Stock Market: ಏಷ್ಯಾ ಮಾರುಕಟ್ಟೆಗಳ ಅತೃಪ್ತ ಪ್ರದರ್ಶನ; ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ

Share Market Update Today: ವಾರದ ಆರಂಭದಲ್ಲಿ ಮಿಶ್ರ ಸಂಕೇತಗಳು ದೊರಕಿದ್ದು ಉತ್ತಮ ಹಾಗೂ ಕಳಪೆ ಪ್ರದರ್ಶನಗಳಿಗೆ ಮಾರುಕಟ್ಟೆಗಳು ಸಾಕ್ಷಿಯಾಗಿವೆ. ಧನಾತ್ಮಕ ಅಂಶ ಹೇಳುವುದಾದರೆ FIIs ಹಾಗೂ DIIs ಎರಡನ್ನೂ ಖರೀದಿ ಮಾಡಲಾಗಿದ್ದು FIIs ದೀರ್ಘ ಪ್ರದರ್ಶನವನ್ನು ಭವಿಷ್ಯದ ಮಾರುಕಟ್ಟೆಗಳು ಸೂಚಿಸಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Stock Market Today: BSE Benchmark Sensex ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಇಂದು ಬೆಳಗ್ಗೆ 162.8 ಪಾಯಿಂಟ್‌ಗಳಲ್ಲಿ 58,142.27 ವಹಿವಾಟು ನಡೆಸಿದ್ದು ಪ್ರಸ್ತುತ ಬಿಎಸ್‌ಇ ಸೆನ್ಸೆಕ್ಸ್ 58,050ರ ಆಸುಪಾಸಿನಲ್ಲಿದೆ. ಇನ್ನು ಬ್ಲೂಚಿಪ್‌ ಇಂಡೆಕ್ಸ್ ನಿಫ್ಟಿ (Bluchip Index NEFTY) 50, 30 ಪಾಯಿಂಟ್‌ಗಳಲ್ಲಿ 0.17%ನಷ್ಟು ಕುಸಿತದೊಂದಿಗೆ 17,339 ವಹಿವಾಟನ್ನು ಇಂದು ಬೆಳಗ್ಗೆ ದಾಖಲಿಸಿದೆಯಾದರೂ ಪ್ರಸ್ತುತ ಮೌಲ್ಯ 17,350 ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯು ನಕಾರಾತ್ಮಕವಾಗಿ ಪ್ರದರ್ಶನ ತೋರಿದ್ದು (Asian Market) ಏಷ್ಯಾದ ಮಾರುಕಟ್ಟೆಗಳು ಅತೃಪ್ತ ಪ್ರದರ್ಶನವನ್ನು ತೋರಿದ್ದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

  ವಹಿವಾಟುಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕೆಲವು ಸಂಸ್ಥೆಗಳೆಂದರೆ NSE, ಕೋಲ್ ಇಂಡಿಯಾ, ಹಿಂಡಾಲ್ಕೊ, HDFC, UPL, JSW ಸ್ಟೀಲ್ ಉತ್ತಮ ಪ್ರದರ್ಶಕರ ಸ್ಥಾನಗಳಲ್ಲಿವೆ. ಕೋಲ್ ಇಂಡಿಯಾ 1.48% ನಷ್ಟು ಏರಿಕೆ ಕಂಡಿದ್ದು, ಹಿಂಡಾಲ್ಕೊ 1.42% ನಷ್ಟು ಹೆಚ್ಚಳ ಕಂಡಿದೆ. ಇನ್ನು Reliance, ICICI ಬ್ಯಾಂಕ್, HCL ಟೆಕ್, Eicher Motor, ಇನ್ಫೋಸಿಸ್ ನಿಧಾನ ಪ್ರಗತಿಯನ್ನು ದಾಖಲಿಸಿದ್ದು ಹಿಂದುಳಿದಿವೆ. ಆರಂಭಿಕ ವಹಿವಾಟಿನಲ್ಲಿ ಅಗ್ರ ಗಳಿಕೆ ನಡೆಸಿದ ಹಿರಿಮೆ ನಿಫ್ಟಿ ಮೀಡಿಯಾದ್ದಾಗಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ FMCG, ನಿಫ್ಟಿ IT, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್ ಕಡಿಮೆ ವಹಿವಾಟು ನಡೆಸುತ್ತಿದೆ.

  BSE, NOCIL, ಉಷಾ ಮಾರ್ಟ್, ಆಪ್ಕೊಟೆಕ್ಸ್ ಇಂಡಸ್ಟ್ರೀಸ್ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆಗಳಾಗಿದ್ದು ಏಜಿಸ್ ಲಿಮಿಟೆಡ್, ಫ್ಯೂಚರ್ ಕನ್ಸ್ಯೂಮರ್ಸ್ ಕಳಪೆ ಪ್ರದರ್ಶನ ತೋರಿದ್ದಾರೆ. BSE MidCap 0.10% ಏರಿಕೆ ಕಂಡಿದ್ದರೆ BSE ಸ್ಮಾಲ್‌ಕ್ಯಾಪ್ 0.27% ಏರಿಕೆಯಾಗಿದೆ.

  ಸೆನ್ಸೆಕ್ಸ್​ - ನಿಫ್ಟಿ ಮಿಶ್ರ ಪ್ರದರ್ಶನ:

  ಒಟ್ಟಿನಲ್ಲಿ ವಾರದ ಆರಂಭದಲ್ಲಿ ಮಿಶ್ರ ಸಂಕೇತಗಳು ದೊರಕಿದ್ದು ಉತ್ತಮ ಹಾಗೂ ಕಳಪೆ ಪ್ರದರ್ಶನಗಳಿಗೆ ಮಾರುಕಟ್ಟೆಗಳು ಸಾಕ್ಷಿಯಾಗಿವೆ. ಧನಾತ್ಮಕ ಅಂಶ ಹೇಳುವುದಾದರೆ FIIs ಹಾಗೂ DIIs ಎರಡನ್ನೂ ಖರೀದಿ ಮಾಡಲಾಗಿದ್ದು FIIs ದೀರ್ಘ ಪ್ರದರ್ಶನವನ್ನು ಭವಿಷ್ಯದ ಮಾರುಕಟ್ಟೆಗಳು ಸೂಚಿಸಿವೆ. ಸಾಂಕ್ರಾಮಿಕದ ಸಮಸ್ಯೆಯಿಂದಾಗಿ ಆರ್ಥಿಕ ಪ್ರಗತಿಯ ಮೇಲೆ ಕರಿನೆರಳು ಮೂಡಿದ್ದು ಯುಎಸ್ ಹಾಗೂ ಐರೋಪ್ಯ ದೇಶಗಳಲ್ಲಿನ ಸುದ್ದಿಗಳು ಆರ್ಥಿಕ ಕುಸಿತವನ್ನು ಗುರಿಮಾಡಿವೆ.

  ಈ ಋಣಾತ್ಮಕ ಅಭಿವೃದ್ಧಿಗಳಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗಿರುವುದು ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಾಗಿವೆ. ಹೂಡಿಕೆದಾರರು ಈ ದಿಸೆಯಲ್ಲಿ ಮುತುವರ್ಜಿ ವಹಿಸುವ ಅಗತ್ಯವಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ.ಕೆ ವಿಜಯಕುಮಾರ್ ತಿಳಿಸಿದ್ದಾರೆ.

  ಇದನ್ನೂ ಓದಿ: Zomato: ಸೆಪ್ಟೆಂಬರ್ 17 ರಿಂದ ದಿನಸಿ ಪೂರೈಕೆ ಸ್ಥಗಿತ ಮಾಡಲಿರುವ ಜೊಮ್ಯಾಟೊ 

  ಏಷ್ಯಾದ ಷೇರುಗಳು ಹಿಂದಿನ ದಿನಕ್ಕಿಂತಲೂ ಕಡಿಮೆ ವಹಿವಾಟು ನಡೆಸಿದ್ದು ಟೋಕಿಯೋ ಬೆಂಚ್‌ಮಾರ್ಕ್ ನಿಕ್ಕಿ 225 ಸೂಚ್ಯಂಕವು ಹಿಂದಿನ ವಹಿವಾಟು 30,341.59ನಲ್ಲಿ 0.13%ಗೆ ಕುಸಿದಿದೆ. ಟಾಪಿಕ್ಸ್ ಇಂಡೆಕ್ಸ್ 0.44% ಕುಸಿತ ಕಂಡು 2,082.52ಗೆ ತಲುಪಿದೆ. ಹಾಂಗ್ ಸೆಂಗ್ ಇಂಡೆಕ್ಸ್ 1.22% ಕುಸಿತದಲ್ಲಿ 25,885.30ಗೆ ಬಂದು ನಿಂತಿದೆ. ಶಾಂಘೈ ಕಾಂಪೋಸಿಟ್ ಕೂಡ 0.10% ಕುಸಿತಕ್ಕೆ 3,699.25ಕ್ಕೆ ಇಳಿದಿದೆ. ಚೀನಾದ ಎರಡನೆಯ ಷೇರು ವಿನಿಮಯ ಶೆನ್ಜನ್ ಕಾಂಪೊಸಿಟ್ 0.07% ಕುಸಿತಕ್ಕೆ 2,503.79 ಅನ್ನು ದಾಖಲಿಸಿದೆ. ಒಟ್ಟಿನಲ್ಲಿ BSE ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಹಿಂದಿನ ಮುಕ್ತಾಯ ಬೆಲೆಯಲ್ಲಿ ಬದಲಾವಣೆಗೊಳ್ಳದೇ 0.09% ಏರಿಕೆಯೊಂದಿಗೆ 58,305 ಅನ್ನು ದಾಖಲಿಸಿದೆ. ನಿಫ್ಟಿ ಶೇ .0.02% ಏರಿಕೆಯಲ್ಲಿ 3.85 ಪಾಯಿಂಟ್‌ಗಳ ಹೆಚ್ಚಳದೊಂದಿಗೆ 17,357.35 ರಲ್ಲಿ ವಹಿವಾಟು ನಡೆಸುತ್ತಿದೆ.

  ಇದನ್ನೂ ಓದಿ: ನಿಮ್ಮ ಬಳಿ SBI Account ಇದ್ರೆ, ಈ ಕೆಲಸ ಮೊದಲು ಮಾಡಿ: ಇಲ್ಲದಿದ್ರೆ ನಿಮ್ಮ ಖಾತೆ ಸ್ಥಗಿತವಾಗುತ್ತೆ..!

  ಕೊರೋನಾ ವೈರಸ್‌ನ ಡೆಲ್ಟಾ ರೂಪಾಂತರ ಹಾವಳಿಯಿಂದಾಗಿ ಯುಎಸ್ ಈಕ್ವಿಟಿಗಳು ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದು ಇದರಿಂದಾಗಿ ಎಲ್ಲಾ ಪ್ರಮುಖ ಸೂಚ್ಯಂಕಗಳು 1.6% -2.2% ನಷ್ಟವನ್ನು ದಾಖಲಿಸಿವೆ. ಪ್ರಸ್ತುತ ವಾರದಲ್ಲಿ ಆಗಸ್ಟ್ CPI ಡೇಟಾ ಹಾಗೂ ಚಿಲ್ಲರೆ ಮಾರಾಟ ಅಂಕಿ ಅಂಶಗಳು ಯುಎಸ್ ಮಾರುಕಟ್ಟೆಯಲ್ಲಿ ನಿರ್ಣಾಯಕ ಎಂದೆನಿಸಿವೆ. ಇದೇ ಡೇಟಾ ಮುಂದುವರಿದಲ್ಲಿ ಈಕ್ವಿಟಿಗಳ ಸ್ವಲ್ಪ ಪ್ರಮಾಣದ ಮಾರಾಟಕ್ಕೆ ಇದು ಒತ್ತಡ ಹೇರಬಹುದು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಕಾರ್ಯತಂತ್ರ ಮುಖ್ಯಸ್ಥರಾದ ಬಿನೋದಿ ಮೋದಿ ತಿಳಿಸಿದ್ದಾರೆ.
  Published by:Sharath Sharma Kalagaru
  First published: