ಕಂದು ಬಣ್ಣದವರೆಲ್ಲ ಕೆಟ್ಟವರಲ್ಲ: ಗಂಡನನ್ನು ಕೊಂದ ಕೊಲೆಗಾರನಿಗೆ ಭಾರತೀಯ ಮಹಿಳೆಯ ಸಂದೇಶ

news18
Updated:August 8, 2018, 1:56 PM IST
ಕಂದು ಬಣ್ಣದವರೆಲ್ಲ ಕೆಟ್ಟವರಲ್ಲ: ಗಂಡನನ್ನು ಕೊಂದ ಕೊಲೆಗಾರನಿಗೆ ಭಾರತೀಯ ಮಹಿಳೆಯ ಸಂದೇಶ
ಸುನಯನಾ ದುಮಾಲಾ, ಶ್ರೀನಿವಾಸ್​ ಕುಚಿಬೋಟ್ಲಾ
news18
Updated: August 8, 2018, 1:56 PM IST
ನ್ಯೂಸ್ 18 ಕನ್ನಡ

ಅಮೆರಿಕ (ಆ.8): “ನನ್ನ ಪತಿ ಎಲ್ಲರಿಗೂ ಗೌರವ ನೀಡುತ್ತಿದ್ದರು, ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಕಂದು ಬಣ್ಣದವರೆಲ್ಲ ಕೆಟ್ಟವರಲ್ಲ,” ಎಂದು ಅಮೆರಿಕದಲ್ಲಿ ತನ್ನ ಪತಿಯನ್ನು ಕೊಂದ ಆರೋಪಿಗೆ ಭಾರತೀಯ ಮಹಿಳೆ ಸಂದೇಶ ನೀಡಿದ್ದಾರೆ. ಈ ಮೂಲಕ ವರ್ಣಬೇಧ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ.

ಅಮೆರಿಕದ ಕನ್ಸಾಸ್ ನಗರದ ಆಸ್ಟಿನ್ ಬಾರ್​ನಲ್ಲಿ 2017ರ ಫೆಬ್ರವರಿಯಲ್ಲಿ ಆ್ಯಡಂ ಪುರಿಂಟನ್ ಎಂಬಾತ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಸಾವನ್ನಪ್ಪಿ, ಮತ್ತೊಬ್ಬ ಭಾರತೀಯ ಅಲೋಕ್ ಮದಸಾನಿ ಹಾಗೂ ಅಮೆರಿಕದ ಐಯಾನ್ ಗ್ರಿಲೋಟ್ ಎಂಬುವವರು ಗಾಯಗೊಂಡಿದ್ದರು. ದಾಳಿ ನಂತರ ಆ್ಯಡಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಮೈ ಬಣ್ಣ, ರಾಷ್ಟ್ರೀಯತೆ ಮುಂದಿಟ್ಟುಕೊಂಡು ದಾಳಿ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಕೊಲೆ ಆರೋಪದ ಮೇಲೆ ಆ್ಯಡಂ ಪುರಿಂಟನ್​ಗೆ ಅಮೆರಿಕದ ಫೆಡರಲ್ ಕೋರ್ಟ್ ಮಂಗಳವಾರ (ಆ.7) ಸತತ ಮೂರು ಜೀವಾವಧಿ ಶಿಕ್ಷೆ (ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ ಪೆರೋಲ್ ಇಲ್ಲದೆ 15 ವರ್ಷ) ವಿಧಿಸಿದೆ. ನ್ಯಾಯಾಲಯದ ಆದೇಶ ಕೇಳಿದ ನಂತರ “ಕಂದು ಬಣ್ಣವರೆಲ್ಲ ಕೆಟ್ಟವರಲ್ಲ,” ಎಂದು ಶ್ರೀನಿವಾಸ್ ಪತ್ನಿ ಸುನಯನಾ ದುಮಾಲಾ, ಆರೋಪಿಗೆ ಹೇಳಿದ್ದಾರೆ.

“ನಾನು ಮತ್ತು ಶ್ರೀನು (ಶ್ರೀನಿವಾಸ್ ಕುಚಿಬೋಟ್ಲಾ) ನೂರಾರು ಕನಸು, ಆಕಾಂಕ್ಷೆಳೊಂದಿಗೆ ಅಮೆರಿಕಗೆ ಬಂದಿದ್ದೆವು. ಶ್ರೀನು ಪ್ರತಿಯೊಬ್ಬರು ಗೌರವ ನೀಡುತ್ತಿದ್ದರು. ಎಲ್ಲರ ಬಗ್ಗೆಯೂ ಕಾಳಜಿ ಮಾಡುತ್ತಿದ್ದರು. ಈಗ ನನ್ನ ಮತ್ತು ಶ್ರೀನು ಅಮೆರಿಕದ ಕನಸು ನುಚ್ಚುನೂರಾಗಿವೆ,” ಎಂದು ಸುನಯನಾ ದುಃಖ ವ್ಯಕ್ತಪಡಿಸಿದ್ದಾರೆ.

“ಒಂದು ವೇಳೆ ಆ್ಯಡಂ ಪುರಿಂಟಾನ್ ತನ್ನ ದ್ವೇಷವನ್ನು ಬದಿಗೊತ್ತಿ ಶ್ರೀನು ಜೊತೆ ಮಾತನಾಡಿದ್ದರೆ, ಆತ ತುಂಬಾ ಖುಷಿಯಿಂದ ತನ್ನ ಹಿನ್ನೆಲೆ ಹಂಚಿಕೊಳ್ಳುತ್ತಿದ್ದ ಮತ್ತು ಕಂದು ಬಣ್ಣದವರನ್ನು ಅನುಮಾನದಿಂದ ನೋಡಬೇಕಿಲ್ಲ ಅಥವಾ ಕೆಡುಕು ಬುದ್ಧಿ ಇಲ್ಲದವರು ಎಂಬುದನ್ನು ಮನದಟ್ಟು ಮಾಡಿಸುತ್ತಿದ್ದರು,” ಎಂದಿರುವ ಸುನಯನಾ ಮುಂದುವರೆದು, “ನಿಮ್ಮ ಸಮಯವನ್ನು ಸ್ವ ಶಿಕ್ಷಿತರಾಗಲು ನೀಡಿ, ಮುಗ್ಧ ಜನರನ್ನು ಕೊಲ್ಲುವ ಜನರಿಗೆ ಬುದ್ಧಿ ಹೇಳಿ,” ಎಂದು ಜನಾಂಗೀಯ ದ್ವೇಷ, ರಾಷ್ಟ್ರೀಯತೆಗಾಗಿ ಮತ್ತೊಬ್ಬ ಮನುಷ್ಯರನ್ನು ಕೊಲ್ಲುವ ಜನರಿಗೆ ಕಿವಿಮಾತು ಹೇಳಿದ್ದಾರೆ.

“ಬಣ್ಣ ಮತ್ತು ರಾಷ್ಟ್ರೀಯತೆ ಕಾರಣಕ್ಕಾಗಿ ಕುಚಿಬೋಟ್ಲಾ ಮತ್ತು ಮದಸಾನಿಯನ್ನು ಕೊಲೆ ಮಾಡಲಾಯಿತು,” ಎಂದು ಫೆಡರಲ್ ಕೋರ್ಟ್​ಗೆ ಆರೋಪಿ ಪುರಿಂಟಾನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ