Rishi Sunak: ದಾಂಪತ್ಯ ಜೀವನದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ರಿಷಿ ಸುನಕ್!

ರಿಷಿ ಸುನಕ್ ಅವರ ಕುಟುಂಬ

ರಿಷಿ ಸುನಕ್ ಅವರ ಕುಟುಂಬ

ಸಾಮಾನ್ಯವಾಗಿ ಜನರಿಗೆ ಈ ಸಮಾಜದಲ್ಲಿ ಉನ್ನತ ಸ್ಥಾನಗಳಲ್ಲಿರುವವರ ಬಗ್ಗೆ ತಿಳಿದುಕೊಳ್ಳಬೇಕು ಅಂತ ತುಂಬಾನೇ ಕುತೂಹಲ ಇರುತ್ತದೆ. ರಿಷಿ ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ ಅವರ ಹೆಂಡತಿ ಮತ್ತು ವೈವಾಹಿಕ ಜೀವನದ ಬಗ್ಗೆ ಏನೆಲ್ಲಾ ಹೇಳಿಕೊಂಡಿದ್ದಾರೆ ನೀವೇ ನೋಡಿ.

  • Share this:

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ (Rishi Sunak) ಅವರ ಹೆಂಡತಿ ಅಕ್ಷತಾ ಮೂರ್ತಿ (Akshata Murthy) ಅವರು ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಮತ್ತು ಸುಧಾಮೂರ್ತಿಯವರ ಮಗಳು ಅಂತ ಬಹುತೇಕರಿಗೆ ಗೊತ್ತಿದೆ. ಸಾಮಾನ್ಯವಾಗಿ ಜನರಿಗೆ ಈ ಸಮಾಜದಲ್ಲಿ ಉನ್ನತ ಸ್ಥಾನಗಳಲ್ಲಿರುವವರ ಬಗ್ಗೆ ತಿಳಿದುಕೊಳ್ಳಬೇಕು ಅಂತ ತುಂಬಾನೇ ಕುತೂಹಲ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರಿಷಿ ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ (Interview) ಅವರ ಹೆಂಡತಿ ಮತ್ತು ವೈವಾಹಿಕ ಜೀವನದ (Married Life) ಬಗ್ಗೆ ಏನೆಲ್ಲಾ ಹೇಳಿಕೊಂಡಿದ್ದಾರೆ ನೀವೇ ನೋಡಿ.


ಅಕ್ಷತಾ ಮೂರ್ತಿ ಬಗ್ಗೆ ಏನು ಹೇಳಿದ್ರು ರಿಷಿ 
'ದಿ ಸಂಡೇ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಚಾನ್ಸಲರ್ ತಮ್ಮ ಕೌಟುಂಬಿಕ ಜೀವನದ ಬಗ್ಗೆ ಕೆಲವು ಮಾಹಿತಿಗಳನ್ನು ಜನರ ಮುಂದೆ ತೆರೆದಿಟ್ಟರು. ತಮ್ಮ ಹೆಂಡತಿಯ ಬಗ್ಗೆ ಮಾತಾಡುತ್ತಾ ರಿಷಿ ಅವರು "ನಾನು ನಂಬಲಾಗದಷ್ಟು ಅಚ್ಚುಕಟ್ಟಾದವನು ಮತ್ತು ಅವಳು ತುಂಬಾನೇ ಗಲಿಬಿಲಿಗೊಳ್ಳುವವಳು. ನಾನು ಹೆಚ್ಚು ಸಂಘಟಿತನಾಗಿದ್ದೇನೆ, ಆದರೆ ಅವಳು ಇದಕ್ಕೆ ವಿರುದ್ಧವಾಗಿದ್ದಾಳೆ" ಎಂದು ಸುನಕ್ ಹೇಳಿದರು.


ಎಲ್ಲೆಡೆ ಬಟ್ಟೆ, ಬೂಟು!
ಇದನ್ನು ಹೇಳಿದ್ದಕ್ಕಾಗಿ ಅವಳು ನನ್ನನ್ನು ಖಂಡಿತವಾಗಿಯೂ ಪ್ರೀತಿಸುವುದಿಲ್ಲ. ಆದರೆ ನಾನು ನಿಮ್ಮೊಂದಿಗೆ ಪ್ರಾಮಾಣಿಕವಾಗಿರುತ್ತೇನೆ. ಅವಳು ಮನೆಯಲ್ಲಿ ಎಲ್ಲೆಡೆ ಬಟ್ಟೆಗಳು ಮತ್ತು ಬೂಟುಗಳನ್ನು ಹಾಗೆಯೇ ಬಿಸಾಡಿರುತ್ತಾಳೆ ಎಂದು ಅವರು ಹೇಳಿದರು. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದಾಗ ಭೇಟಿಯಾದ ಈ ಜೋಡಿ 2006ರಲ್ಲಿ ಬೆಂಗಳೂರಿನಲ್ಲಿ ಮದುವೆಯಾದರು.


ಭಾರತೀಯ ಮೂಲದ ಪೋಷಕರಿಗೆ ಸೌತಾಂಪ್ಟನ್ ನಲ್ಲಿ ಜನಿಸಿದ ಸುನಕ್, ಸ್ಟ್ಯಾನ್ ಫೋರ್ಡ್ ನಲ್ಲಿ ಓದುತ್ತಿದ್ದಾಗ ಅಕ್ಷತಾ ಅವರ ಪಕ್ಕದಲ್ಲೇ ಕೂರಬೇಕೆನ್ನುವ ಆಸೆಯಿಂದ ತಮ್ಮ ತರಗತಿಯ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡಿದ್ದರು ಎಂದು ಸುನಕ್ ಅವರು ಒಪ್ಪಿಕೊಳ್ಳುತ್ತಾರೆ.


ಮಕ್ಕಳು ಜನಿಸಿದಾಗಿನ ಸಮಯವನ್ನು ನೆನಪಿಸಿಕೊಂಡ ರಿಷಿ
ಈ ದಂಪತಿಗೆ 11 ವರ್ಷದ ಕೃಷ್ಣ ಮತ್ತು 9 ವರ್ಷದ ಅನೌಷ್ಕಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಮತ್ತು ಸುನಕ್ ಅವರು ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡುವುದನ್ನು ತುಂಬಾನೇ ಇಷ್ಟ ಪಡುತ್ತಾರೆ. ಅವರ ಮಕ್ಕಳು ಜನಿಸಿದ್ದಾಗಿನ ಸಮಯವನ್ನು ನೆನಪಿಸಿಕೊಂಡ ರಿಷಿ ಅವರು ನಾನು ತುಂಬಾ ಅದೃಷ್ಟಶಾಲಿ, ಏಕೆಂದರೆ ನನ್ನ ಮಕ್ಕಳು ಹುಟ್ಟಿದಾಗ, ನಾನು ಇತರರೊಂದಿಗೆ ನನ್ನ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದೆ, ಆದ್ದರಿಂದ ನಾನು ಸಮಯವನ್ನು ಹೊಂದಿದ್ದೆ ಮತ್ತು ಆದ್ದರಿಂದ ನಾನು ನನ್ನ ಮಕ್ಕಳಿಗೆ ತುಂಬಾ ಹತ್ತಿರದಲ್ಲಿದ್ದೆ. ನಾನು ಆ ಸಮಯದ ಪ್ರತಿ ಕ್ಷಣವನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Rishi Sunak: ಕುಟುಂಬವೇ ನನ್ನ ಶಕ್ತಿ ಎಂದ ರಿಷಿ ಸುನಕ್! ಪ್ರಚಾರ ರ್‍ಯಾಲಿಯಲ್ಲಿ ಅಕ್ಷತಾ ಮೂರ್ತಿ ಭಾಗಿ


ಅಕ್ಷತಾ ಮೂರ್ತಿ ಅವರ ತೆರಿಗೆಯ ವಿಷಯದ ವಿವಾದದ ಹಿನ್ನೆಲೆಯಲ್ಲಿ, ಸುನಕ್ ಅವರ ಕುಟುಂಬವು ಏಪ್ರಿಲ್ ನಲ್ಲಿ ಚಾನ್ಸೆಲರ್ ಬಳಸುತ್ತಿದ್ದ ಅಧಿಕೃತ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ನಲ್ಲಿದ್ದ ಫ್ಲ್ಯಾಟ್ ನಿಂದ ಹೊರ ಬಂದರು. ನಂತರ ಅವರು ಯುಕೆಯಲ್ಲಿನ ಇನ್ಫೋಸಿಸ್ ಕಂಪನಿಯ ಷೇರುಗಳಿಂದ ತಮ್ಮ ಆದಾಯದ ಮೇಲೆ ತೆರಿಗೆ ಪಾವತಿಸಲು ನಿರಾಕರಿಸಿದರು. ಈಗ, ಉನ್ನತ ಹುದ್ದೆಯ ಸ್ಪರ್ಧಿಯಾಗಿ, ಮಾಜಿ ಹಣಕಾಸು ಸಚಿವರಾದ ಸುನಕ್ ಅವರು ಸೆಪ್ಟೆಂಬರ್ 5 ರಂದು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾದರೆ ಮತ್ತು ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರೆ ಕುಟುಂಬವು ಡೌನಿಂಗ್ ಸ್ಟ್ರೀಟ್ ಗೆ ಮತ್ತೆ ಮರಳುತ್ತದೆ ಎಂದು ಪತ್ರಿಕೆಗೆ ತಿಳಿಸಿದರು.


ಈ ನಿರ್ಧಾರಕ್ಕೂ ತೆರಿಗೆಯ ವಿಷಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಹಿರಿಯ ಮಗಳು ತನ್ನ ಪ್ರಾಥಮಿಕ ಶಾಲೆಯ ಕೊನೆಯ ಅವಧಿಯಲ್ಲಿದ್ದಳು ಮತ್ತು ಪ್ರತಿದಿನ ಒಬ್ಬಳೇ ಶಾಲೆಗೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂಬ ಅಂಶದೊಂದಿಗೆ ಮನೆಯನ್ನು ಖಾಲಿ ಮಾಡಬೇಕಾಯಿತು ಎಂದು ರಿಷಿ ಅವರು ಹೇಳಿದರು.


ಇವರು ಪಟ್ಟ ಶ್ರಮದ ಪ್ರತಿಫಲವಂತೆ ಇದು
ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರನ್ನು ನಾಯಕತ್ವದ ಓಟದಲ್ಲಿ ಸೋಲಿಸಲು ಮತ್ತು ಕನ್ಸರ್ವೇಟಿವ್ ಪಕ್ಷದ ಸದಸ್ಯರ ಮತಗಳನ್ನು ಗೆಲ್ಲುವ ಪ್ರಚಾರದ ಹಾದಿಯಲ್ಲಿ ನೀಡಿರುವ ಅನೇಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅದರಲ್ಲೂ ಸುನಕ್ ದಂಪತಿಗಳು ಭಾರಿ ಶ್ರೀಮಂತರು ಎಂಬ ಹೇಳಿಕೆಗಳಿಗೆ, ಸುನಕ್ ದೃಢವಾಗಿ ಈ ದೇಶದಲ್ಲಿ ನಾವು ಜನರನ್ನು ಅವರ ಚಾರಿತ್ರ್ಯ ಮತ್ತು ಅವರ ಕ್ರಿಯೆಗಳಿಂದ ನಿರ್ಣಯಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಅವರ ಬ್ಯಾಂಕ್ ಖಾತೆಯಲ್ಲಿ ಏನಿದೆ ಎಂಬುದರ ಮೇಲೆ ಅಲ್ಲ. ನಾನು ಇಂದು ಅದೃಷ್ಟಶಾಲಿ ಅಂತ ಭಾವಿಸುತ್ತೇನೆ, ಏಕೆಂದರೆ ನಾನು ಈ ರೀತಿ ಬೆಳೆಯಲಿಲ್ಲ. ನಾನು ಇಂದು ಪಡೆದುದ್ದಕ್ಕೆ ತುಂಬಾನೇ ಶ್ರಮ ಪಟ್ಟಿದ್ದೇನೆ, ನಾನೊಬ್ಬನೇ ಅಲ್ಲ ನನ್ನ ಕುಟುಂಬವು ಸಹ ಕಷ್ಟಪಟ್ಟು ಕೆಲಸ ಮಾಡಿದೆ ಮತ್ತು ಅದಕ್ಕಾಗಿಯೇ ನಾನು ಈ ಕೆಲಸವನ್ನು ಮಾಡಲು ಬಯಸುತ್ತೇನೆ ಎಂದು ಹೇಳಿದರು.


ಇವರ ಅಭಿಯಾನದ ಪ್ರಮುಖ ವಿಷಯವೇ ಇದಂತೆ 
ಅವರ ಅಭಿಯಾನದ ಬಗ್ಗೆ ಮಾತನಾಡಿದ ಸುನಕ್ ಅವರು, ಏರುತ್ತಿರುವ ಹಣದುಬ್ಬರದಿಂದಾಗಿ ಜೀವನ ವೆಚ್ಚದ ಬಿಕ್ಕಟ್ಟು ನನ್ನ ಅಭಿಯಾನದ ಪ್ರಮುಖ ವಿಷಯಗಳಲ್ಲಿ ಒಂದು, ಬ್ಯಾಂಕ್ ಆಫ್ ಇಂಗ್ಲೆಂಡ್ ನಿಂದ ಆರ್ಥಿಕ ಹಿಂಜರಿತದ ಮುನ್ಸೂಚನೆಗಳ ನಂತರ ಜನರು ಆರ್ಥಿಕತೆ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ ಮತ್ತು ಕುಸಿತದ ಬೆದರಿಕೆಯನ್ನು ಎದುರಿಸಲು ಸಕಾರಾತ್ಮಕ ವಾಸ್ತವಿಕತೆಯನ್ನು ನೋಡಲು ಬಯಸುತ್ತಾರೆ ಎಂದು ಒಪ್ಪಿಕೊಂಡರು.


ಇದನ್ನೂ ಓದಿ: Rishi Sunak: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​​ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಪಟ್ಟ?

top videos


    ದೇಶವನ್ನು ಸವಾಲಿನ ಅವಧಿಯಿಂದ ಹೊರ ತರಲು ಮತ್ತು ನಾವು ಮತ್ತೊಂದು ಬದಿಯಲ್ಲಿ ಬಲಶಾಲಿಯಾಗಿ ಹೊರ ಹೊಮ್ಮುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ನನಗೆ ಏನು ಬೇಕೋ ಅದು ನನ್ನ ಬಳಿ ಇದೆ. ನಾನು ಈಗಾಗಲೇ ಅದನ್ನು ಮಾಡಿದ್ದೇನೆ ಮತ್ತು ನಾನು ಅದನ್ನು ಮತ್ತೆ ಮಾಡಬಹುದು ಮತ್ತು ಜನರು ಅದನ್ನು ಮಾಡಲು ನನ್ನನ್ನು ನಂಬಬಹುದು" ಎಂದು ಅವರು ಘೋಷಿಸಿದರು.

    First published: