• Home
  • »
  • News
  • »
  • national-international
  • »
  • Shocking: ಕರ್ನಾಟಕದ BSF ಸೈನಿಕನಿಂದ 4 ಸಹೋದ್ಯೋಗಿಗಳಿಗೆ ಗುಂಡು; ತನಗೂ ಗುಂಡು ಹಾರಿಸಿಕೊಂಡು ಮೃತಪಟ್ಟ ಯೋಧ

Shocking: ಕರ್ನಾಟಕದ BSF ಸೈನಿಕನಿಂದ 4 ಸಹೋದ್ಯೋಗಿಗಳಿಗೆ ಗುಂಡು; ತನಗೂ ಗುಂಡು ಹಾರಿಸಿಕೊಂಡು ಮೃತಪಟ್ಟ ಯೋಧ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಮುಂಭಾಗದ ಉದ್ದಕ್ಕೂ ಅಟ್ಟಾರಿ-ವಾಘಾ ಗಡಿ ದಾಟುವಿಕೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದ ಫೋರ್ಸ್ ಮೆಸ್‌ನಲ್ಲಿ ಈ ಘಟನೆ ನಡೆದಿದೆ.

  • Share this:

ಅಮೃತಸರ: ಪಂಜಾಬ್​ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಇಂದು (ಭಾನುವಾರ ಫೆಬ್ರುವರಿ 6) ಬೆಳಗ್ಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್- BSF) ಸೈನಿಕನೋರ್ವ ತನ್ನ ಕರ್ತವ್ಯದ ಗನ್​ನಿಂದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿದ್ದಾರೆ. ಬಿಎಸ್ಎಫ್ ಸೈನಿಕ (BSF Jawan Fires) ಹಾರಿಸಿದ ಗುಂಡಿನಿಂದ ಆತನ ನಾಲ್ವರು ಸಹೋದ್ಯೋಗಿಗಳು ಮೃತಪಟ್ಟಿದ್ದು ಗುಂಡು ಹಾರಿಸಿದ ಸೈನಿಕ ಸಹ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಮೃತಸರ (Amritsar) ಗ್ರಾಮಾಂತರ ಪೊಲೀಸ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ದೀಪಕ್ ಹಿಲೋರಿ ಅವರು ಗುಂಡು ಹಾರಿಸಿದ ಸೈನಿಕ ಸೇರಿದಂತೆ ಐವರ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.


ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಪಟ್ಟಿಯಲ್ಲಿ ಕರ್ನಾಟಕದ ಕಾನ್‌ಸ್ಟೆಬಲ್ ಎಸ್‌ಕೆ ಸೆಟ್ಟೆಪ್ಪ, ಬಿಹಾರದ ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮು ಮತ್ತು ಕಾಶ್ಮೀರದ ರತ್ತನ್ ಸಿಂಗ್ ಮತ್ತು ಹರಿಯಾಣದ ಪಾಣಿಪತ್‌ನ ಬಲ್ಜಿಂದರ್ ಕುಮಾರ್ ಸೇರಿದ್ದಾರೆ.


ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಬಿಎಸ್ಎಫ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ 10:15 ಕ್ಕೆ ಈ ಘಟನೆ ಸಂಭವಿಸಿದೆ ಮತ್ತು ಸಂತ್ರಸ್ತರನ್ನು 11 ಗಂಟೆಗೆ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಬಿಎಸ್ಎಫ್ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.


ಗುಂಡಿನ ದಾಳಿ ನಡೆದ ಪ್ರದೇಶ ಏಕಿಷ್ಟು ಮಹತ್ವದ್ದು?
ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಮುಂಭಾಗದ ಉದ್ದಕ್ಕೂ ಅಟ್ಟಾರಿ-ವಾಘಾ ಗಡಿ ದಾಟುವಿಕೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದ ಫೋರ್ಸ್ ಮೆಸ್‌ನಲ್ಲಿ ಈ ಘಟನೆ ನಡೆದಿದೆ.


ಗುಂಡಿನ ದಾಳಿಗೆ ಕಾರಣವೇನು?
ಆದರೆ ಗುಂಡು ಹಾರಿಸಿದ ಜವಾನ ತನ್ನ ಕರ್ತವ್ಯದ ಸಮಯದ ವೇಳಾಪಟ್ಟಿಯ ಕುರಿತು ಅಸಮಾಧಾನ ಹೊಂದಿದ್ದ. ಇದೇ ಕಾರಣ ಈ ಗುಂಡಿನ ದಾಳಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ತದನಂತರ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ.


ಹೆಚ್ಚಿನ ವಿವರಗಳಿಗಾಗಿ ತನಿಖೆ ಕೈಗೊಳ್ಳಲಾಗುವುದು ಎಂದು  ಗಡಿ ಭದ್ರತಾ ಪಡೆ ತಿಳಿಸಿದೆ. ಎಲ್ಲಾ ಗಾಯಾಳುಗಳನ್ನು ಗುರುನಾನಕ್ ದೇವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Successful Love Story: ರಷ್ಯಾದ ಹುಡುಗಿ, ಭಾರತದ ಹುಡುಗ! ಧರ್ಮ, ದೇಶ, ಭಾಷೆಗಳನ್ನು ಮೀರಿದ ಅದ್ಭುತ ಪ್ರೇಮಕಥೆ


ಯಾರು ಈ ಬಿಎಸ್​ಎಫ್ ಸಿಬ್ಬಂದಿ?
‘ಬಿ’ ಕಾಯ್ 144 ಬೆಟಾಲಿಯನ್​ನ ಕಾನ್ಸ್ಟೆಬಲ್ ಸೆಟ್ಟೆಪ್ಪ ಎಸ್​ಕೆ ಅವರೇ ಈ ತಮ್ಮ ಕರ್ತವ್ಯ ನಿಭಾಯಿಸಲು ನೀಡಿದ್ದ ಗನ್ ಬಳಸಿ ಆಯುಧವನ್ನು ಬಳಸಿ ಗುಂಡಿನ ದಾಳಿ ಮಾಡಿದವರು ಎನ್ನಲಾಗಿದೆ. ಅವರು ಬಿಎಸ್ಎಫ್ ಪ್ರಧಾನ ಕಚೇರಿಯ ಜಿಎಫ್ ಮತ್ತು ಒಆರ್ಎಸ್ ಬ್ಯಾರಕ್​ಗಳಲ್ಲಿ ತಮ್ಮ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.


ಕಮಾಂಡೆಂಟ್ ಮೇಲೂ ಗುಂಡಿನ ದಾಳಿ
144 ಬೆಟಾಲಿಯನ್​ನ ಕಾನ್ಸ್​ಟೇಬಲ್ ಸೆಟ್ಟೆಪ್ಪ ಎಸ್​ಕೆ ಅವರು 144 ಬೆಟಾಲಿಯನ್​ನ ಕಮಾಂಡೆಂಟ್ ಸತೀಶ್ ಮಿಶ್ರಾ ಅವರ ವಾಹನದ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: China Defence Budget 17.58 ಲಕ್ಷ ಕೋಟಿ ರೂಪಾಯಿ! ಯುದ್ಧಕ್ಕೆ ಸಿದ್ಧವಾಗಲು ಸೈನಿಕರಿಗೆ ಸೂಚನೆ


ಖಾಸಾ ಪ್ರದೇಶವು ಪಂಜಾಬ್​ನಲ್ಲಿನ ಬಿಎಸ್ಎಫ್​ನ ಅತ್ಯಂತ ಜನನಿಬಿಡ ಪ್ರಧಾನ ಕಛೇರಿಗಳಲ್ಲಿ ಒಂದಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಇಂಟಿಗ್ರೇಟೆಡ್ ಚೆಕ್​ಪೋಸ್ಟ್ ಆಗಿದೆ. ಜೊತೆಗೆ ಅತ್ಯಂತ ಮಹತ್ವದ ಸಮಾರಂಭವಾದ ಬೀಟಿಂಗ್ ರಿಟ್ರೀಟ್​ನ ವ್ಯವಸ್ಥೆಗಳ ಉಸ್ತುವಾರಿಯನ್ನು ವಹಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

Published by:guruganesh bhat
First published: