• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Soldiers in Burqas: ಬುರ್ಕಾ ತೊಟ್ಟು ಅಫ್ಘಾನಿಸ್ತಾನ ತೊರೆದಿದ್ದ ಬ್ರಿಟನ್ ಸೈನಿಕರು.. ಡೆಡ್ಲಿ ಎಸ್ಕೇಪ್, ರೋಚಕ ಕಾರ್ಯಾಚರಣೆ!

Soldiers in Burqas: ಬುರ್ಕಾ ತೊಟ್ಟು ಅಫ್ಘಾನಿಸ್ತಾನ ತೊರೆದಿದ್ದ ಬ್ರಿಟನ್ ಸೈನಿಕರು.. ಡೆಡ್ಲಿ ಎಸ್ಕೇಪ್, ರೋಚಕ ಕಾರ್ಯಾಚರಣೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧರು ಮಹಿಳೆಯರ ವೇಷ ಧರಿಸುವ ತಂತ್ರವನ್ನು ರೂಪಿಸಿದರು.  ಬುರ್ಕಾ ತೊಟ್ಟಿದ್ದರಿಂದ ಯೋಧರು ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬಿಟ್ಟು ಪ್ರಯಾಣ ಮುಂದುವರೆಸಬೇಕಾಯಿತು.

  • Share this:

British soldiers escape story: ಅಮೆರಿಕಾ ಸೇನೆ ಬೆಂಬಲ ಹಿಂಪಡೆಯುತ್ತಲೇ ತಾಲಿಬಾನ್​​​​​ ಉಗ್ರರು ಅಫ್ಘಾನಿಸ್ತಾನ ಸರ್ಕಾರವನ್ನು ಹಿಮ್ಮೆಟ್ಟಿಸಿ ಇಡೀ ದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಅಫ್ಗಾನಿಸ್ತಾನ ತಾಲಿಬಾಲಿಗಳ ಕಪಿಮುಷ್ಠಿಗೆ ಬಂದೊಡನೆ ಸಾವಿರಾರು ಪ್ರಜೆಗಳು, ವಿದೇಶಿಗರು ತತಕ್ಷಣಕ್ಕೆ ದೇಶ ಹೊರೆಯಲು ಮುಂದಾಗಿದ್ದರು. ಸಿಕ್ಕ ವಿಮಾನ ಹತ್ತಿ ಅಫ್ಘಾನಿಸ್ತಾನ ತೊರೆದ ದೃಶ್ಯ ನಮ್ಮ ಕಣ್ಣ ಮುಂದೆಯೇ ಇದೆ. ಇನ್ನು ಅಮೆರಿಕಾ ಸೇನೆ ಕೂಡ ಆ.31ರೊಳಗೆ ಅಫ್ಘಾನಿಸ್ತಾನವನ್ನು ಬಿಟ್ಟಿದೆ. ಆದರೆ ಅಮೆರಿಕಾದೊಂದಿಗೆ ಸಹಭಾಗಿತ್ವ ಹೊಂದಿದ್ದ ಬ್ರಿಟನ್​​ ಸೇನಾ ಪಡೆ ಅಫ್ಘಾನ್​​ ತೊರೆದ ರೋಚಕ ಸಂಗತಿ ಈಗ ಬಯಲಾಗಿದೆ.


ಕರೆದೊಯ್ಯಲು ಹೆಲಿಕಾಪ್ಟರ್​ ಬರಲಿಲ್ಲ..! 


ತಾಲಿಬಾನಿಗಳು ಅಧಿಕಾರದ ಚುಕ್ಕಾಣಿ ಹಿಡಿದಾಗ ಬ್ರಿಟಿಷ್ ಸ್ಪೆಷಲ್ ಏರ್ ಸರ್ವಿಸ್ (SAS- British Special Air Service) ಸೇನಾ ತಂಡವು ದಕ್ಷಿಣ ಅಫ್ಘಾನಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿತ್ತು. ತಾಲಿಬಾನಿಗಳ ಕೈ ಮೇಲಾಗುತ್ತಿದ್ದಂತೆ ಬ್ರಿಟನ್​ ಸೇನಾ ತಂಡಕ್ಕೆ ದೇಶ ತೊರೆಯುವಂತೆ ಆದೇಶಿಸಲಾಗಿತ್ತು. ಆದರೆ ಅವರನ್ನು ಕರೆದೊಯ್ಯಲು ಯಾವುದೇ ಹೆಲಿಕಾಪ್ಟರ್​ ಬರುವ ಪರಿಸ್ಥಿತಿ ಇರಲಿಲ್ಲ. ಪ್ರತಿಯೊಂದು ಚೆಕ್​ಪೋಸ್ಟ್​ಗಳಲ್ಲೂ ತಾಲಿಬಾನಿ ಉಗ್ರರು ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸುತ್ತಿದ್ದರು. ತಾಲಿಬಾನಿಗಳ ಕಣ್ತಪ್ಪಿಸಿ ಯಾವುದೇ ಅಪಾಯವಿಲ್ಲದೆ ದೇಶ ತೊರೆಯುವುದು ನಿಜಕ್ಕೂ ಕಷ್ಟವಾಗಿತ್ತು. ಬ್ರಿಟನ್​​ ಸೇನೆ ಎಂದು ಗೊತ್ತಾದರೆ ಪ್ರಾಣಕ್ಕೆ ಸಂಚಕಾರ ಇತ್ತು.


ಬುರ್ಕಾ ತೊಟ್ಟು ಗನ್​​-ಬುಲೆಟ್​ ತ್ಯಜಿಸಿದರು..! 


ಇದನ್ನು ಅರಿತ ಬ್ರಿಟನ್​​ ಸೇನಾ ಪಡೆ ದೇಶ ತೊರೆಯಲು ಮಾರುವೇಷದ ಮೋರೆ ಹೋಗಿತ್ತು.  ದಿ ಡೈಲಿ ಸ್ಟಾರ್ ವರದಿ ಪ್ರಕಾರ ಬ್ರಿಟನ್​​ ಯೋಧರು ಬುರ್ಕಾ ತೊಟ್ಟು ತಾಲಿಬಾನಿಗಳ ಕಣ್ತಪ್ಪಿಸಿ, ಯಶಸ್ವಿಯಾಗಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಮೊದಲಿಗೆ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧರು ಮಹಿಳೆಯರ ವೇಷ ಧರಿಸುವ ತಂತ್ರವನ್ನು ರೂಪಿಸಿದರು.  ಬುರ್ಕಾ ತೊಟ್ಟಿದ್ದರಿಂದ ಯೋಧರು ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬಿಟ್ಟು ಪ್ರಯಾಣ ಮುಂದುವರೆಸಬೇಕಾಯಿತು.


ಅಡಿ ಅಡಿಗೂ ತಾಲಿಬಾನಿಗಳ ಚೆಕ್ಕಿಂಗ್..!


ಸೈನಿಕರು ಬುರ್ಖಾ ಧರಿಸಿ 5 ಟ್ಯಾಕ್ಸಿಗಳಲ್ಲಿ ಕಾಬೂಲ್ ವರೆಗೆ ಅಪಾಯಕಾರಿ ಪ್ರಯಾಣವನ್ನು ಆರಂಭಿಸಿದರು. ಅಫ್ಘಾನಿಸ್ತಾನದ ಭಯೋತ್ಪಾದನಾ ನಿಗ್ರಹ ಪೊಲೀಸರು ಎಸ್‌ಎಎಸ್ ತಂಡಕ್ಕೆ ಬುರ್ಖಾಗಳನ್ನು ಒದಗಿಸಿದ್ದಾರೆ ಎಂದು ವರದಿಯಾಗಿದೆ. ತಾಲಿಬಾನಿಗಳಿಗೆ ಅನುಮಾನ ಬರದಂತೆ ಅಫ್ಘಾನ್​ ಧ್ವಜವನ್ನು ತಮ್ಮ ಮಾರುವೇಷದಲ್ಲಿ ಬಳಸಿಕೊಂಡಿದ್ದರು. ಅಫ್ಘಾನ್ ವಿಶೇಷ ಪಡೆಗಳ ಸೈನಿಕರು ಎಸ್‌ಎಎಸ್ ತಂಡದ ಜೊತೆಯಲ್ಲಿ ತಾಲಿಬಾನ್ ಹೋರಾಟಗಾರರೊಂದಿಗೆ ಚೆಕ್‌ಪೋಸ್ಟ್‌ಗಳಲ್ಲಿ ಮಾತನಾಡುತ್ತಿದ್ದರು, ಕ್ಯಾಬ್‌ಗಳು ಮಹಿಳೆಯರಿಂದ ತುಂಬಿವೆ ಎಂದು ಮನವೊಲಿಸಿದರು. ಇಡೀ ಕಾರ್ಯಾಚರಣೆಯು ಕೆಲವು ಅಪಾಯಕಾರಿ ಕ್ಷಣಗಳನ್ನು ಕಂಡಿತು ಆದರೆ ತಾಲಿಬಾನ್ ಹೋರಾಟಗಾರರು ಬುರ್ಖಾ ಧರಿಸಿದ್ದ ಮಹಿಳೆಯರನ್ನು ಪರಿಶೀಲನೆಗೆ ಒಳಪಡಿಸಲಿಲ್ಲ. ಅದರಿಂದಲೇ ಮಾರುವೇಷದ ಪ್ಲಾನ್​ ಯಶಸ್ವಿಯಾಗಿತು.


ಇದನ್ನೂ ಓದಿ: Afghanistan- ಪಂಜಶೀರ್ ಕೂಡ ತಾಲಿಬಾನ್ ವಶಕ್ಕೆ; ಪದಗ್ರಹಣ ಕಾರ್ಯಕ್ರಮಕ್ಕೆ ಪಾಕಿಸ್ತಾನ, ಚೀನಾಗೆ ಆಹ್ವಾನ


ಅಮೆರಿಕಾ ಸೇನೆಗೇ ನಂಬಲು ಆಗಲಿಲ್ಲ..! 


SAS ಸೈನಿಕರು ಕ್ಯಾಬ್ ಗಳ ಮೂಲಕ ಬುರ್ಖಾದಲ್ಲೇ ವಿಮಾನ ನಿಲ್ದಾಣ ತಲುಪಿದರು. ಎಲ್ಲಾ ತಾಲಿಬಾನ್ ಚೆಕ್‌ಪೋಸ್ಟ್‌ಗಳ ಅಪಾಯವನ್ನು ಯಶಸ್ವಿಯಾಗಿ ದಾಟಿ ತಂಡವು ಏರ್‌ಪೋರ್ಟ್‌ ಗೇಟ್‌ಗೆ ಬಂದಿತು. ಅಲ್ಲಿ ಇವರಿಗಾಗಿ ಅಮೆರಿಕನ್ ಪಡೆಗಳು ಕಾಯುತ್ತಿದ್ದವು.  ಎಸ್‌ಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಸಾರ್ಜೆಂಟ್ ಮೇಜರ್ ಅವರು ಯುಎಸ್ ಸೈನಿಕರಲ್ಲಿ  ಬಳಿ ಬಂದು  ಬುರ್ಕಾದಲ್ಲಿರುವವರು ಬ್ರಿಟಿಷ್ ವಿಶೇಷ ಪಡೆಗಳ ಸೈನಿಕರು ಎಂದು ವಿವರಿಸಿದ್ದರು.


ಅಮೆರಿಕನ್ನರಿಗೆ ತಾನು ಮೊದಲ ಬಾರಿಗೆ ಕೇಳಿದ್ದನ್ನು ನಂಬಲು ಸಾಧ್ಯವಾಗಲಿಲ್ಲ, ಮತ್ತೊಮ್ಮೆ ಹೇಳು ಎಂದು ಕೇಳಿದರು.  ತಮ್ಮ ನಿಜವಾದ ಗುರುತುಗಳನ್ನು ಬಹಿರಂಗಪಡಿಸಿದ ನಂತರ, ವಿಶೇಷ ತಂಡವನ್ನು US ಸಿಬ್ಬಂದಿ ಒಂದು ಸುರಕ್ಷಿತ ಕೋಣೆಗೆ ಕರೆದೊಯ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Published by:Kavya V
First published: