BSF Jawan Martyred: ಹೊಂಚುಹಾಕಿ ದಾಳಿ ಮಾಡಿದ ಉಗ್ರರು; ಬಿಎಸ್​ಎಫ್ ಯೋಧ ಹುತಾತ್ಮ

ಉತ್ತರ ತ್ರಿಪುರಾ ಜಿಲ್ಲೆಯ ಆನಂದಬಜಾರ್ ಪೊಲೀಸ್ ಠಾಣೆಯಲ್ಲಿ, ತ್ರಿಪುರಾ, ಬಾಂಗ್ಲಾದೇಶ ಮತ್ತು ಮಿಜೋರಾಂ ನಡುವಿನ ಗಡಿಯಲ್ಲಿರುವ ಸಿಮ್ನಾ-ಎರಡು ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಬಾಂಗ್ಲಾದೇಶದ ಗಡಿಯಲ್ಲಿ ಉಗ್ರರ ಜತೆಗಿನ ಗುಂಡಿನ ಕಾಳಗದ ವೇಳೆ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದ ಬಿಎಸ್‌ಎಫ್ ಯೋಧ ಶುಕ್ರವಾರ ಐಎಲ್‌ಎಸ್ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ. 145 ಬೆಟಾಲಿಯನ್ ಬಿಎಸ್‌ಎಫ್‌ನಲ್ಲಿದ್ದ ಹವಾಲ್ದಾರ್‌ನ ಬಿಎಸ್‌ಎಫ್ ಸೈನಿಕ ಗ್ರಿಜೇಶ್ ಕುಮಾರ್ ಉದ್ದೆ (53) ಅವರು ಹುತಾತ್ಮರಾದ (BSF Jawan Martyred) ಯೋಧ ಎಂದು ಬಿಎಸ್‌ಎಫ್ ಮೂಲಗಳು (BSF)  ತಿಳಿಸಿವೆ. ಯೋಧನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಬಿಪಿ ಆಸ್ಪತ್ರೆಗೆ ರವಾನಿಸಲಾಗಿದೆ.  ಶುಕ್ರವಾರ ಬೆಳಗ್ಗೆ ಶಂಕಿತ ಎನ್‌ಎಲ್‌ಎಫ್‌ಟಿ ಉಗ್ರರು ಗಡಿ ಗಸ್ತು ತಿರುಗುವ ಯೋಧರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ಪ್ರಕ್ರಿಯೆಯಲ್ಲಿ ಒಬ್ಬ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ.

    ಉತ್ತರ ತ್ರಿಪುರಾ ಜಿಲ್ಲೆಯ ಆನಂದಬಜಾರ್ ಪೊಲೀಸ್ ಠಾಣೆಯಲ್ಲಿ, ತ್ರಿಪುರಾ, ಬಾಂಗ್ಲಾದೇಶ ಮತ್ತು ಮಿಜೋರಾಂ ನಡುವಿನ ಗಡಿಯಲ್ಲಿರುವ ಸಿಮ್ನಾ-ಎರಡು ಪ್ರದೇಶದಲ್ಲಿ ಈ ಘಟನೆ ನಡೆದಿದೆ.

    ಹೊಂಚುಹಾಕಿ ಕುಳಿತಿದ್ದ ಉಗ್ರರು
    ಕಳೆದ ಕೆಲವು ದಿನಗಳಿಂದ ದೂರದ ಗಡಿ ಮತ್ತು ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಎನ್‌ಎಲ್‌ಎಫ್‌ಟಿ ಉಗ್ರಗಾಮಿಗಳು ಬೆಳಿಗ್ಗೆ ಗಡಿಯಾಚೆಯಿಂದ ಬಿಎಸ್‌ಎಫ್ ಗಸ್ತು ಹೊಂಚು ಹಾಕಿದ್ದರು.

    ಸೇನೆಯೂ ಸುಮ್ಮನೆ ಕುಳಿತಿಲ್ಲ
    "ಬಾಂಗ್ಲಾದೇಶದ ರಂಗಮತಿ ಹಿಲ್ ಜಿಲ್ಲೆಯ ಜುಪುಯಿ ಪ್ರದೇಶದಿಂದ ಭಾರೀ ಶಸ್ತ್ರಸಜ್ಜಿತ ಉಗ್ರಗಾಮಿಗಳ ಗುಂಪು BSF ಯೋಧರ ಮೇಲೆ ಗುಂಡಿನ ದಾಳಿ ನಡೆಸಿತು. ಜವಾನರು ಪ್ರತಿದಾಳಿ ನಡೆಸಿದರು. ಇದು ಎರಡು ಕಡೆಯ ನಡುವೆ ಭೀಕರ ಎನ್‌ಕೌಂಟರ್‌ಗೆ ಕಾರಣವಾಯಿತು" ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಕುಮಾರ್ ಕೆ ಪಿಟಿಐಗೆ ತಿಳಿಸಿದ್ದಾರೆ.

    ಬಾಂಗ್ಲಾದೇಶದ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾದಾಗ ಕಾಂಚನ್‌ಪುರ ಉಪವಿಭಾಗದ ಸಿಮಾ-II ಗಡಿ ಹೊರಠಾಣೆ ಪ್ರದೇಶದಲ್ಲಿ ಬಿಎಸ್‌ಎಫ್ ತಂಡವು ಪ್ರದೇಶದ ಪ್ರಾಬಲ್ಯ ಕಾರ್ಯಾಚರಣೆಯಲ್ಲಿತ್ತು ಎಂದು ಅವರು ಹೇಳಿದರು.

    145ನೇ ಬೆಟಾಲಿಯನ್‌ನ ಮೃತ ಗಡಿ ಕಾವಲುಗಾರ ಹವಾಲ್ದಾರ್ ಗ್ರಿಬೇಶ್ ಕುಮಾರ್ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೆಲಿಕಾಪ್ಟರ್ ಅನ್ನು ಬಳಸಲಾಯಿತು. ಆದರೂ ಅವರು ಹುತಾತ್ಮರಾದರು ಎಂದು ವರದಿಯಾಗಿದೆ.

    ಇದನ್ನೂ ಓದಿ: Shocking News: ಎದೆಹಾಲು ಕುಡಿಯುವುದನ್ನೇ ನಿಲ್ಲಿಸಿದ 8 ತಿಂಗಳ ಮಗು! ಬಯಲಾಯ್ತು ಶಾಕಿಂಗ್ ಕಾರಣ

    ಘಟನೆಯ ನಂತರ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಗತ್ಯ ಕ್ರಮಕ್ಕಾಗಿ ನಾವು ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶದೊಂದಿಗೆ (ಬಿಜಿಬಿ) ಮಾತುಕತೆ ನಡೆಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ
    ಮುಂಬೈನ ಬೋರಿವಲಿ ಪ್ರದೇಶದಲ್ಲಿ ಖಾಲಿ ಮತ್ತು ಶಿಥಿಲಗೊಂಡ 5 ಅಂತಸ್ತಿನ ಕಟ್ಟಡ ಕುಸಿದಿದೆ. ಭಾರೀ ಅನಾಹುತವೊಂದು ಘಟಿಸಿದೆ. ಬೋರಿವಲಿ ಪಶ್ಚಿಮದ ಸಾಯಿಬಾಬಾ ನಗರದ ಸಾಯಿಬಾಬಾ ದೇವಸ್ಥಾನದ ಬಳಿ ಗೀತಾಂಜಲಿ ಹೆಸರಿನ ಕಟ್ಟಡವು ಮಧ್ಯಾಹ್ನ 12.30 ರ ಸುಮಾರಿಗೆ ಕುಸಿದಿದೆ. ಅದೃಷ್ಟವಷಾತ್ ಮುಂಬೈನಲ್ಲಿ ನಡೆದ ಈ 4 ಅಂತಸ್ತಿನ ಕಟ್ಟಡ ಕುಸಿತದಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
    ಬೋರಿವಲಿ ಪಶ್ಚಿಮದ ಸಾಯಿಬಾಬಾ ನಗರದ ಸಾಯಿಬಾಬಾ ದೇವಸ್ಥಾನದ ಬಳಿ ಗೀತಾಂಜಲಿ ಹೆಸರಿನ ಕಟ್ಟಡವು ಮಧ್ಯಾಹ್ನ 12.30 ರ ಸುಮಾರಿಗೆ ಕುಸಿದಿದೆ. ಮುಂಬೈ ಅಗ್ನಿಶಾಮಕ ದಳದ ಕನಿಷ್ಠ ಎಂಟು ಅಗ್ನಿಶಾಮಕ ವಾಹನಗಳು, ಎರಡು ರಕ್ಷಣಾ ವ್ಯಾನ್​ಗಳು ಮತ್ತು ಇತರ ವಾಹನಗಳು ಪೊಲೀಸರು ಮತ್ತು ನಾಗರಿಕ ವಾರ್ಡ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಇದನ್ನೂ ಓದಿ: Bengaluru Rent Home: ಮುಸ್ಲಿಂ ಆಗಿದ್ದಕ್ಕೆ ಬೆಂಗಳೂರಲ್ಲಿ ಬಾಡಿಗೆಮನೆ ಸಿಕ್ಕಿಲ್ಲ; ವೈರಲ್ ಆಯ್ತು ಟ್ವೀಟ್

    ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳಡಿಯಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    Published by:guruganesh bhat
    First published: