಕೆ ಮಾಡಿತ್ತು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಎಸ್​ಎಫ್​ ಇನ್ಸ್​ಪೆಕ್ಟರ್​ ಜನರಲ್​, “ನಿನ್ನೆ ತಡರಾತ್ರಿ ನಮ್ಮ ಪ್ರದೇಶದಲ್ಲಿ ಡ್ರೋನ್​ ಹಾರಾಟ ನಡೆಸುತ್ತಿತ್ತು. ತಕ್ಷಣಕ್ಕೆ ಇದನ್ನು ಹೊಡೆದುರುಳಿಸಿದ್ದೇವೆ. ಆದರೆ, ಡ್ರೋನ್​ನಲ್ಲಿ ಯಾವುದೆ ಕ್ಯಾಮೆರಾ ಪತ್ತೆ ಆಗಿಲ್ಲ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಇದು ಪಾಕಿಸ್ತಾನದ ಡ್ರೋನ್​ ಎನ್ನುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ,” ಎಂದು ತಿಳಿಸಿದ್ದಾರೆ.

ಭಾರತದ ಗಡಿಯಲ್ಲಿ ಪಾಕ್​ ಡ್ರೋನ್​ ಪತ್ತೆ ಪ್ರಕರಣ ನಡೆದಿದ್ದು ಇದೇ ಮೊದಲೇನಲ್ಲ. ಅನೇಕ ಡ್ರೋನ್​ಗಳನ್ನು ಭಾರತದ ಗಡಿ ಭಾಗದಲ್ಲಿ ಸೇನೆ ಹೊಡೆದುರುಳಿಸಿದೆ.

ಇದನ್ನೂ ಓದಿ: ಅಮೇರಿಕಾದಲ್ಲಿ ಮೊಳಗಿತು ಪಾಕಿಸ್ತಾನ ವಿರುದ್ಧ ಘೋಷಣೆ
First published: January 28, 2020, 9:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading