Afghanistan Crisis: ಅಫ್ಫಾನಿಸ್ತಾನಕ್ಕೆ ಜಾಲಿ ಟ್ರಿಪ್ ಹೋಗಿದ್ನಂತೆ, ಫೋಟೋ ತಗೊಂಡಿದ್ದೇ ಬಂತು..ಈಗ ಅಲ್ಲೇ ಲಾಕ್!

Afghanistan: ತಾಲಿಬಾನ್ ರಾಜಧಾನಿ ಕಾಬೂಲ್ ತನ್ನ ಹಿಡಿತಕ್ಕೆ ತೆಗೆದುಕೊಂಡ ನಂತರ ಬ್ರಿಟಿಷ್‌ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ. ಯುಕೆಯ ಬರ್ಮಿಂಗ್‌ಹ್ಯಾಮ್‌ ನಿವಾಸಿ ಮೈಲ್ಸ್ ರೂಟ್ಲೆಡ್ಜ್ (21) ಲೌಬರೋ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಇವರು ಅಫ್ಘಾನಿಸ್ತಾನಕ್ಕೆ ರಜೆಯಲ್ಲಿ ತೆರಳಿದ್ದರು.

ಅಫಘನಿಸ್ತಾನದಲ್ಲಿ ಸಿಕ್ಕಿಕೊಂಡಿರುವ ವಿದ್ಯಾರ್ಥಿ

ಅಫಘನಿಸ್ತಾನದಲ್ಲಿ ಸಿಕ್ಕಿಕೊಂಡಿರುವ ವಿದ್ಯಾರ್ಥಿ

  • Share this:

ಸಾಹಸಗಳನ್ನು ಇಷ್ಟಪಡುವ ಬ್ರಿಟಿಷ್ ವಿದ್ಯಾರ್ಥಿ ಅಫ್ಘಾನಿಸ್ತಾನದಲ್ಲಿ (Afghanistan) ಉದ್ವಿಗ್ನ ಪರಿಸ್ಥಿತಿಯ ನಡುವೆ ಸಿಲುಕಿಕೊಂಡಿದ್ದಾರೆ. ಅವರು "ವಿಶ್ವದ ಕೆಟ್ಟ ಸ್ಥಳಗಳಿಗೆ" ಭೇಟಿ ನೀಡುವ ಭಾಗವಾಗಿ ಅಲ್ಲಿಗೆ ಪ್ರಯಾಣಿಸುತ್ತಿದ್ದರು. ತಾಲಿಬಾನ್ (Taliban) ಸ್ವಾಧೀನಕ್ಕೆ ಮುನ್ನ ಅವರು ಆ ದೇಶಕ್ಕೆ ತೆರಳಿದ್ದರು. ಆದರೆ, ತಾಲಿಬಾನ್ ರಾಜಧಾನಿ ಕಾಬೂಲ್ ತನ್ನ ಹಿಡಿತಕ್ಕೆ ತೆಗೆದುಕೊಂಡ ನಂತರ ಬ್ರಿಟಿಷ್‌ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ. ಯುಕೆಯ ಬರ್ಮಿಂಗ್‌ಹ್ಯಾಮ್‌ ನಿವಾಸಿ ಮೈಲ್ಸ್ ರೂಟ್ಲೆಡ್ಜ್ (21) ಲೌಬರೋ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಇವರು ಅಫ್ಘಾನಿಸ್ತಾನಕ್ಕೆ ರಜೆಯಲ್ಲಿ ತೆರಳಿದ್ದರು. ಆದರೆ, ಸ್ಥಳದಲ್ಲಿ ತುಂಬಾ ಜನ ಸತ್ತವರನ್ನು ನೋಡಿದ ನಂತರ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ದಕ್ಷಿಣ ಏಷ್ಯಾದ ದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುವ ಮೊದಲು ಅವರು ತಮ್ಮ ಪ್ರಯಾಣದ ಬಗ್ಗೆ ನಿಯಮಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅವರು ತಮ್ಮ ಸಾಮಾಜಿಕ ಮಾಧ್ಯಮ ಅನುಯಾಯಿಗಳಿಗೆ ವಿಶ್ವದ ಕೆಟ್ಟ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ ಎಂದು ವಿವರಿಸಿದ್ದರು.


ರೂಟ್ಲೆಡ್ಜ್ ಕಾಬೂಲ್‌ನ ವಿಶ್ವಸಂಸ್ಥೆಯ (ಯುಎನ್) ಸುರಕ್ಷಿತ ಮನೆಯಲ್ಲಿದ್ದಾರೆ ಎಂದು ಟೈಮ್ಸ್‌ ವರದಿ ಮಾಡಿದೆ. ಅವರು ಈ ವಾರವಷ್ಟೇ ಅಫ್ಘಾನಿಸ್ತಾನಕ್ಕೆ ತೆರಳಿದ್ದರು. ಸಾಮಾಜಿಕ ಮಾಧ್ಯಮದಲ್ಲಿ, ಅವರು ಮಾರುಕಟ್ಟೆಗಳ ಛಾಯಾಚಿತ್ರಗಳನ್ನು ಮತ್ತು ಅಫ್ಘಾನಿಸ್ತಾನದ ಸ್ಥಳೀಯ ಆಹಾರಗಳನ್ನು ಹಂಚಿಕೊಂಡಿದ್ದರು. ಈಗ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ತಾಲಿಬಾನಿಗಳು ಅಧಿಕಾರ ವಶಪಡಿಸಿಕೊಂಡಿದ್ದರಿಂದ ತಾನು "ಸಾವನ್ನು ಒಪ್ಪಿಕೊಂಡಿದ್ದೇನೆ", ಇಲ್ಲಿ "ಮೃತ ದೇಹಗಳು ಬೀದಿಗಳಲ್ಲಿ ಬಿದ್ದಿವೆ" ಎಂದೂ ಬ್ರಿಟಿಷ್‌ ವಿದ್ಯಾರ್ಥಿ ಹೇಳಿದ್ದರು.


ಅಲ್ಲದೆ, ಬ್ರಿಟಿಷ್ ರಾಯಭಾರ ಕಚೇರಿಯ ಅಧಿಕಾರಿಗಳು ತನ್ನ ಯಾವುದೇ ಫೋನ್ ಕರೆಗಳು ಅಥವಾ ಇಮೇಲ್‌ಗಳಿಗೆ ಪ್ರತಿಕ್ರಿಯಿಸಿಲ್ಲ ಮತ್ತು ತನ್ನನ್ನು ಅವರಿಂದ "ಕೈಬಿಡಲಾಗಿದೆ" ಎಂದು ರೂಟ್ಲೆಡ್ಜ್ ಹೇಳಿಕೊಂಡಿದ್ದರು. ರೂಟ್ಲೆಡ್ಜ್‌ ಈಗ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:Viral Video: ಓಡುತ್ತಿರುವ ಬಸ್, ರೈಲನ್ನು ಏರಿದಂತೆ ವಿಮಾನದ ರೆಕ್ಕೆ ಮೇಲೆಲ್ಲಾ ಹತ್ತುತ್ತಿದ್ದಾರೆ ಅಫಘನ್ನರು, ಹೇಗಾದ್ರೂ ಮಾಡಿ ದೇಶ ಬಿಟ್ಟು ಹೋಗಬೇಕಿದೆ!

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಭಾನುವಾರ ಪರಿಸ್ಥಿತಿ ಹದಗೆಟ್ಟ ನಂತರ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರಾರಿಯಾಗಲು ಬುರ್ಖಾ ವೇಷ ಧರಿಸುವಂತೆ ಒತ್ತಾಯಿಸಲಾಯಿತು. ವಿಮಾನ ನಿಲ್ದಾಣದ ಬಳಿ ಆತನನ್ನು ತಾಲಿಬಾನ್ ಭಯೋತ್ಪಾದಕರು ಎದುರಿಸಿದರು ಎಂದು ಹೇಳಲಾಗಿದೆ. ಆದರೂ, ವಿದ್ಯಾರ್ಥಿ ಯುಎನ್ ಸುರಕ್ಷಿತ ಮನೆಯನ್ನು ತಲುಪುವಲ್ಲಿ ಯಶಸ್ವಿಯಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.


ನಂತರ ಫೇಸ್‌ಬುಕ್ ಲೈವ್ ಸ್ಟ್ರೀಮ್‌ನಲ್ಲಿ, ರೂಟ್‌ಲೆಡ್ಜ್ ತನ್ನ ಪ್ರಯಾಣದ ಬಗ್ಗೆ ತನ್ನ ಫಾಲೋವರ್ಸ್‌ಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವು ಅನುಯಾಯಿಗಳು ಅವರ ಪ್ರಯಾಣದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಇತರರು ಅಪಾಯಕಾರಿ ಪ್ರಯಾಣಕ್ಕಾಗಿ ಬ್ರಿಟಿಷ್‌ ವಿದ್ಯಾರ್ಥಿಯನ್ನು ಟೀಕಿಸಿದರು. ಅವರ ಹಿತೈಷಿಗಳು ಈಗ ಅವರು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಪಾರಾಗುತ್ತಾರೆ ಎಂದು ಆಶಿಸುತ್ತಿದ್ದಾರೆ.


ಇದನ್ನೂ ಓದಿ: Afghanistan: ದೇಶ ಬಿಟ್ಟು ಜೀವ ಉಳಿಸೊಕೊಳ್ಳೋಕೆ ಒದ್ದಾಡ್ತಿದ್ದಾರೆ ಆಫ್ಘನ್ನರು, ಈಗ ಹೇಗಿದೆ ಅಲ್ಲಿನ ಪರಿಸ್ಥಿತಿ? ಚಿತ್ರಗಳಲ್ಲಿ ನೋಡಿ

ಇನ್ನು, ನ್ನ ಸುರಕ್ಷತೆಯ ಬಗ್ಗೆ ಕಾಳಜಿ ತೋರಿಸಿದಕ್ಕಾಗಿ ಮೈಲ್ಸ್ ರೂಟ್ಲೆಡ್ಜ್ ತಮ್ಮ ಫಾಲೋವರ್ಸ್‌ಗಳಿಗೆ ಧನ್ಯವಾದ ಅರ್ಪಿಸಿದರು.


ತಾಲಿಬಾನ್ ಉಗ್ರರು ಕಾಬೂಲ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರು ಅಫ್ಘಾನ್ ಸರ್ಕಾರದ ಮೇಲೆ ವಿಜಯವನ್ನು ಘೋಷಿಸಿದ್ದು, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಕೂಡ ದೇಶವನ್ನು ತೊರೆದಿದ್ದಾರೆ. ಈ ನಡುವೆ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷರಾಗುವ ಸಾಧ್ಯತೆ ಇದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: