ಬ್ರಹ್ಮಾಂಡದ ಗುಟ್ಟು ಬಿಚ್ಚಿಟ್ಟ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನ


Updated:March 14, 2018, 11:12 AM IST
ಬ್ರಹ್ಮಾಂಡದ ಗುಟ್ಟು ಬಿಚ್ಚಿಟ್ಟ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನ

Updated: March 14, 2018, 11:12 AM IST
ನ್ಯೂಸ್ 18 ಕನ್ನಡ

ಬ್ರಹ್ಮಾಂಡದ ಹಲವಾರು ರಹಸ್ಯಗಳನ್ನು ಬಿಚ್ಚಿಟ್ಟಿದ್ದ ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್(76) ಕೇಂಬ್ರಿಡ್ಜ್ ನ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇವರ ನಿಧನ ವಿಜ್ಞಾನ ಲೋಕಕ್ಕೆ ನಿಜಕ್ಕೂ ಆಘಾತ ತಂದಿದೆ.

40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದ್ದ ಸ್ಟೀಫನ್ ಹಾಕಿಂಗ್, 1942ರ ಜನವರಿ 8 ರಂದು ಜನಿಸಿದ್ದರು. ಸ್ಟೀಫನ್ ಓರ್ವ ಬ್ರಿಟಿಷ್ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದರು.

ಕ್ವಾಂಟಮ್ ಗುರುತ್ವಾಕರ್ಷಣೆ, ಬ್ಲ್ಯಾಕ್ ಸ್ಪಾಟ್ ಕುರಿತಾಗಿ ನೀಡಿದ ವಿವರಣೆಯಿಂದಾಗಿ ಹಾಕಿಂಗ್ ಪ್ರಸಿದ್ಧಿ ಗಳಿಸಿದ್ದರು. ವಿಕಲಾಂಗರಾಗಿದ್ದರೂ ಜೀವನದ ಕೊನೆಯವರೆಗೂ ಸಾಧನೆ ಮಾಡಿದ ಅಪರೂಪದ ವಿಜ್ಞಾನಿ, ಈ ಮೂಲಕ ಇವರು ವಿಶ್ವದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದಾರೆ. ಇಂತಹ ದಿಗ್ಗಜನನ್ನು ಇಂದು ಜಗತ್ತು ಕಳೆದುಕೊಂಡಿದೆ ಆದರೂ ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಉಪಯೋಗವಾಗಲಿದೆ.
First published:March 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...