• Home
  • »
  • News
  • »
  • national-international
  • »
  • Brutal Murder: ಚಹಾ ಮಾಡುತ್ತಿದ್ದ ಚಿಕ್ಕಮ್ಮನ ತಲೆಗೆ ಸುತ್ತಿಗೆ ಏಟು! ಮಗನೇ ಕೊಲೆಗಡುಕ ಆಗಿದ್ಯಾಕೆ?

Brutal Murder: ಚಹಾ ಮಾಡುತ್ತಿದ್ದ ಚಿಕ್ಕಮ್ಮನ ತಲೆಗೆ ಸುತ್ತಿಗೆ ಏಟು! ಮಗನೇ ಕೊಲೆಗಡುಕ ಆಗಿದ್ಯಾಕೆ?

ಬಂಧಿತ ಆರೋಪಿ

ಬಂಧಿತ ಆರೋಪಿ

ಅನುಜ್ ಚಿಕ್ಕಮ್ಮನ ಮೃತದೇಹದ ಭಾಗಗಳನ್ನು ಬಕೆಟ್ ಮತ್ತು ಸೂಟ್‌ಕೇಸ್‌ನಲ್ಲಿ ಸಾಗಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸ್ವತಃ ತಾನೇ ಚಿಕ್ಕಮ್ಮನ ಕೊಲೆ ಮಾಡಿ ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದ.

  • News18 Kannada
  • 3-MIN READ
  • Last Updated :
  • Jaipur, India
  • Share this:

ಜೈಪುರ: 32 ವರ್ಷದ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನನ್ನು ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿದ ಭೀಕರ ಘಟನೆ ರಾಜಸ್ಥಾನದ (Rajasthan) ಜೈಪುರದಲ್ಲಿ ನಡೆದಿದೆ. ಅನುಜ್ ಶರ್ಮಾ ಎಂಬಾತನೇ ತನ್ನ ಚಿಕ್ಕಮ್ಮನನ್ನು ಹೀಗೆ ಭೀಕರವಾಗಿ ಹತ್ಯೆ (Brutal Murder) ಮಾಡಿದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 11 ರಂದು ಜೈಪುರದ (Jaipur Murder Case) ತನ್ನ 64 ವರ್ಷದ ಚಿಕ್ಕಮ್ಮನನ್ನು ಅನುಜ್ ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ. ಕೊಲೆ ಮಾಡಿ ಮೃತದೇಹವನ್ನು ಆರೋಪಿ ದೂರದ ಪ್ರದೇಶವೊಂದರಲ್ಲಿ ಎಸೆದಿದ್ದಾನೆ ಎಂದು ಪೊಲೀಸರಿಗೆ (Police) ತಿಳಿದುಬಂದಿದೆ.


ಅನುಜ್ ತನ್ನ ಅಪ್ಪ, ಸಹೋದರಿ ಮತ್ತು ಅವರ ಚಿಕ್ಕಮ್ಮ ಸರೋಜ್ ಅವರೊಂದಿಗೆ ಜೈಪುರದ ವಿದ್ಯಾಧರ್ ನಗರದಲ್ಲಿ ವಾಸಿಸುತ್ತಿದ್ದ. ಆತನ ಚಿಕ್ಕಮ್ಮ ತನ್ನ ಗಂಡನ ಮರಣದ ನಂತರ ಈ ಕುಟುಂಬದ ಜೊತೆ ವಾಸಿಸುತ್ತಿದ್ದರು. ಇತ್ತ ಅರುಣ್‌ನ ತಾಯಿ ಕಳೆದ ವರ್ಷ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದರು.


ಚಹಾ ಮಾಡುತ್ತಿದ್ದ ಚಿಕ್ಕಮ್ಮನ ತಲೆಗೆ ಸುತ್ತಿಗೆ ಏಟು
ಡಿಸೆಂಬರ್ 11 ರಂದು ಮನೆಯ ಎಲ್ಲರೂ ಹೊರಗೆ ತೆರಳಿದ್ದರು. ಮನೆಯಲ್ಲಿ ಅನುಜ್ ಮತ್ತು ಆತನ ಚಿಕ್ಕಮ್ಮ ಮಾತ್ರ ಇದ್ದರು. ಅನುಜ್ ಇದೇ ವೇಳೆ ದೆಹಲಿಗೆ ಹೋಗಲು ಮುಂದಾಗಿದ್ದ, ಆದರೆ ಆತನ ಚಿಕ್ಕಮ್ಮ ಸರೋಜ ಅನುಜ್​ನನ್ನು ದೆಹಲಿಗೆ ಹೋಗದಂತೆ ತಡೆದರು. ಇದೇ ಮುಂದೆ ವಾಗ್ವಾದಕ್ಕೆ ಕಾರಣವಾಯಿತು. ಕೋಪದ ಭರದಲ್ಲಿ ಅನುಜ್ ಚಹಾ ಮಾಡುತ್ತಿದ್ದಾಗ ಚಿಕ್ಕಮ್ಮ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಾರ್ಬಲ್ ಕಟರ್‌ನಿಂದ ದೇಹ 10 ತುಂಡು
ಮನೆಯಲ್ಲೇ ಕೊಲೆ ಮಾಡಿದ ನಂತರ ತನ್ನ ಚಿಕ್ಕಮ್ಮನ ದೇಹವನ್ನು ಮಾರ್ಬಲ್ ಕಟರ್‌ನಿಂದ 10 ತುಂಡುಗಳಾಗಿ ಕತ್ತರಿಸಿ ಜೈಪುರ-ಸಿಕರ್ ಹೆದ್ದಾರಿಯಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ.


ಬಕೆಟ್ ಮತ್ತು ಸೂಟ್‌ಕೇಸ್‌ನಲ್ಲಿ ಮೃತದೇಹದ ಸಾಗಾಟ
ಅನುಜ್ ಚಿಕ್ಕಮ್ಮನ ಮೃತದೇಹದ ಭಾಗಗಳನ್ನು ಬಕೆಟ್ ಮತ್ತು ಸೂಟ್‌ಕೇಸ್‌ನಲ್ಲಿ ಸಾಗಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸ್ವತಃ ತಾನೇ ಚಿಕ್ಕಮ್ಮನ ಕೊಲೆ ಮಾಡಿ ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದ.ಪೊಲೀಸರನ್ನು ದಾರಿತಪ್ಪಿಸಲು ಇತರ ಸಂಬಂಧಿಕರೊಂದಿಗೆ ಅವಳನ್ನು ಹುಡುಕಲು ಪ್ರಾರಂಭಿಸಿದ್ದ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.


ಇದನ್ನೂ ಓದಿ: Gujarat: 50,000 ರೂ ಸಾಲ ತೀರಿಸದ ಆಟೋ ಚಾಲಕನ ಹೆಂಡತಿಯನ್ನೇ ರೇಪ್ ಮಾಡಿದ ಫೈನಾನ್ಸರ್, ವಿಡಿಯೋ ಲೀಕ್!


ಪೊಲೀಸರಿಗೆ ಬಂತು ಅನುಮಾನ!
ಆದರೆ ತನಿಖೆ ಕೈಗೊಂಡ ಪೊಲೀಸರಿಗೆ ಅನುಜ್​ನ ಚಟುವಟಿಕೆಗಳ ಮೇಲೆ ಅನುಮಾನ ಮೂಡಿದೆ. ಹೀಗಾಗಿ ಆತನ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅನುಜ್ ಸೂಟ್‌ಕೇಸ್ ಮತ್ತು ಬಕೆಟ್‌ನೊಂದಿಗೆ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ: Uttar Pradesh: ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ಮಗುವಿನ ಅದೃಷ್ಟವೇ ಬದಲು, ದಿನ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿ!


ಕೊನೆಗೂ ಪೊಲೀಸರೆದುರು ಬಾಯ್ಬಿಟ್ಟ ಆರೋಪಿ
ಅನುಜ್​ನನ್ನೇ ಗಂಭೀರವಾಗಿ ಪ್ರಶ್ನಿಸಿದಾಗ ತನ್ನ ಚಿಕ್ಕಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಇಲ್ಲಿದೆ ನೋಡಿ ಇನ್ನೊಂದು ಭೀಕರ ಹತ್ಯಾ ಪ್ರಕರಣ
ಜಾರ್ಖಂಡ್‌ನ ಗುಮ್ಲಾ ಭರ್ನೋ ಪೊಲೀಸ್ ಠಾಣಾ ವ್ಯಾಪ್ತಿಯ ಅಮಾಲಿಯಾ ದಹುತೋಲಿ ಗ್ರಾಮದ ಅರಣ್ಯದ ಸಮೀಪವಿರುವ ಬಾವಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯನ್ನು ಕೊಲೆ ಮಾಡಲಾಗಿದೆ. ಪೊಲೀಸರು ಪ್ರೇಮಿ ಹಾಗೂ ಪೋಷಕರನ್ನು ಬಂಧಿಸಿದ್ದಾರೆ. ಡಿಸೆಂಬರ್ 13 ರಂದು ಪೊಲೀಸರು ಗೋಣಿಚೀಲದಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಬಾಲಕಿಯ ಮೃತ ದೇಹವನ್ನು ಬಾವಿಯಿಂದ ಹೊರತೆಗೆದಿದ್ದರು. ಭರ್ನೋ ಪೊಲೀಸರು ಇದೀಗ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: